Mysore
25
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಡೆತ್​ನೋಟ್ ಬರೆದಿಟ್ಟು ಸಾವಿಗೆ ಶರಣಾದ ಬಂಡೇಮಠ ಸ್ವಾಮೀಜಿ

ರಾಮನಗರ: ಮಾಗಡಿ ತಾಲ್ಲೂಕಿನ  ಬಂಡೇಮಠದ ಬೆಟ್ಟದ ಮೇಲಿನ ಮನೆಯ ಕಿಟಕಿಗೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು  ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಇದರಿಂದ ಮಠದ ಭಕ್ತರಲ್ಲಿ ಆತಂಕ ಮನೆ ಮಾಡಿದೆ.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಶ್ರೀಗಳು, ವೇದ, ಉಪನಿಷತ್ ವ್ಯಾಸಂಗ ಮಾಡಿದ್ದರು. ಸಿದ್ದಗಂಗಾ ಮಠದಲ್ಲೇ ಶ್ರೀಗಳಿಂದ ದೀಕ್ಷೆ ಪಡೆದು, ನಂತರ ಬಂಡೆಮಠದಲ್ಲಿ ಕಿರಿಯ ಸ್ವಾಮಿಯಾಗಿದ್ದರು. ಎರಡು ವರ್ಷದ ನಂತರ ಪೀಠ ಸ್ವೀಕರಿಸಿದ್ದು. ಇತ್ತೀಚೆಗೆ 25 ವರ್ಷದ ಪೀಠಾರೋಹಣ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದರು.

ನೆಲಮಂಗಲ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮಧ್ಯಾಹ್ನ 3:30ಕ್ಕೆ ಮಠದ ಆವರಣದಲ್ಲಿ  ಲಿಂಗಾಯತ ಮಠದ ಪರಂಪರೆ ಸಂಪ್ರದಾಯದಂತೆ ಶ್ರೀಗಳ ಅಂತ್ಯಸಂಸ್ಕಾರ ನಡೆಯಲಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!