ಮೈಸೂರು: ಮೈಸೂರು ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ರಾಜವಂಶಸ್ಥ ಯದುವೀರ್ ಅವರ ಹೆಸರೇ ಇರಲಿಲ್ಲ. ಆದರೆ, ದೇವೇಗೌಡರೇ ನಮ್ಮ ಸಮಾಜದ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪಿಸಿ ಯದುವೀರ್ ಅವರಿಗೆ ಟಿಕೆಟ್ ಸಿಗುವಂತೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಸಮಾವೇಶದಲ್ಲಿಂದು ಮಾತನಾಡದ ಅವರು, ಮಂಡ್ಯ, ಹಾಸನಕ್ಕೆ ಅನುಕೂಲವಾಗುವಂತೆ ಅವರ ಸ್ವಾರ್ಥಕ್ಕಾಗಿ ಮೈಸೂರು ಕ್ಷೇತ್ರಕ್ಕೆ ಯುದುವೀರ್ ಅವರನ್ನು ದೇವೇಗೌಡರು ನಿಲ್ಲಿಸಿದ್ದಾರೆ ಎಂದು ಸಚಿವ ವೆಂಕಟೇಶ್ ಹರಿಹಾಯ್ದರು.
ನಾನು ದೇವೇಗೌಡರ ಹತ್ತಿರದ ಸಂಬಂಧಿಯಾಗಿದ್ದೇನೆ. ಅವರ ಸ್ವಾರ್ಥದಿಂದಾಗಿ ನಾನು ಅವರಿಂದ ದೂರ ಉಳಿದೆ. ರಾಜಕೀಯವೇ ಬೇಡ ಎನ್ನುವಾಗ ಸಿಎಂ ಸಿದ್ದರಾಮಯ್ಯ ಅವರು ನನ್ನನ್ನು ರಾಜಕೀಯದಲ್ಲಿ ಉಳಿಸಿಕೊಂಡರು ಎಂದು ನೆನೆದರು.
ನಾನು ದೇವೇಗೌಡರ ಹತ್ತಿರ ಸಂಬಂಧಿ. ಅವರು ಸ್ವಾರ್ಥ ಎಂಬ ಕಾರಣಕ್ಕೆ ನಾನು ದೂರ ಉಳಿದೆ. ನಾನು ರಾಜಕೀಯ ಸಾಕು, ಬಿಡಬೇಕು ಅಂದ್ಕೊಂಡಿದ್ದೆ. ಸಿಎಂ ಸಿದ್ದರಾಮಯ್ಯ ರಾಜಕಾರಣದಲ್ಲಿ ಉಳಿಸಿಕೊಂಡರು ಎಂದರು.
ಇನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜಾತಿ ಕಾರ್ಟ್ ಪ್ಲೇ ಸಂಬಂಧ ಮಾತನಾಡಿ, ಪ್ರತಾಪ್ ಸಿಂಹ ಅವರು ಎಂ. ಲಕ್ಷ್ಮಣ್ ಅವರನ್ನು ಒಕ್ಕಲಿಗನಲ್ಲ ಎಂದು ಹೇಳಿದ್ದರು. ಆದರೆ ನಾಯ ಯಾವ ಜಾತಿಗೆ ಸೇರಿದ್ದೇನೋ ಲಕ್ಷ್ಮಣ್ ಅವರು ಅದೇ ಜಾತಿಗೆ ಸೇರಿದ್ದಾರೆ. ತಮ್ಮ ಕುಟುಂಬದ ಸದಸ್ಯರ ಮಾಹಿತಿಯನ್ನು ಸಹಾ ಬಿಚ್ಚಿಟ್ಟಿದ್ದಾರೆ. ಲಕ್ಷ್ಮಣ್ ಒಕ್ಕಲಿಗ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರತಾಪ್ ಬೇರೆ ಕಡೆಯಿಂದ ಬಂದವರು. ಲಕ್ಷ್ಮಣ್ ಮೈಸೂರಿನವರೇ ಆಗಿದ್ದಾರೆ ಎಂದು ತಿಳಿಸಿದರು.