Mysore
28
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾ ‘ತೇಜಸ್’ ಸಾವು: 5 ತಿಂಗಳಲ್ಲಿ 7ನೇ ಸಾವು

ನವದೆಹಲಿ: ದಕ್ಷಿಣ ಆಫ್ರಿಕಾದಿಂದ ತಂದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಇರಿಸಲಾಗಿದ್ದ ಮತ್ತೊಂದು ಚಿರತೆ ತೇಜಸ್ ಸಾವನ್ನಪ್ಪಿದೆ. ತೇಜಸ್‌ಗೂ ಮೊದಲು, ಮೂರು ಚಿರತೆಗಳು ಮತ್ತು ಮೂರು ಮರಿಗಳು ಈಗಾಗಲೇ ಉದ್ಯಾನದಲ್ಲಿ ಪ್ರಾಣ ಕಳೆದುಕೊಂಡಿವೆ.

ಸಂಯೋಗದ ಸಮಯದಲ್ಲಿ ಹೆಣ್ಣು ಚಿರತೆ ನಭಾ ಜೊತೆಗಿನ ಘರ್ಷಣೆಯಲ್ಲಿ ತೇಜಸ್‌ಗೆ ಗಾಯಗಳಾಗಿವೆ. ಚಿಕಿತ್ಸೆ ಪಡೆಯುವ ಸಾವನ್ನಪ್ಪಿದೆ. ವನ್ಯಜೀವಿ ಅಧಿಕಾರಿಗಳು ತೇಜಸ್ ಅನ್ನು ಆವರಣದ ಸಂಖ್ಯೆ 6 ರಲ್ಲಿ ಒಂಟಿಯಾಗಿ ಇರಿಸಿದ್ದರು. ಹೆಣ್ಣು ಚಿರತೆ ನಭಾಳನ್ನು ಹತ್ತಿರದ ಆವರಣ ಸಂಖ್ಯೆ 5 ರಲ್ಲಿ ಇರಿಸಿದ್ದರು. ಇವುಗಳ ಸಂಯೋಗವನ್ನು ಸುಲಭಗೊಳಿಸುವ ಪ್ರಯತ್ನದಲ್ಲಿ ಆವರಣದ ಸಂಖ್ಯೆ 5 ರ ಗೇಟ್‌ನ್ನು ತೆರೆದರು. ಈ ಸಂಯೋಗದ ವೇಳೆ ತೇಜಸ್‌ಗೆ ಗಂಭೀರ ಗಾಯಗಳಾಗಿತ್ತು.

ಮಂಗಳವಾರ ಬೆಳಗ್ಗೆ 11 ಗಂಟೆಗೆ ಕುನೊ ರಾಷ್ಟ್ರೀಯ ಉದ್ಯಾನವನದ ಮೇಲ್ವಿಚಾರಣಾ ತಂಡದ ಸದಸ್ಯರು ತೇಜಸ್‌ನ ಕುತ್ತಿಗೆಯ ಮೇಲ್ಭಾಗದಲ್ಲಿ ಗಾಯದ ಗುರುತುಗಳನ್ನು ಗಮನಿಸಿದರು. ತೇಜಸ್‌ನನ್ನು ಸ್ಥಳದಲ್ಲೇ ಪರೀಕ್ಷಿಸಿದ ವನ್ಯಜೀವಿ ವೈದ್ಯರು ಗಾಯಗಳು ತೀವ್ರವಾಗಿರುವುದನ್ನು ಪತ್ತೆ ಹಚ್ಚಿ, ಚಿಕಿತ್ಸೆಗೆ ಸಿದ್ಧತೆ ನಡೆಸಿದ್ದಾರೆ. ದುರದೃಷ್ಟವಶಾತ್, ಸರಿಸುಮಾರು ಮಧ್ಯಾಹ್ನ 2:00 ಗಂಟೆಗೆ ತೇಜಸ್ ಮೃತಪಟ್ಟಿದೆ.

ಎರಡು ಚಿರತೆಗಳ ಸೇರ್ಪಡೆ ಮತ್ತು ಈಗ ತೇಜಸ್ ಸಾವಿನೊಂದಿಗೆ, ಕಾಡಿನಲ್ಲಿ ಚೀತಾಗಳ ಒಟ್ಟು ಸಂಖ್ಯೆ 11 ಕ್ಕೆ ತಲುಪಿದೆ. ಕೆಎನ್‌ಪಿಯಲ್ಲಿ ಪ್ರಭಾಷ್ ಮತ್ತು ಪಾವಕ್ ಎಂಬ ಎರಡು ಗಂಡು ಚಿರತೆಗಳನ್ನು ಕಾಡಿಗೆ ಬಿಡಲಾಯಿತು ಎಂದು ಶಿಯೋಪುರದ ವಿಭಾಗೀಯ ಅರಣ್ಯಾಧಿಕಾರಿ ಪಿ ಕೆ ವರ್ಮಾ ತಿಳಿಸಿದರು.

ಭಾರತದಲ್ಲಿ ಚೀತಾ ಜಾತಿಗಳನ್ನು ಮರುಪರಿಚಯಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಭಾಗವಾಗಿ ಐದು ಹೆಣ್ಣು ಮತ್ತು ಮೂರು ಗಂಡುಗಳನ್ನು ಒಳಗೊಂಡ ಎಂಟು ನಮೀಬಿಯಾ ಚಿರತೆಗಳನ್ನು ಕೆಎನ್‌ಪಿಗೆ ಕರೆತಂದು, ಕಳೆದ ವರ್ಷ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಆವರಣಗಳಲ್ಲಿ ಬಿಡುಗಡೆ ಮಾಡಿದರು. ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಕೆಎನ್‌ಪಿಗೆ ಇನ್ನೂ 12 ಚಿರತೆಗಳು ಆಗಮಿಸಿದ್ದವು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!