Mysore
27
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಮದ್ದೂರಲ್ಲಿ ಯುವಕನ ಬರ್ಬರ ಹತ್ಯೆ

ಮದ್ದೂರು : ಯುವಕನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು, ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಕುದುರಗುಂಡಿ ಗ್ರಾಮದಲ್ಲಿ ನಡೆದಿದೆ.

ಕುದುರಗುಂಡಿ ಗ್ರಾಮದ ಎಳನೀರು ವ್ಯಾಪಾರ ಮಾಡುತ್ತಿದ್ದ ಶಿವಾನಂದ (19) ಎಂಬಾತನೇ ಹತ್ಯೆಯಾದ ಯುವಕನಾಗಿದ್ದಾನೆ.

ಸೋಮವಾರ ತಡರಾತ್ರಿ ಶಿವಾನಂದನನ್ನು ಆತನ ಮನೆಯಲ್ಲೇ ಹತ್ಯೆ ಮಾಡಿದ್ದು, ಇದು ಹಲವು ಸಂಶಯಗಳಿಗೆ ಎಡೆಮಾಡಿದೆ.

ಈ ಸಂಬಂಧ ಸ್ಥಳಕ್ಕೆ ಸಿಪಿಐಗಳಾದ ಶಿವಕುಮಾರ್, ವೆಂಕಟೇಗೌಡ ಭೇಟಿ ನೀಡಿ ಪರಿಶೀಲಿಸಿದರು. ಹತ್ಯೆಯಾದ ಶಿವಾನಂದನ ತಂಗಿ ಚೈತ್ರ ನೀಡಿರುವ ದೂರಿನ ಮೇರೆಗೆ ದೂರು ದಾಖಲಿಸಿಕೊಂಡಿರುವ ಸಿಪಿಐ ಶಿವಕುಮಾರ್, ಆರೋಪಿಗಾಗಿ ಬಲೆ ಬೀಸಿದ್ದಾರೆ. ಈ ಕೊಲೆಯಿಂದ ಕುದುರಗುಂಡಿ ಗ್ರಾಮದಲ್ಲಿ ಭಯವ ವಾತಾವರಣ ನಿರ್ಮಾಣವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!