ನವದೆಹಲಿ: ಇಂನ್ಸ್ಟಾಗ್ರಾಮ್‌ನಲ್ಲಿ ಅನ್ ಫಾಲೋ ಮಾಡಿ ಬಳಿಕ ಮತ್ತೊಂದು ಶಾಕ್ ನೀಡಿದ ಬಿಗ್ ಬಿ ಅಮಿತಾಭ್ ಬಚ್ಚನ್.
ತಮ್ಮ ಸೊಸೆ ಐಶ್ವರ್ಯ ರೈ ಅವರನ್ನು ಇಂನ್ಸ್ಟಾಗ್ರಾಮ್‌ನಲ್ಲಿ ಅನ್ ಫಾಲೋ ಮಾಇದ್ದರು. ಅದರ ಬೆನ್ನಲೇ ಇದೀಗ ಪೋಸ್ಟ್ ಒಂದನ್ನು ಹಾಕುವ ಮೂಲಕ ಬಿಗ್ ಟ್ವಿಸ್ಟ್ ನೀಡಿದ್ದಾರೆ.
ಎಲ್ಲವೂ ಹೇಳಿದೆ, ಎಲ್ಲವೂ ಮಾಡಿದೆ, ಮಾಡುವುದನ್ನು ಮಾಡಿ ಆಗಿದೆ ಎಂದು ಪೋಸ್ಟ್ ಅಮಿತಾಭ್ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್ ಅಭಿಷೇಕ್ ಹಾಗೂ ಐಶ್ ಇಬ್ಬರ ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿಗೆ ಮತ್ತಷ್ಟು ತುಷ್ಟೀಕರಣ ನೀಡಿದಂತಾಗಿದೆ.
ಅಷ್ಟೇ ಅಲ್ಲದೇ ಇತ್ತೀಚೆಗೆ ಒಂದು ಖಾಸಗಿ ಕಾರ್ಯಕ್ರಮದಲ್ಲಿ ಕುಟುಂಬದವರೊಂದಿಗೆ ಬಂದಿದ್ದ ಐಶ್ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರ ಕೈನಲ್ಲೂ ಅವರ ವೆಡ್ಡಿಂಗ್ ರಿಂಗ್ ಇಲ್ಲದಿರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಈ ಎಲ್ಲಾ ಸೂಚನೆಗಳನ್ನು ಗಮನಿಸಿರುವ ಅಭಿಮಾನಿಗಳು ಇಬ್ಬರ ಮಧ್ಯೆ ಏನೂ ಸರಿ ಇಲ್ಲ ಎಂದು ಅನುಮಾನಕ್ಕೊಳಗಾಗಿದ್ದಾರೆ.
ಇದೀಗ ಬಿಗ್ ಬಿ ಅವರ ಈ ಪೋಸ್ಟ್ ಅಭಿಮಾನಿಗಳ ಅನುಮಾನಕ್ಕೆ ಉತ್ತರ ನೀಡಿದಂತಿದೆ.