Mysore
29
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಚಂದ್ರಯಾನ ಲ್ಯಾಂಡಿಂಗ್ ಸ್ಥಳಕ್ಕೆ ಹೆಸರು ಘೋಷಣೆ ನಂತರ ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕೆ

ನವದೆಹಲಿ: ಇಸ್ರೋ ಕೇಂದ್ರದ ಚಂದ್ರಯಾನ-2 ಮತ್ತು ಚಂದ್ರಯಾನ-3 ಕಾರ್ಯಾಚರಣೆಯಲ್ಲಿ ಚಂದ್ರಯಾನಗಳ ಲ್ಯಾಂಡಿಂಗ್ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಹೆಸರುಗಳನ್ನು ಘೋಷಿಸಿದ ನಂತರ ಬಿಜೆಪಿ ಹಾಗೂ ಬಿಜೆಪಿ ಪರ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ದೇಶದ ಅತಿ ಹಳೆಯ ಮತ್ತು ದೊಡ್ಡ ಪಕ್ಷವೆನಿಸಿಕೊಂಡಿರುವ ಕಾಂಗ್ರೆಸ್ ಜವಹರಲಾಲ್ ನೆಹರೂ ಕುಟುಂಬಕ್ಕೆ ಮೊದಲ ಮನ್ನಣೆ ನೀಡಿದರೆ ಬಿಜೆಪಿಯವರು ದೇಶಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಅದಕ್ಕೆ ಪ್ರಧಾನಿ ಮೋದಿಯವರು ಇಂದು ಇಸ್ರೊದ ಚಂದ್ರಯಾನಕ್ಕೆ ಇಟ್ಟಿರುವ ಹೆಸರುಗಳು ಮತ್ತೊಮ್ಮೆ ಸಾಕ್ಷಿಯಾಗಿದೆ  ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಪ್ರಧಾನಿ ಮೋದಿ ಇಂದು ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿ ಇಸ್ರೋ ಕಚೇರಿಯಿಂದ 3 ಪ್ರಮುಖ ಘೋಷಣೆಗಳನ್ನು ಮಾಡಿದರು. ಚಂದ್ರಯಾನ-3 ಇಳಿದ ಸ್ಥಳವನ್ನು ಶಿವಶಕ್ತಿ ಎಂದು ಕರೆಯಲಾಗುವುದು, ಚಂದ್ರಯಾನ-2 ಪ್ರಭಾವದ ತಾಣವನ್ನು ‘ತಿರಂಗಾ’ ಎಂದು ಕರೆಯಲಾಗುವುದು ಮತ್ತು ಮೂರನೇ ಚಂದ್ರಯಾನದ ಯಶಸ್ವಿ ಲ್ಯಾಂಡಿಂಗ್ ದಿನವಾದ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಇನ್ನು ಮುಂದೆ ಆಚರಿಸಲಾಗುವುದು ಎಂದು ಘೋಷಿಸಿದರು.

ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಟ್ವೀಟ್ ಮಾಡಿ, ಭಾರತ ಮೊದಲು ವರ್ಸಸ್ ಫ್ಯಾಮಿಲಿ ಫಸ್ಟ್! ಚಂದ್ರನ ಮೇಲೆ ಪರಿಣಾಮ / ಲ್ಯಾಂಡಿಂಗ್ ಪಾಯಿಂಟ್ ಹೆಸರುಗಳು – 1. ಚಂದ್ರಯಾನ1: ಜವಾಹರ್ ಪಾಯಿಂಟ್ 2. ಚಂದ್ರಯಾನ2: ತಿರಂಗ ಪಾಯಿಂಟ್ 3. ಚಂದ್ರಯಾನ3: ಶಿವಶಕ್ತಿ ಪಾಯಿಂಟ್ ನಂತರ ಲ್ಯಾಂಡರ್ ನ್ನು ವಿಕ್ರಮ್ ಲ್ಯಾಂಡರ್ ಎಂದು ಕರೆಯಲಾಯಿತು. ವಿಕ್ರಮ್ ಸಾರಾಭಾಯ್, ಯುಪಿಎ ಆಗಿದ್ದರೆ ಎಂದಿಗೂ ಕಳುಹಿಸುತ್ತಿರಲಿಲ್ಲ ಒಂದು ವೇಳೆ ಸಾಧನೆ ಮಾಡಿದ್ದರೂ ಕೂಡ ಅದಕ್ಕೆ ಇಂದಿರಾ ಪಾಯಿಂಟ್ ಮತ್ತು ರಾಜೀವ್ ಪಾಯಿಂಟ್ ಎಂದು ಹೆಸರಿಸುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ