Mysore
24
haze

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಏಶ್ಯಕಪ್: ಪಾಕ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ

ಪಲ್ಲೆಕಲೆ : ಏಶ್ಯಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶನಿವಾರ ಟಾಸ್ ಜಯಿಸಿರುವ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಈ ಕ್ಷಣದಲ್ಲಿ ಮಳೆ ಇಲ್ಲ. ಹೀಗಾಗಿ ಪಲ್ಲೆಕಲೆ ಮೈದಾನದ ಮೇಲಿನ ಹೊದಿಕೆಯನ್ನು ತೆಗೆಯಲಾಗಿದೆ. ಈ ಪಂದ್ಯಕ್ಕೆ ಮುಹಮ್ಮದ್ ಶಮಿ ಅಲಭ್ಯರಾಗಿದ್ದು, ಅವರ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಗೆ ಅವಕಾಶ ನೀಡಲಾಗಿದೆ.

ಪ್ರಸಕ್ತ ಟೂರ್ನಮೆಂಟ್ ನಲ್ಲಿ ಭಾರತ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಪಾಕಿಸ್ತಾನವು ಈಗಾಗಲೇ ನೇಪಾಳ ವಿರುದ್ಧ ಆಡಿರುವ ಉದ್ಘಾಟನಾ ಪಂದ್ಯವನ್ನು 238 ರನ್ ಅಂತರದಿಂದ ಗೆದ್ದುಕೊಂಡಿದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು 132 ಏಕದಿನ ಪಂದ್ಯಗಳನ್ನು ಆಡಿದ್ದು ಈ ಪೈಕಿ ಭಾರತ 55ರಲ್ಲಿ ಜಯ ಸಾಧಿಸಿದರೆ, ಪಾಕಿಸ್ತಾನವು 73ರಲ್ಲಿ ಗೆಲುವು ಕಂಡಿದೆ. ಏಶ್ಯಕಪ್ ನಲ್ಲಿ ಉಭಯ ತಂಡಗಳು 13 ಏಕದಿನ ಪಂದ್ಯಗಳನ್ನು ಆಡಿದ್ದು ಭಾರತ 7ರಲ್ಲಿ ಜಯ ಸಾಧಿಸಿದರೆ, ಪಾಕ್ 5 ಬಾರಿ ಗೆದ್ದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!