Mysore
18
few clouds

Social Media

ಗುರುವಾರ, 12 ಫೆಬ್ರವರಿ 2026
Light
Dark

ಜಿಯೋ ಗ್ರಾಹಕರಿಗೆ ಬಿಗ್‌ ಶಾಕ್… ಮೊಬೈಲ್‌ ರಿಚಾರ್ಚ್‌ ಮತ್ತಷ್ಟು ದುಬಾರಿ..!

ಮೈಸೂರು: ದೇಶದ ಪ್ರಮುಖ ಟಿಲಿಕಾಂ ಕಂಪನಿ ರಿಲಯನ್ಸ್‌ ಜಿಯೋ ತನ್ನ ಎಲ್ಲಾ ರಿಚಾರ್ಚ್‌ ಪ್ಲ್ಯಾನ್‌ಗಳನ್ನು ಹೆಚ್ಚಳ ಮಾಡಿದೆ. ತನ್ನ ಪ್ರಿಪೇಯ್ಡ್‌ ಯೋಜನೆಗಳ ಮೇಲೆ 20% ದರ ಹೆಚ್ಚಿಸಿದೆ. ಈ ಹೊಸ ದರ ಪ್ಲ್ಯಾನ್‌ಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಎರಡೂವರೆ ವರ್ಷಗಳ ಬಳಿಕ ಜಿಯೋ ಪ್ರಿಪೇಯ್ಡ್‌ ಬೆಲೆಗಳಲ್ಲಿ ಮೊದಲ ಹೆಚ್ಚಳ ಮಾಡಿದೆ. ದೇಶದಲ್ಲಿ ಗರಿಷ್ಠ ಪ್ರಮಾಣದ ಮೊಬೈಲ್‌ ಗ್ರಾಹಕರನ್ನು ಹೊಂದಿರುವ ಜಿಯೋ ಇದೀಗ ತನ್ನ ಗ್ರಾಹಕರಿಗೆ ದರ ಹೆಚ್ಚಳದ ಬಿಸಿ ಮುಟ್ಟಿಸಿದೆ.

ಹಿಂದೆ ಎಷ್ಟಿತ್ತು, ಈಗಾ ಎಷ್ಟಾಗುತ್ತೆ?

ಈ ಹಿಂದೆ 155 ರೂಪಾಯಿ ರಿಚಾರ್ಚ್‌ ಪ್ಲ್ಯಾನ್‌ 189 ರೂಪಾಯಿಗೆ ಏರಲಿದೆ. ಆದರೆ ವ್ಯಾಲಿಡಿಟಿ ಮಾತ್ರ 28ದಿನಗಳಿಗೆ ಇರಲಿದೆ. ಇನ್ನು 209 ರೂಪಾಯಿಯ ರಿಚಾರ್ಚ್‌ ಪ್ಲ್ಯಾನ್‌ 249 ರೂಪಾಯಿ ಆಗಲಿದೆ. ಇಲ್ಲಿ 40 ರೂ ಏರಿಕೆ ಕಂಡಿದೆ. ಇದರ ವ್ಯಾಲಿಡಿಟಿ ಕೂಡ 28 ದಿನ ಇರಲಿದೆ.

ಡೇಟಾ ಇಂಟರ್‌ನೆಟ್‌ ಪ್ಲ್ಯಾನ್‌ಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇನ್ನೂ 5G ಅನಿಯಮಿತ ಡೇಟಾವನ್ನು ನೀಡುತ್ತಿದ್ದ ರೂ. 239 ಯೋಜನೆಯು ಇನ್ನು ಮುಂದೆ ಇರೋದಿಲ್ಲ. 239 ರ ರಿಚಾರ್ಜ್‌ ಪ್ಲ್ಯಾನ್‌ ಇದೀಗ ರೂ.299 ಆಗಲಿದೆ. ಆದರೆ 5G ಅನಿಯಮಿತ ಡೇಟಾವು 2GB ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಗಳಲ್ಲಿ ಮಾತ್ರ ಇರುತ್ತದೆ.

 

Tags:
error: Content is protected !!