Mysore
75
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಸುಡಾನ್ ನಲ್ಲಿ ಸಿಲುಕಿಕೊಂಡಿರುವ ರಾಜ್ಯದ ಹಕ್ಕಿಪಿಕ್ಕಿ ಜನರ ಸುರಕ್ಷಿತ ವಾಪಸಾತಿಗೆ ಎಲ್ಲಾ ಕ್ರಮ : ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ : ಆಂತರಿಕ ಕಲಹದಿಂದ ಜರ್ಜರಿತವಾಗಿರುವ, ಆಫ್ರಿಕಾದ ಸುಡಾನ್ ದೇಶದಲ್ಲಿ, ಸಿಕ್ಕಿ ಹಾಕಿಕೊಂಡಿರುವ ಆರೆ ಅಲೆಮಾರಿ, ಹಕ್ಕಿ ಪಿಕ್ಕಿ ಜನಾಂಗಕ್ಕೆ ಸೇರಿದ, ಕರ್ನಾಟಕ ನಿವಾಸಿಗಳ ರಕ್ಷಣೆಗೆ, ಸಾಧ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ರವರು, ಒಳಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳಿಗೆ, ನಿರ್ದೇಶಿಸಿದ್ದಾರೆ.
ಸಚಿವರು ಇಂದು, ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರನ್ನು ಸಂಪರ್ಕಿಸಿ, ಮಾತನಾಡಿ, ಸುಡಾನ್ ದೇಶದಲ್ಲಿ ಸಿಕ್ಕಿ ಹಾಕಿಕೊಂಡು, ಆತಂಕಕ್ಕೆ ಒಳಗಾಗಿರುವ ಕರ್ನಾಟಕ ನಿವಾಸಿಗಳ ಕುಟುಂಬದ ಸದಸ್ಯರನ್ನು ಗುರುತಿಸಿ, ಸುರಕ್ಷಿತ ವಾಪಸಾತಿಗೆ, ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿರುವ ಜನರ ಆತಂಕವನ್ನು ಕಡಿಮೆ ಮಾಡಿ, ಅವರ ಸುರಕ್ಷಿತ ವಾಪಸಾತಿಗಾಗಿ, ಕೇಂದ್ರ ವಿದೇಶಾಂಗ ಸಚಿವಾಲಯದ ಜತೆಗೂ ಸತತ ಸಂಪರ್ಕದಲ್ಲಿದ್ದು ಸಮನ್ವಯತೆಯಿಂದ, ಸಂಕಷ್ಟಿತರ ನೆರವಿಗೆ, ಬರಬೇಕೆಂದು, ಸಚಿವರು ನಿರ್ದೇಶಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!