ನವದೆಹಲಿ: ಬೋರ್ನ್‌ವಿಟಾವನ್ನು ಹೆಲ್ತ್ ಡ್ರಿಂಗ್ಸ್ ಪಟ್ಟಿಯಿಂದ ತೆಗೆದು ಹಾಕುವಂತೆ ಇ-ಕಾಮರ್ಸ್ ಕಂಪನಿಗಳಿಗೆ ವಾಣಿಜ್ಯ ಸಚಿವಾಲಯ ಸೂಚನೆ ನೀಡಿದ್ದು, ಬೋರ್ನ್‌ವಿಟಾ ಯಾವುದೇ ಹೆಲ್ತ್ ಡ್ರಿಂಗ್ಸ್ ವರ್ಗಕ್ಕೆ ಸೇರುವುದಿಲ್ಲ ಎಂದು ಹೇಳಿದೆ.
ಏಪ್ರಿಲ್ 10 ರಂದು ಈ ಆದೇಶವನ್ನು ನೀಡಲಾಗಿದೆ. ಬೋರ್ನ್‌ವಿಟಾದಲ್ಲಿ ಹೆಚ್ಚಿನ ಸಕ್ಕರೆ ಅಂಶ ಇದೆ ಎಂದು ಒಂದು ವರ್ಷದ ಹಿಂದೆ ವ್ಯಕ್ತಿಯೋರ್ವ ಕಳವಳ ವ್ಯಕ್ತಪಡಿಸಿದ್ದರು.
ಇದೀಗ ಒಂದು ವರ್ಷದ ಬಳಿಕೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವಾಲಯ ಇ-ಕಾಮರ್ಸ್ ಕಂಪನಿಗಳಿಗೆ ಸೂಚನೆ ನೀಡಿದ್ದು, ಅವರ ಪೋರ್ಟಲ್ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಬೋರ್ನ್‌ವಿಟಾವನ್ನು ಹೆಲ್ತ್‌ಡ್ರಿಂಗ್ಸ್ ಪಟ್ಟಿಯಿಂದ ತೆಗೆದುಹಾಕುವಂತೆ ನಿರ್ದೇಶನ ನೀಡಿದೆ.