ಬೆಂಗಳೂರು : ಹೊಸ ವರ್ಷಕ್ಕೆ ಕೌಂಟ್‌ಡೌನ್ ಶುರುವಾಗಿರುವಾಗಲೇ ಮಧ್ಯ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ.
ಮಧ್ಯ ಕಂಪನಿಗಳು ಹೊಸ ವರ್ಷ ಆಗಮನದ ಜೋಶ್ ನಲ್ಲಿದ್ದ ಪಾನ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವಂತೆ ಮಾಡಿವೆ.
ರಾಜ್ಯದಲ್ಲಿ ಈಗಾಗಲೇ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸರ್ಕಾರದ ಖಜಾನೆಗೆ ಬೂಸ್ಟರ್ ಡೋಸ್ ಆಗಿದ್ದ ಪಾನಪ್ರಿಯರಿಗೆ ಇದೀಗ ಬೆಲೆ ಏರಿಕೆಯ ಅಮಲೇರಲು ತಯಾರಿ ನಡೆದಿದೆ. ರಾಜ್ಯ ಸರ್ಕಾರ ಆರಂಭದಲ್ಲಿಯೇ ಆರ್ಥಿಕ ಮೂಲವಾದ ಅಬಕಾರಿ ಸುಂಕದ ಬೆಲೆಯಲ್ಲಿ 20% ಏರಿಕೆ ಮಾಡಿತ್ತು. ಇದೀಗ ನ್ಯೂ ಇಯರ್ ಗೆ ಎಣ್ಣೆ ಪಾರ್ಟಿ ಮಾಡಲು ಚಿಂತಿಸಿದ್ದವರ ಆಸೆಗೆ ಮಧ್ಯದ ಬೆಲೆ ಏರಿಕೆ ತಣ್ಣೀರೆರಚಿದೆ.
ಜನವರಿ 1 ರಿಂದ ಮಧ್ಯದ ದರ ಏರಿಕೆಗೆ ಸೂಚನೆ ನೀಡಲಾಗಿದೆ. ಪ್ರಸ್ತುತ ಒಟಿ 180 ಎಂಎಲ್ ಗೆ 100 ರೂ. ಇದೆ. ಜನವರಿ ಒಂದರಿಂದ 180 ಎಂಎಲ್ ನ ಒಟಿ ಪ್ಯಾಕೆಟ್ ಬೆಲೆ 123 ರೂ. ಆಗಲಿದೆ. ಇನ್ನು ಬಿಪಿ ದರ ಪ್ರಸ್ತುತ 123 ರೂ. ಇದೆ. ಜನವರಿ ಒಂದರಿಂದ 159 ರೂ. ಆಗಲಿದೆ.
ಕೆಳ ವರ್ಗದ ಜನ ಅತಿ ಹೆಚ್ಚು ಸೇವನೆ ಮಾಡುವ ಮದ್ಯದ ದರ ಏರಿಕೆಗೆ ಚಿಂತನೆ ನಡೆದಿದೆ. ಮಧ್ಯ ತಯಾರಿಕಾ ಕಂಪನಿಗಳು ಜನವರಿ 1 ರಿಂದ ದರ ಏರಿಕೆ ಮಾಡುವಂತೆ ಬಾರ್ ಮಾಲೀಕರಿಗೆ ಸೂಚನೆ ನೀಡಿವೆ. ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಾಣೆ ವೆಚ್ಚಗಳು ಹೆಚ್ಚಾಗಿರುವ ಕಾರಣದಿಂದಾಗಿ ಎಣ್ಣೆಯ ಬೆಲೆ ಏರಿಕೆ ಮಾಡುವುದು ಕಂಪನಿಗಳಿಗೆ ಅತ್ಯಗತ್ಯವಾಗಿದೆ. ಹಾಗಾಗಿ ಹೊಸ ವರ್ಷಕ್ಕೆ ಮದ್ಯ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.





