Mysore
21
few clouds

Social Media

ಶುಕ್ರವಾರ, 20 ಫೆಬ್ರವರಿ 2026
Light
Dark

ರಾಜಸ್ಥಾನದ ಮುಖ್ಯಮಂತ್ರಿಯಾಗಿ ಭಜನ್‌ಲಾಲ್‌ ಶರ್ಮಾ ಆಯ್ಕೆ

ಇಂದು ( ಡಿಸೆಂಬರ್‌ 12 ) ನಡೆದ ರಾಜಸ್ಥಾನ ಬಿಜೆಪಿ ಶಾಸಕಾಂಗ ಸಭೆಯಲ್ಲಿ ರಾಜ್ಯದ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಘೋಷಣೆ ಮಾಡಲಾಗಿದೆ. ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ಲಾಲ್‌ ಶರ್ಮಾ ಆಯ್ಕೆಯಾಗಿದ್ದಾರೆ. ವಸುಂದರಾ ರಾಜೇ ಅವರು ಭಜನ್‌ಲಾಲ್‌ ಶರ್ಮಾ ಅವರ ಹೆಸರನ್ನು ಘೋಷಣೆ ಮಾಡಿದ್ದಾರೆ.

ಸಂಗನೇರ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಭಜನ್‌ಲಾಲ್‌ ಶರ್ಮಾ ಬರೋಬ್ಬರಿ 48000 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಪಕ್ಷದ ಪರ 4 ಬಾರಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿರುವ ಭಜನ್‌ಲಾಲ್‌ ಇದೀಗ ಮುಖ್ಯಮಂತ್ರಿಯಾಗಿ ಹೊಸ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಇನ್ನು ಉಪಮುಖ್ಯಮಂತ್ರಿಗಳನ್ನಾಗಿ ಪ್ರೇಮ್‌ಚಂದ್‌ ಭೈರ್ವಾ ಹಾಗೂ ದಿಯಾ ಕುಮಾರಿ ಅವರನ್ನು ಆಯ್ಕೆ ಮಾಡಿದ್ದಾರೆ.

ಭಜನ್‌ಲಾಲ್‌ ಶರ್ಮಾ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ ಪ್ರಕಾರ ಅವರಿಗೆ 56 ವರ್ಷ ವಯಸ್ಸಾಗಿದ್ದು, ಸ್ನಾತಕೋತ್ತರ ಪದವೀಧರನಾಗಿದ್ದಾರೆ. ಅವರು ಒಟ್ಟು 1.5 ಕೋಟಿ ಆಸ್ತಿಯನ್ನು ಘೋಷಣೆ ಮಾಡಿದ್ದು, ಇದರಲ್ಲಿ 43.6 ಲಕ್ಷ ರೂಪಾಯಿಗಳ ಚರಾಸ್ತಿ ಹಾಗೂ 1 ಕೋಟಿಯ ಚಿರಾಸ್ತಿಗಳು ಸೇರಿವೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!