ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ೧೬ನೇ ಆವೃತ್ತಿ ಮಾರ್ಚ್ ೧ರಿಂದ ೮ರವರೆಗೆ ನಡೆಯಲಿದೆ. ಇದಕ್ಕೆ ಎಂದಿನಂತೆ ಕೊನೆಯ ಕ್ಷಣ, ಭರದಿಂದ ಸಿದ್ಧತೆ ನಡೆದಿದೆ. ನಿರ್ಮಾಪಕರ ಸಂಘಟನೆಗಳ ಅಂತಾರಾಷ್ಟ್ರೀಯ ಮಹಾ ಒಕ್ಕೂಟದ ಮಾನ್ಯತೆ ಪಡೆದ ಚಿತ್ರೋತ್ಸವಗಳಲ್ಲಿ ಒಂದು ಈ ಚಿತ್ರೋತ್ಸವ. ಭಾರತದಲ್ಲಿ ಐದು ಚಿತ್ರೋತ್ಸವಗಳಿಗೆ …










