ರಾಜ್ಯದಲ್ಲಿ ಕೊನೆಯ 24 ಗಂಟೆಗಳಲ್ಲಿ ಒಟ್ಟು 201 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಹಂಚಿಕೊಂಡಿದೆ. 60 ಜನ ಡಿಸ್‌ಚಾರ್ಜ್ ಆಗಿದ್ದು, ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 833 ಇದೆ. ಕೊನೆಯ 24 ಗಂಟೆಗಳಲ್ಲಿ 7060 ಟೆಸ್ಟ್‌ಗಳು ನಡೆದಿವೆ, 5549 ಆರ್‌ಟಿಪಿಸಿಆರ್ ಟೆಸ್ಟ್‌ಗಳು ನಡೆದಿವೆ ಹಾಗೂ 1511 ರ್ಯಾಟ್ ಟೆಸ್ಟ್‌ಗಳು ನಡೆದಿವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 2.84% ಇದೆ. ಕಳೆದ 24 ಗಂಟೆಗಳಲ್ಲಿ ಮೈಸೂರಿನಲ್ಲಿ ಓರ್ವ ಸೋಂಕಿತರು ಸಾವನ್ನಪ್ಪಿದ್ದಾರೆ.
ಒಟ್ಟು 833 ಸಕ್ರಿಯ ಪ್ರಕರಣಗಳ ಪೈಕಿ 783 ಸೋಂಕಿತರನ್ನು ಹೋಮ್ ಐಸೋಲೇಷನ್ ಮಾಡಲಾಗಿದ್ದು, 50 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ 15 ಸೋಂಕಿತರು ಐಸಿಯುನಲ್ಲಿದ್ದು, 35 ಸೋಂಕಿತರು ಸಾಮಾನ್ಯ ವಾರ್ಡ್‌ನಲ್ಲಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಮೈಸೂರಿನಲ್ಲಿ 25, ಮಂಡ್ಯದಲ್ಲಿ 7, ಚಾಮರಾಜನಗರದಲ್ಲಿ 9 ಹಾಗೂ ಕೊಡಗಿನಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ. ಮೈಸೂರಿನಲ್ಲಿ ಒಟ್ಟು 60, ಮಂಡ್ಯದಲ್ಲಿ 26, ಕೊಡಗಿನಲ್ಲಿ 3 ಹಾಗೂ ಚಾಮರಾಜನಗರದಲ್ಲಿ 21 ಸಕ್ರಿಯ ಪ್ರಕರಣಗಳಿವೆ.




