Mysore
29
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಬೆಂಗಳೂರು ಬಂದ್| ಪ್ರತಿಭಟನಾಕಾರರನ್ನು ಹತ್ತಿಕ್ಕಲ್ಲ, ಅಭಿನಂದಿಸುತ್ತೇನೆ: ಡಿಕೆ ಶಿವಕುಮಾರ್‌

ಬೆಂಗಳೂರು: ಕಾವೇರಿಗಾಗಿ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಹತ್ತಿಕ್ಕುವುದಿಲ್ಲ, ಬದಲಾಗಿ ಅಭಿನಂದನೆ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು,‌ ಬಂದ್ ಹಿನ್ನಲೆಯಲ್ಲಿ ಬೆಂಗಳೂರಿನ ನಾಗರಿಕರು ಹಾಗೂ ಸಂಘಟನೆಗಳಿಗೆ ಅಭಿನಂದಿಸುವೆ. ಶಾಂತಿಯುತವಾಗಿ ಪ್ರತಿಭಟನೆ ಮಾಡ್ತಿದ್ದಾರೆ ಎಂದರು.

ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ನೀರಿನ ಮಟ್ಟ ಚೆಕ್ ಮಾಡ್ತಿದ್ದೇನೆ. ನಮ್ಮ ಅಧಿಕಾರಿಗಳು ಏನು ಮಾಡ್ತಾರೆ ನೋಡೋಣ. 8 ರಿಂದ 10 ಸಾವಿರ ಕ್ಯೂಸೆಕ್ ಒಳ ಹರಿವಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನೀರಿನ ಮಟ್ಟದ ಲೆಕ್ಕ ಇದೆ, ಯಾರೂ ಸುಳ್ಳು ಹೇಳಲು ಆಗಲ್ಲ ಎಂದು ವಿವರಿಸಿದರು.

ಎಷ್ಟು ನೀರು ಬರುತ್ತಿದೆ ಎಂದು ದಾಖಲೆ ಇದೆ. ಬಿಳಿಗೊಂಡ್ಲು ಡ್ಯಾಮ್ ನಲ್ಲಿ ನೀರಿನ ಮಟ್ಟ ದಾಖಲಾಗುತ್ತದೆ. ಸುಳ್ಳು ಹೇಳಲು ಆಗಲ್ಲ, ಟೆಕ್ನಿಕಲ್ ಕಮಿಟಿ ಅವರ ಪಾಯಿಂಟ್ ಮುಂದಿಡುತ್ತಾರೆ ಎಂದರು.

5 ಸಾವಿರ ಕೂಸೆಕ್ಸ್ ನೀರು ಬಿಡಲು ಆಗಲ್ಲ ಇನ್ನೂ 12,500 ಸಾವಿರ ಕೂಸೆಕ್ಸ್ ನೀರು ಬಿಡಲು ಆಗುತ್ತಾ? ಅವರು ಎಷ್ಟೇ ಬೇಡಿಕೆ ಇಟ್ಟರೂ ನೀರು ಬಿಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಅನೇಕ ಜಡ್ಜ್ ಮೆಂಟ್ ಗಳಿವೆ ಎಂದು ತಿಳಿಸಿದರು.

ಇದು ಸ್ಟಾಲಿನ್ ಬಾಡಿಗೆ ಸರ್ಕಾರ ಎಂಬ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆಯಾಗಿ, ‌ಅವರ ತಂದೆಯವರು ಏನು ಹೇಳಿದ್ದಾರೆ. ಮೊದಲು ಅದನ್ನು ಅರ್ಥ ಮಾಡಿಕೊಳ್ಳಲಿ. ರಾಜಕಾರಣ ಬಿಟ್ಟು, ರಾಜ್ಯದ ಹಿತಾಸಕ್ತಿ ಕಾಪಾಡಲಿ ಎಂದು ಡಿಕೆಶಿ ತಿರುಗೇಟು ನೀಡಿದರು.

5 ಮಂದಿ ತಜ್ಞರ ಸಮಿತಿ ರಚಿಸಿ, ರಾಜ್ಯದ ಕಾವೇರಿ ಜಲಾನಯನದ ಸ್ಥಿತಿಗತಿ ಅಧ್ಯಯಮ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿ ಕಾವೇರಿ ವಿವಾದ ಪರಿಹರಿಸಬೇಕೆಂದು ಮಾಜಿ ಪ್ರಧಾನಿ ದೇವೇಗೌಡ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!