Mysore
19
mist

Social Media

ಬುಧವಾರ, 24 ಡಿಸೆಂಬರ್ 2025
Light
Dark

ತಿರುಪತಿ ತಿಮ್ಮಪ್ಪನಿಗೆ ಬರೋಬ್ಬರಿ 4,411 ಕೋಟಿ ರೂ. ಬಜೆಟ್‌! : ಹುಂಡಿಯಿಂದ ಬಂದ ಆದಾಯ ಎಷ್ಟು?

ತಿರುಪತಿ: ವಿಶ್ವದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಬಜೆಟ್‌ ಮಂಡನೆಯಾಗಿದ್ದು, ಬರೋಬ್ಬರಿ 4,461 ಕೋಟಿ ರೂ.ಗಳ ಅಂದಾಜು ವೆಚ್ಚದೊಂದಿಗೆ 2023-24ರ ವಾರ್ಷಿಕ ಬಜೆಟ್‌ ಅನ್ನು ಅನುಮೋದಿಸಲಾಗಿದೆ. ದೇವಸ್ಥಾನವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಬಜೆಟ್‌ ಅನ್ನು ಮಂಡಿಸಿದ್ದು, 1933ರಲ್ಲಿ ದೇವಾಲಯದ ಟ್ರಸ್ಟ್‌ ಆರಂಭವಾದ ಬಳಿಕ ಇದೇ ಅತಿ ಹೆಚ್ಚಿನ ಬಜೆಟ್‌ ಅಂದಾಜು ಆಗಿದೆ.
ಬುಧವಾರ ಸುದ್ದಿಗೋಷ್ಠಿ ನಡೆಸಿದ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ, ಟಿಟಿಡಿ ಇಒ ಎವಿ. ಧರ್ಮಾರೆಡ್ಡಿ ಅವರು 4411.68 ಕೋಟಿ ರೂ. ಅಂದಾಜು ವೆಚ್ಚದ ವಾರ್ಷಿಕ ಬಜೆಟ್‌ ಅನ್ನು ಬಿಡುಗಡೆಗೊಳಿಸಿದರು. ಫೆಬ್ರವರಿ 15ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬಜೆಟ್‌ಗೆ ಅನುಮೋದನೆ ಪಡೆಯಲಾಗಿದೆ. ಆದರೆ, ರಾಜ್ಯದಲ್ಲಿ ವಿಧಾನ ಪರಿಷತ್‌ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಯಾವುದೇ ಮಹತ್ವದ ಯೋಜನೆಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಬಳಿಕ ತಿರುಪತಿ ದೇವಸ್ಥಾನದ ಹುಂಡಿಯ ಆದಾಯವು ಅಚ್ಚರಿಯ ರೀತಿಯಲ್ಲಿ ಹೆಚ್ಚಾಗಿದೆ. ಕೋವಿಡ್‌ಗಿಂತ ಮೊದಲು ಹುಂಡಿಯಿಂದ ಸಂಗ್ರಹವಾಗುತ್ತಿದ್ದ ಆದಾಯ 1200 ಕೋಟಿ ರೂಪಾಯಿಗಳಷ್ಟಿದ್ದರೆ, 2022-23ರಲ್ಲಿ 1613 ಕೋಟಿಗ ರೂ.ಗಳಷ್ಟಿದೆ. ಕೋವಿಡ್ ಅವಧಿಯಲ್ಲಿನ ವರ್ಚುವಲ್ ಸೇವೆಗಳು ಮತ್ತು ಕೋವಿಡ್ ನಂತರದ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ಕೂಡ ತಿರುಪತಿ ತಿಮ್ಮಪ್ಪನ ಆದಾಯವನ್ನು ಮತ್ತಷ್ಟು ಹೆಚ್ಚಿಸಿವೆ ಎಂದು ಸುಬ್ಬಾರೆಡ್ಡಿ ಹೇಳಿದ್ದಾರೆ.
ಮತ್ತೊಂದೆಡೆ, 2023-2024ರ ಆರ್ಥಿಕ ವರ್ಷದ ವಾರ್ಷಿಕ ವೆಚ್ಚಗಳನ್ನು ಸಹ ಟಿಟಿಡಿ ಅಂದಾಜಿಸಿದೆ. ನೌಕರರಿಗೆ ವೇತನ ಪಾವತಿಗೆ 1,532.20 ಕೋಟಿ ರೂ. ನಿಗದಿಪಡಿಸಲಾಗಿದ್ದು, ಸಾಮಗ್ರಿ ಖರೀದಿಗೆ 690.50 ಕೋಟಿ ರೂ., ಕಾರ್ಪಸ್ ಮತ್ತು ಇತರ ಹೂಡಿಕೆಗಳಿಗೆ 600 ಕೋಟಿ ರೂ., ಇಂಜಿನಿಯರಿಂಗ್ ಕಾಮಗಾರಿಗಳಿಗೆ 300 ಕೋಟಿ ರೂ. ಮತ್ತು ಶ್ರೀನಿವಾಸ ಸೇತು ಕಾಮಗಾರಿಗೆ 25 ಕೋಟಿ ರೂ. ಮತ್ತು ಉದ್ಯೋಗಿಗಳಿಗೆ ಸಾಲ ಮತ್ತು ಮುಂಗಡ ನೀಡುವುದಕ್ಕಾಗಿ 151.62 ಕೋಟಿ ರೂ. ನಿಗದಿಪಡಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!