Mysore
27
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬಂಗಾರಪೇಟೆ ಬಳಿ ಹಳಿ ತಪ್ಪಿದ ಚೆನ್ನೈ-ಬೆಂಗಳೂರು ಎಕ್ಸ್​ಪ್ರೆಸ್​ ರೈಲು

ಚೆನ್ನೈ : ಬೆಂಗಳೂರು ಎಕ್ಸ್‌ಪ್ರೆಸ್​ ರೈಲು ಸೋಮವಾರ ಹಳಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಕೆಎಸ್‌ಆರ್ ಬೆಂಗಳೂರು ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್‌ ರೈಲು ಬಂಗಾರಪೇಟೆ ಬಳಿ ಬೆಳಿಗ್ಗೆ 11.29 ರ ಸುಮಾರಿಗೆ ಹಳಿ ತಪ್ಪಿತ್ತು. ಕೋಲಾರದ ಬಂಗಾರ ಪೇಟೆಯಿಂದ 20 ಕಿ.ಮೀ ದೂರದಲ್ಲಿ ಘಟನೆ ನಡೆದಿದೆ.

ನೈಋತ್ಯ ರೈಲ್ವೆಯ (SWR) ಪತ್ರಿಕಾ ಹೇಳಿಕೆಯ ಪ್ರಕಾರ, ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ದುರಸ್ತಿ ಕಾರ್ಯ ನಡೆಯುತ್ತಿದೆ. ರೈಲು 22625 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಕೆಎಸ್‌ಆರ್ ಬೆಂಗಳೂರು ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ಬೆಂಗಳೂರು ವಿಭಾಗದ ಬಿಸನಟ್ಟಂ ಬಳಿ, ಜೋಲಾರ್‌ಪೆಟ್ಟೈ ಜೂನಿಂದ 50 ಕಿಮೀ ದೂರದಲ್ಲಿ ಹಳಿತಪ್ಪಿತು.

ಚೆನ್ನೈನಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವು ಸ್ಥಳಕ್ಕೆ ಧಾವಿಸುತ್ತಿದ್ದು, ಜೋಲಾರ್‌ಪೆಟ್ಟೈ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ತಲುಪಿದ್ದಾರೆ ಎಂದು ಚೆನ್ನೈ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ಎ ಏಳುಮಲೈ ಹೇಳಿದರು.

ಪ್ರಯಾಣಿಕರಿಗೆ ಆಹಾರ ಮತ್ತು ಸಾರಿಗೆಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡುವುದರ ಮೂಲಕ ಕಾಳಜಿ ವಹಿಸಲಾಗುತ್ತಿದೆ. ಅಪಘಾತ ಪರಿಹಾರ ರೈಲುಗಳು ಮತ್ತು ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸುವುದರೊಂದಿಗೆ ಪುನಃಸ್ಥಾಪನೆ ಕಾರ್ಯಗಳು ಸಹ ಭರದಿಂದ ಸಾಗುತ್ತಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ