Mysore
15
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಆಧಾರ್ ಉಚಿತ ‘ಅಪ್ಡೇಟ್’ ಸೇವೆ 3 ತಿಂಗಳು ವಿಸ್ತರಣೆ : ‘UIDAI’ ಮಹತ್ವದ ಆದೇಶ

ನವದೆಹಲಿ : ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ದಾಖಲೆಗಳ ಉಚಿತ ಆಧಾರ್ ನವೀಕರಣವನ್ನು ಜೂನ್ 14 ರಿಂದ ಸೆಪ್ಟೆಂಬರ್ 14, 2023 ರವರೆಗೆ 3 ತಿಂಗಳು ವಿಸ್ತರಿಸಿದೆ.

ಮಾರ್ಚ್ 15 ರಿಂದ ಸೆಪ್ಟೆಂಬರ್ 14, 2023 ರವರೆಗೆ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಗಳನ್ನು ಆನ್ಲೈನ್ನಲ್ಲಿ ಉಚಿತವಾಗಿ ನವೀಕರಿಸಬಹುದು ಮತ್ತು ಅಪ್ಲೋಡ್ ಮಾಡಬಹುದು. ಈ ಮೊದಲು ದಿನಾಂಕ ಜೂನ್ 14, 2023 ಆಗಿತ್ತು.

ಯುಐಡಿಎಐ ವೆಬ್ಸೈಟ್, “ಜನಸಂಖ್ಯಾ ಮಾಹಿತಿಯ ನಿರಂತರ ನಿಖರತೆಗಾಗಿ ದಯವಿಟ್ಟು ಆಧಾರ್ ನವೀಕರಿಸಿ. ಅದನ್ನು ನವೀಕರಿಸಲು, ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸ ದಾಖಲೆಗಳ ಪುರಾವೆಗಳನ್ನು ಅಪ್ಲೋಡ್ ಮಾಡಿ” ಎಂದಿದೆ.

ಅಂದಹಾಗೆ, https://myaadhaar.uidai.gov.in ಉಚಿತ ನವೀಕರಣವನ್ನು ಆನ್ಲೈನ್ ನಲ್ಲಿ ಮಾಡಬಹುದು. ಇನ್ನು ಸಿಎಸ್ಸಿಯಲ್ಲಿ ನವೀಕರಣಕ್ಕಾಗಿ ಎಂದಿನಂತೆ 25 ರೂಪಾಯಿ ಪಾವತಿಸಬೇಕಾಗುತ್ತೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!