ಇದೇ ತಿಂಗಳು 29ಕ್ಕೆ ಬಿಡುಗಡೆಗೆ ಸಜ್ಜಾಗಿರುವ ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಲಾರ್ ಚಿತ್ರಕ್ಕೆ ಸೆಂಸಾರ್ ಮಂಡಳಿ ʼಎʼ ಸರ್ಟಿಫಿಕೆಟ್ ನೀಡಿದೆ.
ಮೆಗಾ ಹಿಟ್ ಕೆಜಿಎಫ್ ನಂತರ ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಬಾಹಿಬಲಿ ಖ್ಯಾತಿಯ ಪ್ರಭಾಸ್ ಹಾಗೂ ಶೃತಿ ಹಾಸನ್ ಸೇರಿದಂತೆ ಅನೇಕ ದಿಗ್ಗಜ ನಟರನ್ನೊಳಗೊಂಡ ಬಹು ನಿರೀಕ್ಷತ ಚಿತ್ರ ಸಲಾರ್‌ಗೆ ಸೆಂಸಾರ್ ಮಂಡಳಿ ಎ ಸರ್ಟಿಫಿಕೆಟ್ ನೀಡಿದೆ.
ಚಿತ್ರದಲ್ಲಿ ಹೆಚ್ಚಿನ ವೈಲೆಂಸ್, ಕ್ರೌರ್ಯ ಹಾಗೂ ಅಶ್ಲೀಲತೆ ಇರುವುದರಿಂದ ʼಎʼ ಸರ್ಟಿಫಿಕೆಟ್ ನೀಡಿರುವುದಾಗಿ ತಿಳಿಸಿದೆ. ಅದಲ್ಲದೇ 18ವರ್ಷ ಮೇಲ್ಪಟ್ಟವರಿಗೆ ಮಾತ್ರ ಚಿತ್ರ ವೀಕ್ಷಣೆಗೆ ಅವಕಾಶ ನೀಡಬೇಕು ಎಂದು ಸೆಂನ್ಸಾರ್ ಮಂಡಳಿ ತಿಳಿಸಿದೆ.





