Mysore
18
overcast clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಎಸ್.ಎ.ಅಹ್ಮದ್ ಸೇರಿ 15 ಜನ ವಕೀಲರು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕ

ಬೆಂಗಳೂರು: ರಾಜ್ಯ ಹೈಕೋರ್ಟ್ ಗೆ ಎಸ್.ಎ.ಅಹ್ಮದ್, ಪ್ರತಿಮಾ ಹೊನ್ನಾಪುರ, ಎಸ್.ಇಸ್ಮಾಯಿಲ್ ಜಬೀವುಲ್ಲಾ ಸೇರಿ 15 ಜನ ವಕೀಲರನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಿಸಿ ಕಾನೂನು ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ಬೆಂಗಳೂರು ಪೀಠಕ್ಕೆ ಎಸ್.ಇಸ್ಮಾಯಿಲ್ ಜಬೀವುಲ್ಲಾ, ಎಸ್.ಎ.ಅಹ್ಮದ್, ಪ್ರತಿಮಾ ಹೊನ್ನಾಪುರ, ವಿಕ್ರಮ್ ಹುಯಿಲ್‌ಗೋಳ್, ಕೆಂಪಣ್ಣ, ಸಂತೋಷ್ ಎಸ್. ಗೋಗಿ, ಸಿ.ಎಸ್.ಪ್ರದೀಪ್, ರೊಬೆನ್ ಜಾಕೋಬ್, ವಿ.ಜಿ.ಭಾನುಪ್ರಕಾಶ್, ಕಿರಣ್ ರೋಣ ಅವರನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕ ಮಾಡಲಾಗಿದೆ.

ಧಾರವಾಡ ಪೀಠಕ್ಕೆ ಗಂಗಾಧರ ಜೆ.ಎಂ., ಕೇಶವರೆಡ್ಡಿ, ಕಲಬುರಗಿ ಪೀಠಕ್ಕೆ ಮಲ್ಹಾರರಾವ್, ವೈ.ಹೆಚ್.ವಿಜಯ್‌ಕುಮಾರ್, ಅರ್ಚನಾ ಬಿ. ತಿವಾರಿ ಅವರನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕ ಮಾಡಲಾಗಿದೆ ಎಂದು ಕಾನೂನು ಇಲಾಖೆ ಆದೇಶಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!