Mysore
23
broken clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಮಿಜೋರಾಂ ಚುನಾವಣೆ: ಸಿಎಂ ಝೋರಾಂಥಾಂಗ ಗೆ ಸೋಲು; ಬಹುಮತ ಗೆದ್ದ ಝಡ್‌ಪಿಎಂ

ಮಿಜೋರಾಂ  : ಮಿಜೋರಾಂನಲ್ಲಿ ನೂತನ ಪಕ್ಷ  ಝಡ್‌ಪಿಎಂ ಸರ್ಕಾರ ರಚಿಸಲು ಸಿದ್ದತೆ ನಡೆಸಿಕೊಂಡಿದೆ. 40 ಸ್ಥಾನಗಳಲ್ಲಿ  ಝಡ್‌ಪಿಎಂ 27 ಸ್ಥಾನಗಳನ್ನು ಗೆದ್ದಿದೆ ಎಂದು ಭಾರತೀಯ ಚುನಾವಣಾ ಆಯೋಗವು ತಿಳಿಸಿದೆ. 9 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಎಂಎನ್‌ಎಫ್‌ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ

ಅಲ್ಲದೆ, ಪೂರ್ವ ಐಜ್ವಾಲ್ ನಲ್ಲಿ ಪ್ರತಿಸ್ಪರ್ಧಿ ಝಡ್‌ಪಿಎಂ ಅಭ್ಯರ್ಥಿ ಎದುರು ಮಿಜೋರಾಂ ಮುಖ್ಯಮಂತ್ರಿ ಸೋತಿದ್ದು, ಝಡ್‌ಪಿಎಂ ಗೆ ಭಾರೀ ಮೈಲಿಗಲ್ಲನ್ನು ಸೃಷ್ಟಿಸಿದೆ. ಮುಖ್ಯಮಂತ್ರಿ ಝೋರಾಂಥಾಂಗ ವಿರುದ್ಧ ಝಡ್‌ಪಿಎಂ ಅಭ್ಯರ್ಥಿ ಲಾಲತನಸಂಗ 2,101 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಝಡ್‌ಪಿಎಂ ನ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ಲುಹೋಮ ಅವರು ಸರ್ಚಿಪ್‌ನಲ್ಲಿ ಎಂಎನ್‌ಎಫ್‌ ಅಭ್ಯರ್ಥಿಯನ್ನು 2,982 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಆಡಳಿತಾರೂಢ ಎಂಎನ್‌ಎಫ್ 9 ಸ್ಥಾನಗಳನ್ನು ಗೆದ್ದಿದ್ದು, ಪ್ರಸ್ತುತ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಎರಡು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ