Mysore
15
few clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಕಾಂಗ್ರೆಸ್ ಹಲವು ಭಾಗ್ಯಗಳ ಜೊತೆಗೆ ಕೊಲೆ ಭಾಗ್ಯವನ್ನೂ ನೀಡಿದೆ : ಆರ್ ಅಶೋಕ್

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ‌ ಅಧಿಕಾರಕ್ಕೆ ಬಂದ ಬಳಿಕ ಕೊಲೆ ಭಾಗ್ಯವನ್ನು‌ ನೀಡಿದೆ ಎಂದು ಮಾಜಿ ಸಚಿವ ಆರ್ ಅಶೋಕ್ ಕಿಡಿಕಾರಿದರು.

ವಿಧಾನಸೌಧದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಲವು ಭಾಗ್ಯ ನೀಡಿದೆ. ಈ‌ಗ ಕೊಲೆ ಭಾಗ್ಯ ಸೇರ್ಪಡೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಜೈನ ಮುನಿ ಹತ್ಯೆ ದೇಶ ಬೆಚ್ಚಿ ಬಿದ್ದಿದೆ. ಇದರ ಹಿಂದೆ‌ ವಿದೇಶಿ ಸಂಚು ಇದೆ. ಅದಕ್ಕೆ ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದರು. ಟಿ ನರಸೀಪುರದಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮಲ್ಲಿ‌ ಮೆರವಣಿಗೆಯಲ್ಲೇ ರಾಜಾರೋಷವಾಗಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆಯಾಗಿದೆ. ಜನರು ಭಯದಲ್ಲಿ ಇದ್ದಾರೆ. ಬೆಂಗಳೂರಿನಲ್ಲಿ ಜೋಡಿ ಕೊಲೆ ಆಗಿದೆ. ಕಾನೂನು‌ ಸುವ್ಯವಸ್ಥೆ ಹದಗೆಟ್ಟಿದೆ ಎಂದರು.

ನಾವು ಅಧಿಕಾರದಲ್ಲಿ ಇದ್ದಾಗ ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ್ದ ಕಿಡಿಗೇಡಿಗಳನ್ನು ಹಡೆಮುರಿ ಕಟ್ಟಿದ್ದೆವು. ಆದರೆ ಇವಾಗ ಪಾಕಿಸ್ತಾನದ ಜಿಂದಾಬಾದ್ ಕೂಗುವ ಮಟ್ಟಕ್ಕೆ ಜನರು ಬಂದಿದ್ದಾರೆ. ಪೊಲೀಸರ ಹಾಗೂ ಕಾನೂನು ಸುವ್ಯವಸ್ಥೆಯ ಭಯ ಇಲ್ಲ, ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿ ಹೋಗಿದೆ. ಈ ಹಿನ್ನಲೆಯಲ್ಲಿ ರಾಜ್ಯಪಾಲರಿಂದ ಮನವಿ ಮಾಡುತ್ತೇವೆ. ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!