Mysore
15
overcast clouds

Social Media

ಶುಕ್ರವಾರ, 09 ಜನವರಿ 2026
Light
Dark

ಬಿಜೆಪಿ ದ್ವೇಷದ ರಾಜಕಾರಣ ಮಣಿಪುರವನ್ನು ಸುಟ್ಟು ಹಾಕಿದೆ: ರಾಹುಲ್ ಗಾಂಧಿ

ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಮತೀಯ ಹಿಂಸಾಚಾರದ ಬಗ್ಗೆ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದ್ವೇಷದ ರಾಜಕಾರಣವು ಈಶಾನ್ಯ ರಾಜ್ಯವನ್ನು ಸುಟ್ಟುಹಾಕಿದೆ ಮತ್ತು ಹಲವಾರು ಜನರನ್ನು ಬಲಿತೆಗೆದುಕೊಂಡಿದೆ ಎಂದು ಆರೋಪಿಸಿದ್ದಾರೆ.

“ಈ ‘ನಫ್ರತ್ ಕಾ ಬಜಾರ್’ ಅನ್ನು ಮುಚ್ಚೋಣ ಮತ್ತು ಮಣಿಪುರದ ಪ್ರತಿ ಹೃದಯದಲ್ಲಿ ‘ಮೊಹಬ್ಬತ್ ಕಿ ದುಕಾನ್’ ಅನ್ನು ತೆರೆಯೋಣ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ವಿಫಲಗೊಳಿಸಿದ್ದಾರೆ ಎಂದು ಆರೋಪಿಸಿದ ಗಾಂಧಿ ಮತ್ತು ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗಾಗಿ ಸರ್ವಪಕ್ಷಗಳ ನಿಯೋಗವನ್ನು ಮಣಿಪುರಕ್ಕೆ ಕಳುಹಿಸಲು ಒತ್ತಾಯಿಸಿ, ಮಣಿಪುರದಲ್ಲಿ ಉದ್ವಿಗ್ನತೆಯ ಬಗ್ಗೆ ಮೌನವಾಗಿರುವುದನ್ನು ಪ್ರಶ್ನಿಸಿದ್ದಾರೆ.

“ಬಿಜೆಪಿಯ ದ್ವೇಷದ ರಾಜಕಾರಣವು ಮಣಿಪುರವನ್ನು 40 ದಿನಗಳಿಗೂ ಹೆಚ್ಚು ಕಾಲ ಸುಟ್ಟುಹಾಕಿದ್ದು, ನೂರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ. ಪ್ರಧಾನಿ ಭಾರತವನ್ನು ವಿಫಲಗೊಳಿಸಿದ್ದಾರೆ ಮತ್ತು ಸಂಪೂರ್ಣವಾಗಿ ಮೌನವಾಗಿದ್ದಾರೆ ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!