Mysore
30
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಯೂಟ್ಯೂಬ್ ಇತಿಹಾಸದಲ್ಲೇ ಅತೀ ಹೆಚ್ಚು ನೇರಪ್ರಸಾರ ವೀಕ್ಷಣೆ ದಾಖಲೆ ಬರೆದ ಚಂದ್ರಯಾನ-3.!

ಚಂದ್ರಯಾನ-3 ಇಂದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಭಾರತವು ತನ್ನ ಚಂದ್ರಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಭಾರತದ ಐತಿಹಾಸಿಕ ಚಂದ್ರನ ಕಾರ್ಯಾಚರಣೆಯು ಲ್ಯಾಂಡಿಂಗ್‌ನ ನೇರಪ್ರಸಾರದಂತೆ ಯಶಸ್ವಿಯಾಯಿತು. ಚಂದ್ರಯಾನ-3 ನೇರ ಪ್ರಸಾರ ಸ್ಪ್ಯಾನಿಷ್ ಸ್ಟ್ರೀಮರ್ ಇಬಾಯ್ ಅವರ 3.4 ಮಿಲಿಯನ್ ವೀಕ್ಷಣೆಯ ವಿಶ್ವ ದಾಖಲೆಯನ್ನು ಮುರಿದಿದೆ. ಚಂದ್ರಯಾನ 3 ನೇರಪ್ರಸಾರವನ್ನು 3.6 ಮಿಲಿಯನ್ ಜನರು ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದಾರೆ. ಇದು ಯೂಟ್ಯೂಬ್ ವೇದಿಕೆಯಲ್ಲಿ ಹೊಸ ಸ್ಟ್ರೀಮಿಂಗ್ ವಿಶ್ವ ದಾಖಲೆಯಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಮೂರನೇ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಇಂದು ಸಂಜೆ ಸುಮಾರು 6.04 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಸುಸೂತ್ರವಾಗಿ ಇಳಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ