Mysore
24
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಅಮೆರಿಕಾದ ಕ್ಲಾಡಿಯಾ ಗೋಲ್ಡಿನ್‌ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್‌ ಪ್ರಶಸ್ತಿ

ಕ್ಯಾಲಿಫೋರ್ನಿಯಾ : ಅಮೆರಿಕಾದ ಖ್ಯಾತ ಅರ್ಥಶಾಸ್ತ್ರಜ್ಞೆ ಕ್ಲಾಡಿಯಾ ಗೋಲ್ಡಿನ್ ಅವರು 2023ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಮಹಿಳಾ ಕಾರ್ಮಿಕ ಮಾರುಕಟ್ಟೆ ಫಲಿತಾಂಶಗಳ ಕುರಿತಂತೆ ನಮ್ಮ ಜ್ಞಾನವನ್ನು ಹೆಚ್ಚಿಸಿದ್ದಕ್ಕಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸಾಯನ್ಸಸ್ ಹೇಳಿದೆ.

ಈ ವರ್ಷದ ನೊಬೆಲ್ ಪ್ರಶಸ್ತಿಗಳ ಪೈಕಿ ಇತರ ಕ್ಷೇತ್ರಗಳ ಪ್ರಶಸ್ತಿಯನ್ನು ಈಗಾಗಲೇ ಘೋಷಿಸಲಾಗಿದ್ದು ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಈ ಬಾರಿಯ ಕೊನೆಯ ಪ್ರಶಸ್ತಿಯಾಗಿದೆ.

ನೊಬೆಲ್ ಪ್ರಶಸ್ತಿಯನ್ನು ಆರಂಭಿಸಿದ್ದ ಆಲ್ಫ್ರೆಡ್ ನೊಬೆಲ್ ಮೊದಲು ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ನೊಬೆಲ್ ಪ್ರಶಸ್ತಿಯನ್ನು ಆರಂಭಿಸಿದ್ದರೆ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಸ್ವೀಡನ್ ದೇಶದ ಸೆಂಟ್ರಲ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ 1968ರಲ್ಲಿ ಸೇರಿಸಲಾಗಿತ್ತು.

1969ರಲ್ಲಿ ಮೊದಲ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ನೀಡಲಾಯಿತು. ಈ ಹಿಂದೆ ಈ ಪ್ರಶಸ್ತಿಯನ್ನು ಫ್ರೀಡ್ರಿಕ್ ಆಗಸ್ಟ್ ವೊನ್ ಹಯೆಕ್, ಮಿಲ್ಟನ್ ಫ್ರೀಡ್ಮ್ಯಾನ್ ಮತ್ತು ಪೌ, ಕ್ರಗ್ಮ್ಯಾನ್‌ನಂತಹ ಖ್ಯಾತ ಅರ್ಥಶಾಸ್ತ್ರಜ್ಞರು ಗೆದ್ದಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!