Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಕ್ಯಾಮೆರಾ ಇಲ್ಲ ಎಂದು ಮತಾಡ್ಬಿಟ್ಟೆ, ಆದರೂ ನನ್ನ ಮಾತಿಗೆ ಬದ್ಧ: ಬಿಕೆ ಹರಿಪ್ರಸಾದ್

ಬೆಂಗಳೂರು : ಬಿಲ್ಲವ, ಈಡಿಗ ಸಮಾವೇಶದಲ್ಲಿ ನಾನು ಹೇಳಿದ ಮಾತಿಗೆ ಬದ್ಧನಾಗಿದ್ದೇನೆ. ಕಾದು ನೋಡಿ‌ ರಾಜಕಾರಣ ಏನೇನು ಆಗುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಹೇಳಿದರು.

ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ” ಅಸಮಾಧಾನದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಶುಕ್ರವಾರ ನಾನು ಹೇಳಿದ್ದು ನಿಜ ಒಪ್ಪಿಕೊಳ್ಳುತ್ತೇನೆ ” ಎಂದರು.

” ನಾನು ಒಂದು ಸರಿ ಹೇಳಿದ ಮಾತು ವಾಪಾಸ್ ತಗೆದುಕೊಳ್ಳೋದಿಲ್ಲ. ನಾನು ಹೇಳಿದ ಮಾತಿಗೆ ಬದ್ದನಾಗಿರುತ್ತೇನೆ.‌ ನಾನು ಹೇಳದ ಮೇಲೆ ನನ್ನ ಮಾತಲ್ಲ.‌ ಹಾಗಿದ್ದರೂ,‌ನಾನು ಹೇಳಿದ ಮೇಲೆ‌ ನನ್ನ ಮಾತಿಗೆ ಬದ್ದನಾಗಿರುತ್ತೇನೆ ” ಎಂದರು.

ಕ್ಯಾಮೆರಾ ಇರಲಿಲ್ಲ ಎಂದು ಮಾತಾಡಿದ್ದೇನೆ

ಶುಕ್ರವಾರ ಸಭೆಗೆ ಕರೆದಿದ್ದರು ಹೋಗಿದ್ದೆ ಅಷ್ಟೇ.‌ ಅಲ್ಲಿ ಕ್ಯಾಮೆರಾಗಳು ಇರಲಿಲ್ಲ ಮಾತಾಡಿದ್ದೇನೆ. ಕ್ಯಾಮೆರಾಗಳು ಇದ್ದಿದ್ದರೆ ಮಾತಾಡುತ್ತಿರಲಿಲ್ಲ. ನಾವು ಹಿಂದುಳಿದವರು ಅಷ್ಟೆಲ್ಲಾ‌ ಗಮನಿಸಿಲ್ಲ‌. ಯಾರೋ ವಿಡಿಯೋವನ್ನು ಹಾಕಿರುತ್ತಾರೆ” ಎಂದು ಹೇಳಿದರು.

ಏನಂದಿದ್ದರು ಬಿ.ಕೆ ಹರಿಪ್ರಸಾದ್?

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಬಿಕೆ ಹರಿಪ್ರಸಾದ್, ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ನನಗೆ ಸಿಎಂ ಮಾಡುವುದು ಗೊತ್ತಿದೆ. ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವುದು ಗೊತ್ತಿದೆ ಎಂದು ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದರು.

ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಎಲ್ಲರೂ ಒಟ್ಟಿಗೆ ಸೇರಬೇಕು ಎಂದು ನಾವು 2013 ರಲ್ಲಿ ಬೆಂಬಲ ಕೊಟ್ಟಿದ್ದೆವು. ಆದರೆ, ಉಡುಪಿ ಜಿಲ್ಲೆಯ ಕಾರ್ಕಳ ಕೋಟಿ ಚೆನ್ನಯ್ಯ ಪಾರ್ಕ್‌ಗೆ 5 ಕೋಟಿ ಕೊಡಿ ಎಂದು ಕೇಳಿದ್ದೆವು. ಸಿದ್ದರಾಮಯ್ಯ ಕೊಡುತ್ತೇವೆ ಎಂದು ಹೇಳಿದರೂ ಅದನ್ನು ಕೊಟ್ಟಿಲ್ಲ ಎಂದು ಆರೋಪ ಮಾಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ