Mysore
21
mist

Social Media

ಗುರುವಾರ, 29 ಜನವರಿ 2026
Light
Dark

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 74 ಹೊಸ ಕೊವಿಡ್ ಪ್ರಕರಣ ಪತ್ತೆ, 2 ಸಾವು

ರಾಜ್ಯದಲ್ಲಿ ಕೊನೆಯ 24 ಗಂಟೆಗಳಲ್ಲಿ ಒಟ್ಟು 74 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಹಂಚಿಕೊಂಡಿದೆ. 44 ಜನ ಡಿಸ್‌ಚಾರ್ಜ್‌ ಆಗಿದ್ದು, ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 464 ಇದೆ. ಕೊನೆಯ 24 ಗಂಟೆಗಳಲ್ಲಿ 6403 ಟೆಸ್ಟ್‌ಗಳು ನಡೆದಿವೆ, 4680 ಆರ್‌ಟಿಪಿಸಿಆರ್‌ ಟೆಸ್ಟ್‌ಗಳು ನಡೆದಿವೆ ಹಾಗೂ 1723 ರ್ಯಾಟ್‌ ಟೆಸ್ಟ್‌ಗಳು ನಡೆದಿವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 1.15% ಇದೆ. ಕಳೆದ 24 ಗಂಟೆಗಳಲ್ಲಿ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಮೈಸೂರಿನಲ್ಲಿ 51 ವರ್ಷದ ಸೋಂಕಿತ ಸಾವನ್ನಪ್ಪಿದ್ದಾರೆ. 

ಒಟ್ಟು 464 ಸಕ್ರಿಯ ಪ್ರಕರಣಗಳ ಪೈಕಿ 423 ಸೋಂಕಿತರನ್ನು ಹೋಮ್‌ ಐಸೋಲೇಷನ್‌ ಮಾಡಲಾಗಿದ್ದು, 41 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ 16 ಸೋಂಕಿತರು ಐಸಿಯುನಲ್ಲಿದ್ದು, 25 ಸೋಂಕಿತರು ಸಾಮಾನ್ಯ ವಾರ್ಡ್‌ನಲ್ಲಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಮೈಸೂರಿನಲ್ಲಿ 2, ಮಂಡ್ಯದಲ್ಲಿ 2 ಹಾಗೂ ಚಾಮರಾಜನಗರದಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ. ಮೈಸೂರಿನಲ್ಲಿ ಒಟ್ಟು 32, ಮಂಡ್ಯದಲ್ಲಿ 5 ಹಾಗೂ ಚಾಮರಾಜನಗರದಲ್ಲಿ 4 ಸಕ್ರಿಯ ಪ್ರಕರಣಗಳಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!