Mysore
23
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಆಟೋದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

ಸಿದ್ದಾಪುರ : ಮಹಿಳೆಯೊಬ್ಬರು ಮಂಗಳವಾರ ಆಟೋದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಸಿದ್ದಾಪುರ ಸಮೀಪದ ನಡಿಕೇರಿಯಂಡ ತೋಟದ ಕಾರ್ಮಿಕ ಪ್ರಶಾಂತ್ ಎಂಬವರ ಪತ್ನಿ ತುಳಸಿ (28) ಎಂಬವರೆ ಆಟೋದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ.

ಪ್ರಶಾಂತ್ ಅವರ ಸಂಬಂಧಿಯೊಬ್ಬರು ಸಾವನ್ನಪ್ಪಿದ್ದರಿಂದ ಪಕ್ಕದ ಮನೆಯ ಇಬ್ಬರು ಮಹಿಳೆಯರಿಗೆ ತನ್ನ ಗರ್ಭಿಣಿ ಪತ್ನಿಯನ್ನು ನೋಡಿಕೊಳ್ಳುವಂತೆ ಹೇಳಿ ಮಂಗಳವಾರ ಬೆಳಿಗ್ಗೆ ಪ್ರಶಾಂತ್ ಸಂಬಂಧಿ ಮನೆಗೆ ತೆರಳಿದ್ದರು. ಪ್ರಶಾಂತ್ ಮನೆಯಿಂದ ತೆರಳಿದ ಕೆಲವು ಸಮಯಗಳ ನಂತರ ತುಳಸಿಗೆ ಹೆರಿಗೆ ನೋವು ಪ್ರಾರಂಭವಾಗಿದೆ. ಕೂಡಲೇ ಗರ್ಭಿಣಿಯ ಜೊತೆಗಿದ್ದವರು ಆಟೋ ಮೂಲಕ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲು ಮುಂದಾಗುತ್ತಿದ್ದಂತೆ ತುಳಸಿ ಆಟೋದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ತಾಯಿ ಮತ್ತು ಮಗು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯವಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!