Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಭಾರತಕ್ಕೆ ಮತ್ತಷ್ಟು ಆತಂಕ ಸೃಷ್ಟಿ : ಕ್ಸಿ ಜಿನ್‌ಪಿಂಗ್ ಗೆಲುವು

ಹೊಸದಿಲ್ಲಿ: ಸತತ ಮೂರನೇ ಬಾರಿಗೆ ಚೀನಾ ಅಧ್ಯಕ್ಷರಾಗಿ ಕ್ಸಿ ಜಿನ್‌ಪಿಂಗ್‌ ಆಯ್ಕೆಯಾಗಿರುವುದು ಭಾರತ ಸೇರಿ ಅನೇಕ ರಾಷ್ಟ್ರಗಳ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಒಂದು ದಶಕದ ಅವಧಿಯಲ್ಲಿ ಚೀನಾದ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿರುವ ಜಿನ್‌ಪಿಂಗ್‌ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವುದು ಜಾಗತಿಕ ವ್ಯಾಪಾರ, ಭದ್ರತೆ, ಮಾನವ ಹಕ್ಕುಗಳ ವಿಚಾರದಲ್ಲಿ ಮುಂದೇನಾಗಲಿದೆಯೋ ಎಂಬ ಆತಂಕ ಸೃಷ್ಟಿಯಾಗಿದೆ.

ಚೀನಾದ ಆರ್ಥಿಕ ಶಕ್ತಿ ಬಳಸಿಕೊಂಡು ವಿದೇಶದಲ್ಲಿ ತನ್ನ ಪ್ರಭಾವ ಹೆಚ್ಚಿಸಲು ಜಿನ್‌ಪಿಂಗ್‌ ಪ್ರಯತ್ನ ಮಾಡುವ ಸಾಧ್ಯತೆ ಇದೆ. ಸಣ್ಣ ಪುಟ್ಟ ರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡಿ ದೊಡ್ಡ ರಾಷ್ಟ್ರಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಕಮ್ಯುನಿಸ್ಟ್‌ ನಾಯಕನ ತಂತ್ರಗಾರಿಕೆಯನ್ನು ಭಾರತ, ಅಮೇರಿಕ, ಸೇರಿ ಹಲವು ದೇಶಗಳು ವಿರೋಧಿಸಿವೆ. ಅಧಿಕಾರ ಆಸೆಯ ಮೂಲಕ ವಿಶ್ವಸಂಸ್ಥೆ ರೂಪಿಸಿರುವ ಮಾನವ ಹಕ್ಕುಗಳ ವ್ಯಾಖ್ಯಾನವನ್ನೇ ಬದಲಿಸಲು ಜಿನ್‌ಪಿಂಗ್‌ ಪ್ರಯತ್ನ ಮಾಡುತ್ತಾರೆಂದು ಅಮೆರಿಕ ಎಚ್ಚರಿಸಿದೆ.

ಭಾರತಕ್ಕೆ ಯಾವಾಗಲೂ ಸಮಸ್ಯೆ ಮಾಡುವುದಕ್ಕೆ ನೆರೆಯ ಪಾಕಿಸ್ತಾನಕ್ಕೆ ನೆರವು ನೀಡುವುದು. ಮಿಲಿಟರಿ ಹಾಗೂ ಆರ್ಥಿಕ ಸಹಾಯ ಮಾಡುವ ಮೂಲಕ ಪಾಕಿಸ್ತಾನವನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ.

ಜಿನ್‌ಪಿಂಗ್ ಅವರು ಮೂರನೇ ಅವಧಿಗೆ ಆಯ್ಕೆಯಾದ ವೇಳೆಯೇ, ಭಾರತದ ಗಡಿಯಲ್ಲಿ ವೆಸ್ಟರ್ನ್ ಥಿಯೇಟರ್ ಕಮಾಂಡ್ ಅನ್ನು ಮುನ್ನಡೆಸುತ್ತಿದ್ದ ಮೂವರು ಜನರಲ್‌ಗಳಿಗೆ ಬಡ್ತಿ ನೀಡಿದ್ದಾರೆ.

ಜಿನ್‌ಪಿಂಗ್‌ ಅವಧಿಯಲ್ಲಿ ಟಿಬೆಟ್‌ ಮೇಲೆ ಪ್ರಭುತ್ವ ಸಾಧಿಸಲು ಗಡಿಯಲ್ಲಿ ಭಾರತಕ್ಕೆ ಸಮಸ್ಯೆ ಮಾಡಲಾಗಿತ್ತು. ಬೌದ್ಧ ಧರ್ಮಗುರು ದಲೈ ಲಾಮಾಗೆ ರಕ್ಷಣೆ ನೀಡಿರುವ ಭಾರತವನ್ನು ಟಿಬೆಟ್‌ ವ್ಯವಹಾರದಿಂದ ದೂರ ಇಡಲು 2017ರಲ್ಲಿ ಡೋಕ್ಲಾಮ್‌ ಗಡಿಯಲ್ಲಿ ಶುರು ಮಾಡಿದ ಸಮಸ್ಯೆ 2020ರಲ್ಲಿ ಲಡಾಕ್‌ನಲ್ಲಿ ನಡೆದ ಸಂಘರ್ಷದವರೆಗೂ ಬೆಳೆದಿದ್ದನ್ನು ಗಮನಿಸಬಹುದಾಗಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ