Mysore
20
broken clouds

Social Media

ಭಾನುವಾರ, 01 ಫೆಬ್ರವರಿ 2026
Light
Dark

ಪಂಜಾಬ್‌ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಒಳನುಸುಳುಕೋರನ ಹತ್ಯೆ ಮಾಡಿದ ಬಿಎಸ್‌ಎಫ್

ಪಂಜಾಬ್ : ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ನಸುಳುಕೋರನೊಬ್ಬನನ್ನು ಗಡಿ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತರ್ನ್ ತರನ್ ಜಿಲ್ಲೆಯ ತೆಕಲನ್ ಗ್ರಾಮದ ಐಬಿ ಬಳಿ ಅನುಮಾನಾಸ್ಪದ ವ್ಯಕ್ತಿಯ ಚಲನವಲನವನ್ನು ಗಮನಿಸಿದ ಬಿಎಸ್ಎಫ್ ಪಡೆಗಳು,ಆತನಿಗೆ ಗುಂಡಿಕ್ಕಿ ಸ್ಥಳದಲ್ಲಿಯೇ ಹತ್ಯೆ ಮಾಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಜುಲೈನಲ್ಲಿ ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಬಿಎಸ್ ಎಫ್ ಪಡೆಗಳು ಒಳನುಸುಳುವಿಕೆ ಪ್ರಯತ್ನ ವಿಫಲಗೊಳಿಸಿದ್ದರಿಂದ ಪಾಕಿಸ್ತಾನದ ಒಳನುಸುಳುಕೋರನೊಬ್ಬ ಸಾವನ್ನಪ್ಪಿದ್ದ.

ಅರ್ನಿಯಾ ಸೆಕ್ಟರ್‌ನ ಜಬೋವಾಲ್ ಗಡಿ ಹೊರಠಾಣೆ ಬಳಿ ಗಡಿ ಬಳಿ ಪದೇ ಪದೇ ಮಾಡಲಾದ ಮನವಿಯನ್ನು ನಿರ್ಲಕ್ಷಿಸಿ ಗಡಿ ತಂತಿ ಬೇಲಿ ದಾಟಿ ಪಲಾಯನ ಮಾಡಲು ಪ್ರಯತ್ನಿಸಿದ ನಂತರ ಆತನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿರುವುದಾಗಿ ಬಿಎಸ್ ಎಫ್ ಮಾಹಿತಿ ನೀಡಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!