Mysore
16
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಕೇರಳದಲ್ಲಿ ಮತ್ತೆ ಬಾಂಬ್ ಸದ್ದು : ಮನೆಯ ಮೇಲೆ ನಾಡ ಬಾಂಬ್ ದಾಳಿ

ತಿರುವನಂತಪುರಂ : ಕೇರಳದಲ್ಲಿ ಮತ್ತೆ ಬಾಂಬ್ ಸದ್ದು ಕೇಳಿಸಿದೆ, ತಿರುವನಂತಪುರಂ ಬಳಿಯ ಪೆರುಮಾತುರದಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಗಳು ಮನೆಗಳ ಮೇಲೆ ನಾಡ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ವಾಹನದ ಬಳಿ ಬಾಂಬ್ ಸ್ಫೋಟಗೊಂಡಿದ್ದರಿಂದ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಾಯಗೊಂಡಿದ್ದಾರೆ.

ಈ ಸಂಬಂಧ ಅಟ್ಟಿಂಗಲ್ ನಿವಾಸಿಗಳಾದ ಸಫೀರ್, ಆಕಾಶ್ ಮತ್ತು ಅಬ್ದುಲ್ ರಹಿಮಾನ್ ಅವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪೋಲೀಸರ ಪ್ರಕಾರ, ಇಬ್ಬರು ಸ್ಥಳೀಯರು ಕಾರಿನಲ್ಲಿ ಮದ್ಯ ಸೇವಿಸುತ್ತಿರುವುದನ್ನು ನೋಡಿ ಗ್ಯಾಂಗ್ ಒಂದು ಕೋಪಗೊಂಡಿತ್ತು ಮತ್ತು ದಾಂಧಲೆ ನಡೆಸಿತು.

ಸಮೀಪದ ಮನೆಗಳಲ್ಲಿ ಆಶ್ರಯ ಪಡೆದ ಯುವಕರನ್ನು ತಂಡವು ಬೆನ್ನಟ್ಟಿತ್ತು, ಆಗ ದುಷ್ಕರ್ಮಿಗಳು ನಾಡ ಬಾಂಬ್​ ಅನ್ನು ಅಲ್ಲಿದ್ದ ಮನೆಗಳ ಮೇಲೆ ಎಸೆದು ಭಯದ ವಾತಾವರಣ ಸೃಷ್ಟಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಆರೋಪಿಯೊಬ್ಬನ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!