Mysore
18
broken clouds

Social Media

ಶನಿವಾರ, 31 ಜನವರಿ 2026
Light
Dark

ವರ್ತೂರ್‌ ಸಂತೋಷ್‌ ಆಯ್ತು ಈಗ ತನಿಷಾಗೆ ಸಂಕಷ್ಟ; ಅರೆಸ್ಟ್‌ ಆಗ್ತಾರಾ ಕುಪ್ಪಂಡ?

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್‌ ಬಾಸ್‌ನ ಹತ್ತನೇ ಆವೃತ್ತಿ ಸದ್ಯ ನಡೆಯುತ್ತಿದ್ದು ತಿಂಗಳು ಈ ಸೀಸನ್‌ ಶುರುವಾಗಿ ತಿಂಗಳು ಕಳೆದಿದೆ. ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ನಡುವಿನ ಕಿತ್ತಾಟ ನೋಡುಗರಿಗೆ ಹೆಚ್ಚಿನ ಮನರಂಜನೆ ನೀಡುತ್ತಿದ್ದು, ಈ ಅಂಶ ಕಾರ್ಯಕ್ರಮದ ಮೇಲೆ ಮಿಶ್ರ ಪ್ರತಿಕ್ರಿಯೆ ಉಂಟಾಗುವಂತೆ ಮಾಡಿದೆ.

ಇನ್ನು ಮನೆ ಒಳಗಿನ ಒಂದಷ್ಟು ಅಂಶ ಸಾಮಾಜಿಕ ಜಾಲತಾಣದಲ್ಲಿ ವಿವಾದದ ರೂಪ ಪಡೆದುಕೊಳ್ಳುತ್ತಿದ್ದು ಈ ವಿವಾದ ಇದೀಗ ಬಂಧನದವರೆಗೂ ಸಹ ತಲುಪಿದೆ. ಹೌದು, ತನಿಷ ಕುಪ್ಪಂಡ ನವೆಂಬರ್‌ 8ರಂದು ಪ್ರಸಾರವಾದ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ತಮ್ಮ ಸಹಸ್ಪರ್ಧಿ ಡ್ರೋನ್‌ ಪ್ರತಾಪ್‌ ಅವರ ಜತೆ ಮಾತನಾಡುವಾಗ “ಏನೋ ನೀನು ಒಡ್ಡನ ಥರ ಆಡ್ತೀಯ” ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಹೀಗೆ ಮಾತನಾಡುವಾಗ ವಡ್ಡ ಎಂಬ ಪದ ಬಳಕೆ ಮಾಡಿರುವುದರಿಂದ ತನಿಷಾ ಕುಪ್ಪಂಡ ವಿರುದ್ಧ ಭೋವಿ ಸಮುದಾಯದವರು ಕಿಡಿಕಾರಿದ್ದಾರೆ. ತನಿಷಾ ತಮ್ಮ ಜಾತಿನಿಂದನೆ ಮಾಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಬೆಂಗಳೂರಿನ ಕುಂಬಳಗೋಡಿ ಪೊಲೀಸ್‌ ಠಾಣೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿದ್ದಾರೆ.

ಸದ್ಯ ತನಿಷಾ ಕುಪ್ಪಂಡ ಈ ದೂರಿನ ಅಡಿಯಲ್ಲಿ ಬಂಧನಕ್ಕೊಳಗಾಗಲಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಇನ್ನು ಕಳೆದ ದಿನಗಳ ಹಿಂದಷ್ಟೇ ಇದೇ ಬಿಗ್‌ ಬಾಸ್ ಕಾರ್ಯಕ್ರಮದ ಮತ್ತೋರ್ವ ಸ್ಪರ್ಧಿಯಾಗಿರುವ ವರ್ತೂರ್‌ ಸಂತೋಷ್‌ ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಕಾರಣಕ್ಕಾಗಿ ಬಂಧಕ್ಕೊಳಗಾಗಿದ್ದರು. ಈ ಪ್ರಕರಣ ಭಾರೀ ಸದ್ದು ಮಾಡಿ ಹುಲಿ ಉಗರು ಧರಿಸಿದ್ದ ಸೆಲೆಬ್ರಿಟಿಗಳ ಬಂಧನ ಯಾವಾಗ ಎಂದು ನೆಟ್ಟಿಗರು ಪ್ರಶ್ನೆಯನ್ನು ಮಾಡಿದ್ದರು. ಇದರ ತರುವಾಯ ಅರಣ್ಯ ಇಲಾಖೆ ಪೊಲೀಸರು ಆಯಾ ಸೆಲೆಬ್ರಿಟಿಗಳ ಮನೆಗೆ ಭೇಟಿ ನೀಡಿ ಹುಲಿ ಉಗುರಿಗಾಗಿ ಶೋಧ ನಡೆಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!