Mysore
25
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಬೆಂಗಳೂರಲ್ಲಿ ಕಾರು ಹತ್ತಿಸಿ ಯುವಕನ ಕೊಲೆ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಜೆಸಿ ನಗರದಲ್ಲಿ ಭೀಕರ ಕೊಲೆಯೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿನಿಮಾ ಸ್ಟೈಲ್‍ನಲ್ಲಿ ಸ್ಕಾರ್ಪಿಯೋ ಹತ್ತಿಸಿ ಯುವಕನನ್ನು ಹತ್ಯೆ ಮಾಡಲಾಗಿದೆ.

ಮೃತನನ್ನು ಅಸ್ಗರ್ ಹಾಗೂ ಆರೋಪಿಯನ್ನು ಅಮ್ರಿನ್ ಎಂದು ಗುರುತಿಸಲಾಗಿದೆ. ಅಕ್ಟೋಬರ್ 20ರಂದು ನಡೆದ ಭೀಕರ ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ 11 ದಿನಗಳ ಬಳಿಕ ಕೊಲೆ ರಹಸ್ಯ ಬಯಲಾಗಿದೆ.

ಅಸ್ಗರ್ ಹಾಗೂ ಅಮ್ರಿನ್ ಪರಿಚಯಸ್ಥರು. ಅಸ್ಗರ್ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುತ್ತಿದ್ದನು. ಅಂತೆಯೇ ಆರೋಪಿ, ಅಸ್ಗರ್ ಬಳಿ ಕಾರೊಂದನ್ನು ಖರೀದಿಸಿದ್ದರು. ಬಳಿಕ ನಾಲ್ಕು ಲಕ್ಷ ಹಣದ ವಿಚಾರಕ್ಕೆ ಆರೋಪಿ ಹಾಗೂ ಅಸ್ಗರ್ ಮಧ್ಯೆ ಜಗಳ ನಡೆದಿದೆ. ಈ ಗಲಾಟೆ ತಾರಕಕ್ಕೇರಿ ಅಸ್ಗರ್ ಮೇಲೆ ಆರೋಪಿ ಹಲ್ಲೆ ಮಾಡಿದ್ದನು.

ಈ ಸಂಬಂಧ ಅಸ್ಗರ್, ಜೆಸಿ ನಗರ ಠಾಣೆಗೆ ದೂರು ನೀಡಿದ್ದ. ದೂರಿನ ಹಿನ್ನೆಲೆ ಜೆ.ಸಿ ನಗರ ಪೊಲೀಸರು ಆರೋಪಿ ವಿರುದ್ಧ 307 ಕೇಸ್ ಹಾಕಿದ್ದರು. ನಂತರ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಅಸ್ಗರ್‍ ಗೆ ಆರೋಪಿ ಒತ್ತಡ ಹಾಕಿದ್ದ. ಈ ಸಂಬಂಧ ಫೋನ್ ಮಾಡಿ ಮಾತಾಡೋಣ ಅಂತಾ ಕರೆದಿದ್ದ. ಅಂತೆಯೇ ಮಾತನಾಡಲೆಂದು ಬಂದಿದ್ದ ಅಸ್ಗರ್ ಬಳಿಯೂ ಕೇಸ್ ವಾಪಸ್ ತಗೋ ಎಂದು ಅಮ್ರಿನ್ ಹೇಳಿದ್ದಾನೆ. ಈ ವೇಳೆ ಅಸ್ಗರ್, ಯಾವುದೇ ಕಾರಣಕ್ಕೂ ಕೇಸ್ ವಾಪಸ್ ತೆಗೆದುಕೊಳ್ಳಲ್ಲ ಅಂತಾ ಹೇಳಿ ಹೊರಟಿದ್ದ.

ಅಮ್ರಿನ್ ಜೊತೆ ಮಾತನಾಡಲು ಬರುವಾಗ ಅಸ್ಗರ್ ತನ್ನ ಗೆಳೆಯನನ್ನು ಕರೆದುಕೊಂಡು ಬಂದಿದೆ. ಅಂತೆಯೇ ಜೊತೆಗಿದ್ದ ಗೆಳೆಯನ ಡ್ರಾಪ್ ಮಾಡಲು ಅಸ್ಗರ್ ಪಾಟರಿ ರಸ್ತೆಗೆ ಬಂದಿದ್ದ. ಈ ವೇಳೆ ಅಮ್ರಿನ್ ಸ್ಕಾರ್ಪಿಯೋ ಕಾರಿನಿಂದ ಬೈಕ್‍ಗೆ ಡಿಕ್ಕಿ ಹೊಡೆಸಿದ್ದಾನೆ. ಸ್ಪೀಡಾಗಿ ಬಂದು ಬೈಕ್‍ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ. ಘಟನೆಯಲ್ಲಿ ಗಂಭೀರ ಗಾಯಗೊಂಡು ಅಸ್ಗರ್ ಸಾವನ್ನಪ್ಪಿದರೆ, ಆತನ ಸ್ನೇಹಿತನಿಗೆ ಕೈ ಕಾಲಿಗೆ ಗಂಭೀರ ಗಾಯಗಳಾಗಿವೆ.

ಮೊದಲು ಆಕ್ಸಿಡೆಂಟ್ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಸಂಚಾರಿ ಪೊಲೀಸರು, ಅಸ್ಗರ್ ಗೆಳೆಯನ ಹೇಳಿಕೆ ಬಳಿಕ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಕರಣ ಸಂಬಂಧ ಆರೋಪಿ ಅಮ್ರಿನ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!