ಟೆಕ್ ಸಮಾಚಾರ
ಭಾರತದಲ್ಲಿಯೇ ಜೋಡಣೆ ಮಾಡಿ ಮಾಡುವ ಜತೆಗೆ ವಿದೇಶಗಳಿಗೂ ಭಾರತದಿಂದಲೇ ರಫ್ತು ಮಾಡಲಾಗುತ್ತದೆ.
ಜಗತ್ತಿನಾದ್ಯಂತ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಆಪಲ್ ಕಂಪೆನಿಯು ಗ್ರಾಹಕ ಸ್ನೇಹಿ ಐಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹೆಚ್ಚು ಜನಪ್ರಿಯವಾಗಿದ್ದು, ತನ್ನ ನೂತನ ಐಫೋನ್ 16ಇ
ಸರಣಿಯ ಐಫೋನ್ ಜೋಡಣೆಯ ಕಾರ್ಯವನ್ನು ಭಾರತದಲ್ಲಿಯೇ ಮಾಡುತ್ತಿದೆ.
ಭಾರತದಲ್ಲಿ ಐಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಐಫೋನ್ 16ಇ ಸರಣಿಯ ಫೋನ್‌ಗಳನ್ನು ಭಾರತದಲ್ಲಿಯೇ ಜೋಡಣೆ ಮಾಡಿ ಮಾರಾಟ ಮಾಡುವ ಜತೆಗೆ ವಿದೇಶಗಳಿಗೂ ಭಾರತದಿಂದಲೇ
ರಫ್ತು ಮಾಡಲಾಗುತ್ತಿದೆ ಎಂದು ಆಪಲ್ ಕಂಪೆನಿ ತಿಳಿಸಿದೆ. ಐಫೋನ್ 16ಇ ಆರಂಭಿಕ ಬೆಲೆ 59,900 ರೂ. ಆಗಿದ್ದು, ಫೆ.28ರಿಂದಲೇ ಎಲ್ಲಆಪಲ್ ಮಳಿಗೆಗಳು ಮತ್ತು ಕಂಪೆನಿಯ ಅಧಿಕೃತ ಪಾಲುದಾರರ ಮಳಿಗೆಗಳಲ್ಲಿಗ್ರಾಹಕರಿಗೆ ದೊರೆಯುತ್ತಿವೆ ಎಂದು ತಿಳಿಸಿದೆ.
ಈ ಹೊಸ ಮಾದರಿಯ ಐಫೋನ್ ಎ18 ಚಿಪ್ ಹೊಂದಿದೆ. ಆಪಲ್ ಇಂಟೆಲಿಜೆನ್ಸ್, 48 ಎಂಪಿ ಫ್ಯುಷನ್ ಕ್ಯಾಮೆರಾ, 2 ಪಟ್ಟು ಹೆಚ್ಚು ಸಾಮರ್ಥ್ಯ ಹೊಂದಿರುವ ಟೆಲಿಫೋಟೊ ಲೆನ್ಸ್ ಹೊಂದಿದೆ ಎಂದು ಕಂಪೆನಿಯು ತಿಳಿಸಿದೆ.