Mysore
26
few clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಪರೀಕ್ಷೆ-ಬುದ್ಧಿಗೆ ಸವಾಲು; ಬದುಕಿಗಲ್ಲ..!

ಡಾ. ನೀ. ಗೂ. ರಮೇಶ್

ಜೀವನದಲ್ಲಿ ಕಳೆದು ಹೋದ ಒಂದು ಕ್ಷಣವೂ ಮತ್ತೆ ನಮಗೆ ಹಿಂತಿರುಗಿ ಬರುವುದಿಲ್ಲ. ಅದರಲ್ಲೂ ಬಾಲ್ಯ, ಯೌವನದ ಪ್ರತಿಕ್ಷಣಗಳಿಗೂ ಬೆಲೆ ಕಟ್ಟಲಾಗದು. ಗೆಳೆಯರು, ಮನರಂಜನೆ, ಆಟೋಟ, ಮೋಜು ಮಸ್ತಿಗಳು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ನಾಳಿನ ಬದುಕಿಗೆ ಅಡಿಪಾಯ ವಾಗುವ ಶಿಕ್ಷಣವನ್ನೂ ನಿರ್ಲಕ್ಷಿಸುವಂತಿಲ್ಲ. ಯೌವನದ ಆಟ ಪಾಠಗಳು ಸಹಜ ಪ್ರವೃತ್ತಿಯಾದರೆ, ಕಲಿಕೆಗಾಗಿ ರೂಢಿಸಿ ಕೊಳ್ಳಬೇಕಾದ ಶಿಸ್ತು ಸಾಧನೆಯಿಂದ ಬರಬೇಕಾದುದು.

ಶಿಕ್ಷಣಕ್ಕೆ ಒಂದು ಕ್ರಮಬದ್ಧತೆಯಿದೆ. ತರಗತಿ ವಾರು ಇಂತಿಷ್ಟು ಕಲಿಯಬೇಕೆಂಬ ಗುರಿಯಿದೆ. ಕಲಿತದ್ದನ್ನು ಪರಿಕ್ಷೆಯೆಂಬ ಸ್ಪರ್ಧೆಯಲ್ಲಿ ನಿರೂ ಪಿಸಿ, ಕಲಿಕೆಯನ್ನು ಖಚಿತಪಡಿಸಿ, ಗೆಲುವನ್ನು ದಾಖಲಿಸಿ ಮುಂದಿನ ತರಗತಿಗಳಿಗೆ ಹೋಗ ಬೇಕೆಂಬ ನಿಯಮವಿದೆ. ಹಾಗಾಗಿ ಪ್ರತಿ ವರ್ಷದ ಪರೀಕ್ಷೆಯೂ ಒಂದೊಂದು ಮಹತ್ವದ ‘ಪಂದ್ಯ’ ವಿದ್ದಂತೆ. ಇದಕ್ಕೆ ಆಸಕ್ತಿಯ ಸಿದ್ಧತೆ ಬೇಕಾಗುತ್ತದೆ. ಹಾಗಾಗಿ ಪ್ರತಿ ಪರೀಕ್ಷೆಯ ಒಳಗಿನ ಹೂರಣ ಮಾತ್ರ ಹೊಸದಾಗಿರುತ್ತದೆ.

ಆದರೆ, ಇಂದು ಪರೀಕ್ಷೆಗಳ ಮಹತ್ವ ಮತ್ತು ಸ್ಪರ್ಧೆ ಹೆಚ್ಚಾಗಿದೆ. ಏನಾದರೂ ಆಗಲಿ ಎಂದು ಉದಾಸೀನತೆಯಿಂದ ಪರೀಕ್ಷೆ ಬರೆಯುವುದರಿಂದ ಪ್ರಯೋಜನವಿಲ್ಲ. ಇಂದು ಕೇವಲ ಪರೀಕ್ಷೆಗಳ ಅಂಕಗಳನ್ನು ಮಾತ್ರ ಪ್ರಧಾನವೆಂದು ಪರಿಗಣಿ ಸದೆ. ಆ ವಿಷಯವನ್ನು ನಾವು ಅರ್ಥೈಸಿಕೊಂಡಿ ರುವ ಆಳ ಮತ್ತು ಕೌಶಲಗಳ ಅರಿವು ಅಷ್ಟೇ ಮುಖ್ಯ ಎಂಬ ಪದ್ಧತಿ ಎಲ್ಲ ಉದ್ಯೋಗ ಕ್ಷೇತ್ರ ಗಳಲ್ಲೂ ಚಾಲ್ತಿಯಲ್ಲಿದೆ. ಆದ್ದರಿಂದ ಈಗಿ ನಿಂದಲೇ ಅರ್ಥೈಸಿಕೊಂಡು ಓದುವುದು ಮುಖ್ಯ ವಾಗುತ್ತದೆ. ಆದರೆ ಇಂದಿನ ಬಹುತೇಕ ಪರೀಕ್ಷೆ ಗಳು ನೆನಪಿನ ಶಕ್ತಿಗೆ ಒಡ್ಡಿದ ಸವಾಲುಗಳಂತಿವೆ ಎಂಬುದೂ ಅಷ್ಟೇ ಸತ್ಯ. ಆದ್ದರಿಂದ ಕಲಿಕೆಯು ಕೇವಲ ನೆನಪಿನ ಶಕ್ತಿಯ (ಜ್ಞಾನ) ಹಂತಕ್ಕೆ ಸೀಮಿತವಾಗದೆ, ಕಲಿತಿರುವ ವಿಷಯವನ್ನು ಕೌಶಲಪೂರ್ಣವಾಗಿ ಪರೀಕ್ಷೆಯಲ್ಲಿ ಮಾತ್ರ ವಲ್ಲದೆ ಜೀವನದ ಬೇರೆ ಬೇರೆ ಸಂದರ್ಭಗಳಿಗೂ ಅನ್ವಯಿಸಿ ಕೊಂಡು ಉಪಯೋಗಿಸಿಕೊಳ್ಳುವ ನೈಪುಣ್ಯ ತೆಯೂ ಓದಿನ ಜೊತೆಗೇ ಬೆಳೆದು ಬರಲಿ, ಇದು ಮುಂದೆ ಬಹಳಷ್ಟು ರೀತಿಯಲ್ಲಿ ನೆರವಾಗುತ್ತದೆ.

ಹೆಚ್ಚು ಅಂಕಗಳನ್ನು ಅಥವಾ ರ‍್ಯಾಂಕ್ ಪಡೆ ದವರೆಲ್ಲ ಪ್ರತಿಭಾವಂತರಲ್ಲ ಅಥವಾ ಪ್ರಪಂಚ ದಲ್ಲಿ ಅವರು ಮಾತ್ರ ಸುಖವಾಗಿಲ್ಲ! ಕಲಿಯುವ ವಿಷಯವು ಪರೀಕ್ಷೆಗೆ ಮಾತ್ರವಲ್ಲದೆ ಬದುಕಿನ ಬೇರೆ ಬೇರೆ ಸಂದರ್ಭಗಳಿಗೂ ಉಪಯುಕ್ತ ವಾಗ ಬೇಕೆಂದರೆ ಸಾವಧಾನ ಮತ್ತು ಏಕಾಗ್ರತೆ ಯಿಂದ ಕಲಿಯುವುದು ಬಹಳ ಮುಖ್ಯ. ಹಾಗಾಗಿ ಕೇವಲ ಪರೀಕ್ಷೆಯ ಉದ್ದೇಶದಿಂದ ಕಲಿತ ವಿದ್ಯೆಯು ಇಂದಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಯ ಬದುಕನ್ನು ರೂಪಿಸುತ್ತಿರುವ ಉದಾಹರಣೆಗಳು ತುಂಬಾ ಕಡಿಮೆ. ಪ್ರತಿಯೊಂದು ವಿಷಯವನ್ನು ಕಲಿ ಯುವಾಗಲೂ ಪರೀಕ್ಷೆ ಮೊದಲ ಗುರಿ ಯಾದರೆ ಅಂತಿಮ ಗುರಿ ಜೀವನ ಎಂಬುದು ಗಮನದಲ್ಲಿರಲಿ. ಹಾಗಾಗಿ ಪರೀಕ್ಷೆಗಳು ಬದು ಕನ್ನು ರೂಪಿಸಿಕೊಳ್ಳಲು ಇರುವ ಮೆಟ್ಟಿಲುಗಳೇ ಹೊರತು, ಪರಿಕ್ಷೆಯೇ ಬದುಕಲ್ಲ. ಪರೀಕ್ಷೆಗಳಾಚೆಗೂ ಒಂದು ಸುಂದರವಾದ ಬದುಕು ಕಾಯುತ್ತಿರುತ್ತದೆ. ಅಲ್ಲಿಗೆ ಸುಲಭವಾಗಿ ಹೋಗಿ ತಲುಪಲು ಪರೀಕ್ಷೆಗಳಲ್ಲಿನ ಯಶಸ್ಸು ನೆರ ವಾಗುತ್ತದೆ.

ವರ್ಷವಿಡೀ ಓದುವುದು ಒಂದು ಭಾಗವಾ ದರೆ, ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಾಡಿ ಕೊಳ್ಳುವ ಸಿದ್ಧತೆ ಅದಕ್ಕಿಂತಲೂ ಮುಖ್ಯ ವಾದುದು. ಅದಕ್ಕಾಗಿ ಈ ಕೆಲವು ಅಂಶಗಳು ನೆನಪಿರಲಿ.

  • ಪ್ರತಿದಿನ ಎಲ್ಲ ವಿಷಯಗಳನ್ನು ಸ್ವಲ್ಪ ಸ್ವಲ್ಪ ಓದುವುದು ಬೇಡ. ದಿನಕ್ಕೊಂದು ವಿಷಯ ದಂತೆ ವೇಳಾಪಟ್ಟಿಯನ್ನು ತಯಾರಿಸಿಕೊಂಡು ಓದುವುದು ವೈಜ್ಞಾನಿಕ ವಿಧಾನ.
  • ಉತ್ತಮವಾದ ನೋಟ್ಸ್ ತಯಾರಿಸಿಕೊಳ್ಳು ವುದು ಆ ವರ್ಷದ ಅರ್ಧ ಓದನ್ನು ಮುಗಿಸಿದಂತೆ. ಏಕೆಂದರೆ, ಪರೀಕ್ಷಾ ಸಮಯದಲ್ಲಿ ತುಂಬಾ ಉಪ ಯೋಗಕ್ಕೆ ಬರುವ ಸಾಮಗ್ರಿಗಳೆಂದರೆ ನೋಟ್ಸ್ ಮತ್ತು ಮುಖ್ಯ ಅಂಶಗಳನ್ನೊಳಗೊಂಡ ಚಾರ್ಟ್ ಗಳು ಮಾತ್ರ.
  • ತರಗತಿಗಳಲ್ಲಿ ಬರೆಸುವ ನೋಟ್ಸ್‌ಗಳನ್ನು ಪೂರ್ಣಗೊಳಿಸುವ ಮೊದಲು ಪಠ್ಯಪುಸ್ತಕದಲ್ಲಿ ಆ ಅಧ್ಯಾಯವನ್ನು ಸೂಕ್ಷ್ಮವಾಗಿ ಓದಿಕೊಂಡು ಯಾವುದೇ ದೋಷಗಳಿಲ್ಲದಂತೆ ಪರಿಪೂರ್ಣ ವಾದ ಮಾಹಿತಿಯನ್ನು ನೋಟ್ಸ್ ರೂಪದಲ್ಲಿ ಸಿದ್ಧ ಪಡಿಸಬೇಕು. ನೀನೇ ಪಠ್ಯಪುಸ್ತಕ ಓದಿ ತಯಾ ರಿಸಿದ ನೋಟ್ಸ್ ನಿನ್ನದೇ ಆಗಿರುತ್ತದೆ.
  • ಪ್ರತಿದಿನ ಬರೆಯುವ, ಓದುವ ಮತ್ತು ಸ್ಮರಿಸಿ ಕೊಳ್ಳುವ ಕೆಲಸ ನಿರಂತರವಾಗಿ ನಡೆಯಬೇಕು.
  • ಪರೀಕ್ಷೆ ಸಮೀಪಿಸುತ್ತಿದ್ದಾಗ ಓದುವ ಒತ್ತಡ ಕಡಿಮೆ ಮಾಡಿಕೊಳ್ಳಿ.
  •  ಮಾನಸಿಕ ಮತ್ತು ದೈಹಿಕ ಆರೋಗ್ಯದ ದೃಷ್ಟಿ ಯಿಂದ ಬಲವಂತದಿಂದ ನಿದ್ರೆಯನ್ನು ತಡೆದು ಓದುವುದು ಒಳ್ಳೆಯ ಅಭ್ಯಾಸವಲ್ಲ. ನಿದ್ರೆಯ ಒತ್ತಡ ಹೆಚ್ಚಾದಾಗ ಮಲಗಿ ಬೆಳಿಗ್ಗೆ ಬೇಗ ಎದ್ದು ಓದುವುದು ಒಳ್ಳೆಯದು.
  • ಬರೆಯುತ್ತಾ ಓದುವ ಅಭ್ಯಾಸ ಹೆಚ್ಚು ಪರಿಣಾಮಕಾರಿ.
  • ಪರೀಕ್ಷಾ ಸಮಯದಲ್ಲಿ ಓದುವುದರಷ್ಟೇ ಆರೋಗ್ಯದ ಕಡೆ ಗಮನಹರಿಸುವುದೂ ಮುಖ್ಯ.
  • ಯಥೇಚ್ಛವಾಗಿ ನೀರು ಕುಡಿಯುವು ದರಿಂದ ದಣಿವು ಕಡಿಮೆಯಾಗಿ ದೇಹ ಮತ್ತು ಮನಸ್ಸು ಪ್ರಫುಲ್ಲವಾಗಿರುತ್ತವೆ.

ಪರೀಕ್ಷೆಯೆಂಬ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಲು ಯಾವುದೇ ಹಂತದಲ್ಲಿ ದೊರೆ ಯುವ ಇಂತಹ ಸಲಹೆಗಳು ಒಂದಲ್ಲ ಒಂದು ರೀತಿಯಲ್ಲಿ ನೆರವಾಗಬಹುದು. ಹಾಗಾಗಿ ಯಾರ ಮಾತುಗಳನ್ನೂ ನಿರ್ಲಕ್ಷಿಸಬೇಕಾಗಿಲ್ಲ. ಎಂತಹ ಪರಿಸ್ಥಿತಿಯಲ್ಲಿಯೂ ಪರೀಕ್ಷೆಯ ಬಗ್ಗೆ ಧೃತಿಗೆಡದೆ ಆತ್ಮವಿಶ್ವಾಸದಿಂದ ಎದುರಿಸಬೇಕು.

Tags:
error: Content is protected !!