ಬೆಳಗಾವಿ : ಭವಾನಿ ರೇವಣ್ಣ ಅವರ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸೂರಜ್ ರೇವಣ್ಣ ಅವರು ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಇದರಲ್ಲಿ ನನ್ನ ತಾಯಿಯ ತಪ್ಪೇನಿಲ್ಲ ಬೈಕ್ ಸವಾರ ಕುಡಿದು ಬೈಕ್ ಚಲಾಯಿಸುತ್ತಿದ್ದ. ಕಾರು ಅಪಘಾತವಾಗಿದ್ದಕ್ಕೆ ಸಹಜವಾಗಿಯೇ ನನ್ನ ತಾಯಿ ಆ ರೀತಿ ಮಾತನಾಡಿದ್ದಾರೆ. ಅವರು ಆ ರೀತಿಯ ಬದಗಳನ್ನು ಬಳಸಿರುವುದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ. ಅಪಘಾತ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರೋ ಕಿಡಿಗೇಡಿಗಳು ವಿಡಿಯೋ ಮಾಡಿಕೊಂಡು ವೈರಲ್ ಮಾಡಿದ್ದಾರೆ ಎಂದಿದ್ದಾರೆ.
ನೆನ್ನೆ ಕೆಆರ್ ನಗರದ ಸಾಲಿಗ್ರಾಮದಿಂದ ಹೊಳೆ ನರಸಿಪುರದ ಕಡೆಗೆ ಹೊರಟಿದ್ದ ವೇಳೆ ರಾಮಪುರ ಗೇಟ್ ಬಳಿ ಭವಾನಿ ರೇವಣ್ಣ ಅವರ ಕಾರಿಗೆ ಎದುರಿನಿಂದ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕಾರಿನ ಮುಂಭಾಗ ಸ್ವಲ್ಪ ಸ್ಕ್ಯಾಚ್ ಆಗಿದೆ. ಇದರಿಂದ ರೊಚ್ಚಿಗೆದ್ದ ಭವಾನಿ ರೇವಣ್ಣ ಬೈಕ್ ಸವಾರನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಸಾಯುವ ಹಾಗಿದ್ದರೆ ಬಸ್ಸಿಗೆ ಸಿಕ್ಕಾಕೊಂಡು ಸಾಯಬೇಕಿತ್ತು. ನೀನು ಸಾಯೋಕೆ ನನ್ನ ಕಾರೇ ಬೇಕಿತ್ತಾ ? ಡ್ಯಾಮೆಜ್ ಮಾಡೋಕೆ ನೀನ್ಯಾವೊನು. ಅವನು ಸತ್ರೆ ಸಾಯಲಿ. ನನ್ನ ಗಾಡಿ ಯಾರು ರಿಪೇರಿ ಮಾಡಿಸಿಕೊಡ್ತಾರೆ. ಈಗ ರಿಪೇರಿ ಮಾಡಿಸೋಕೆ ಐವತ್ತು ಲಕ್ಷ ಬೇಕು. ಒಂದುವರೆ ಕೋಟಿ ರೂಪಯಿಯ ಕಾರು ನನ್ನದು, ಅವನ ಗಾಡಿ ಸುಟ್ಟುಹಾಕಿ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು.
ಈ ವೇಳೆ ಸ್ಥಳದಲ್ಲಿದ್ದವರು ಅಕ್ಕ ಗಾಡಿ ತೆಗೀರಿ ಹೋಗೋಣ ಎಂದಿದ್ದಾರೆ. ಇದಕ್ಕೆ ಭವಾನಿ ರೇವಣ್ಣ ಅವರು ಗಾಡಿ ತಗೊಂಡು ಏನ್ ಮಾಡೋಣ ರೀಪೇರಿ ಮಾಡೋಕೆ ಐವತ್ತು ಲಕ್ಷ ಬೇಕು ಕೊಡ್ತೀಯಾ ನೀನು ? ದುಡ್ಡು ಕೊಡುವ ಹಾಗಿದ್ದರೆ ನ್ಯಾನ ಮಾಡೋಕೆ ಬನ್ನಿ ಎಂದು ಸಂಯಮ ಮೀರಿ ಮಾತನಾಡಿದ್ದರು.