Mysore
15
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ವಂದೇ ಭಾರತ್ ಸೇರಿ ಎಲ್ಲಾ ರೈಲುಗಳ ಎಸಿ ಚೇರ್ ಕಾರ್, ಎಕ್ಸಿಕ್ಯೂಟಿವ್ ಟಿಕೆಟ್ ದರ ಶೇ. 25 ರವರೆಗೆ ಕಡಿತ

ನವದೆಹಲಿ: ವಂದೇ ಭಾರತ್ ರೈಲು ಸೇರಿದಂತೆ ಎಲ್ಲಾ ರೈಲುಗಳ ಎಸಿ ಚೇರ್ ಕಾರ್‌ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್‌ಗಳ ಟಿಕೆಟ್ ದರ ಮತ್ತು ಅನುಭೂತಿ ಹಾಗೂ ವಿಸ್ಟಾಡೋಮ್ ಕೋಚ್‌ಗಳ ದರವನ್ನು ಲಭ್ಯತೆಗೆ ಅನುಗುಣವಾಗಿ ಶೇಕಡಾ 25 ರಷ್ಟು ಕಡಿತಗೊಳಿಸಲಾಗುವುದು ಎಂದು ರೈಲ್ವೆ ಮಂಡಳಿಯ ಆದೇಶ ಹೊರಡಿಸಿದೆ.

ಈ ದರಗಳು ಸಹ ಸ್ಪರ್ಧಾತ್ಮಕ ಸಾರಿಗೆ ವಿಧಾನಗಳ ಮೇಲೆ ಅವಲಂಬಿತವಾಗಿರುತ್ತದೆ.

ಭ್ಯವಿರುವ ಸ್ಥಾನಗಳ ಬಳಕೆಯನ್ನು ಉತ್ತಮಗೊಳಿಸುವ ದೃಷ್ಟಿಯಿಂದ, ರೈಲ್ವೆ ಸಚಿವಾಲಯವು ರೈಲ್ವೆ ವಲಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ ಎಸಿ ಚೇರ್ ಕಾರ್ ರೈಲುಗಳಲ್ಲಿ ರಿಯಾಯಿತಿ ದರದ ಯೋಜನೆಗಳನ್ನು ಪರಿಚಯಿಸುವ ಅಧಿಕಾರ ನೀಡಲು ನಿರ್ಧರಿಸಿದೆ.

“ಈ ಯೋಜನೆಯು ಅನುಭೂತಿ ಮತ್ತು ವಿಸ್ಟಾಡೋಮ್ ಕೋಚ್‌ಗಳು ಸೇರಿದಂತೆ ಎಸಿ ಆಸನ ಸೌಕರ್ಯಗಳನ್ನು ಹೊಂದಿರುವ ಎಲ್ಲಾ ರೈಲುಗಳ ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಗಳಿಗೆ ಅನ್ವಯಿಸುತ್ತದೆ” ಎಂದು ರೈಲ್ವೆ ಮಂಡಳಿಯ ಆದೇಶದಲ್ಲಿ ತಿಳಿಸಿದೆ.

“ರಿಯಾಯಿತಿಯೂ ಮೂಲ ದರದಲ್ಲಿ ಗರಿಷ್ಠ ಶೇ. 25 ವರೆಗೆ ಇರುತ್ತದೆ. ರಿಸರ್ವೆಷನ್ ಶುಲ್ಕ, ಸೂಪರ್ ಫಾಸ್ಟ್ ಸರ್ಚಾರ್ಜ್, ಜಿಎಸ್ಟಿ, ಇತ್ಯಾದಿಗಳಂತಹ ಇತರ ಶುಲ್ಕಗಳನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ.

ಆಕ್ಯುಪೆನ್ಸೀ ಶೇಕಡಾ 50 ಕ್ಕಿಂತ ಕಡಿಮೆಯಿದ್ದರೆ ಯಾವುದೇ ರೈಲು ಅಥವಾ ಎಲ್ಲಾ ವರ್ಗಗಳಲ್ಲಿ ರಿಯಾಯಿತಿಯನ್ನು ಒದಗಿಸಬಹುದು ಎಂದು ರೈಲ್ವೆ ಮಂಡಳಿ ಸ್ಪಷ್ಟವಾಗಿ ಹೇಳಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!