Mysore
17
broken clouds

Social Media

ಶನಿವಾರ, 31 ಜನವರಿ 2026
Light
Dark

ಹೊಸ ಮಾದರಿಯ ಒಪ್ಪೊ ಫೋನ್‌

ಟೆಕ್‌ ಸಮಾಚಾರ

ತನ್ನ ವಿಶಿಷ್ಟವಾದ ಸ್ಮಾರ್ಟ್ ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿರುವ ಸ್ಮಾರ್ಟ್ ಫೋನ್ ಕಂಪೆನಿ ಒಪ್ಪೊ, ಭಾರತೀಯ ವಿವಿಧ ಹವಾಮಾನ ವೈವಿಧ್ಯಕ್ಕೆ ಹೊಂದಿಕೊಳ್ಳುವಂತೆ ವಿನೂತನ ವೈಶಿಷ್ಟ ಗಳೊಂದಿಗೆ ರೂಪಿಸಿರುವ ಒಪ್ಪೊ ಎಫ್ 29 ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಈ ಸರಣಿಯ ಒಪ್ಪೊ ಎಫ್29 ಮತ್ತು ಎಫ್29 ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ತೆಳುವಾದ ಆಕರ್ಷಕ ವಿನ್ಯಾಸ ಹಾಗೂ ಅತ್ಯಾಧುನಿಕ ಸಂಪರ್ಕತೆ ಮತ್ತು ದೀರ್ಘ ಬ್ಯಾಟರಿ ಬಾಳಿಕ ಹೊಂದಿರುವ ಫೋನ್ ಇದಾಗಿದೆ.

ಈ ಫೋನ್‌ಅನ್ನು ಭಾರತೀಯ ವಿವಿಧ ಹವಾಮಾನಗಳಾದ ಮಳೆ, ಚಳಿ, ದೂಳು, ತಾಪಮಾನಕ್ಕೆ ಹೊಂದಿಕೊಳ್ಳುವಂತೆ ರೂಪಿಸಲಾಗಿದ್ದು, ದೂಳು, ಮಳೆ,
ನೀರಿನೊಳಗೆ ಮುಳುಗುವ ಸಂದರ್ಭಗಳಲ್ಲಿ ಫೋನ್‌ಗೆ ರಕ್ಷಣೆ ಇರುತ್ತದೆ. ಸ್ಟಾಂಜ್ ಬಯೋನಿಕ್ ಕುಶನಿಂಗ್ ಮತ್ತು ಫೈಬರ್ ಗ್ಲಾಸ್ ಕವರ್ ಹಾಗೂ ಕ್ಯಾಮೆರಾ ಲೆನ್ಸ್ ರಕ್ಷಣಾತ್ಮಕ ರಿಂಗ್ ಇದರಲ್ಲಿದೆ.

ಒಪ್ಪೊ ಎಫ್20 ಪ್ರೋನಲ್ಲಿ 6000 ಎಂಎಎಚ್ ಬ್ಯಾಟರಿ ಸಾಮರ್ಥ್ಯದೊಂದಿಗೆ 80 ಡಬ್ಲ್ಯೂ ಸೂಪರ್‌ವೊಕ್ ವೇಗದ ಚಾರ್ಜಿಂಗ್ ವ್ಯವಸ್ಥೆಯಿದ್ದರೆ, ಒಪ್ಪೊ ಎಫ್29 ಸಾಧನದಲ್ಲಿ 6500 ಎಂಎಎಚ್ ಬ್ಯಾಟರಿ ಸಾಮರ್ಥ್ಯವಿದೆ. ಈ ಎರಡರಲ್ಲೂ ಕರೆಯ ಧ್ವನಿ ಸ್ಪಷ್ಟವಾಗಿ ಕೇಳಿಸುವಂತೆ ಮಾಡಲು ಅಲ್ಟ್ರಾ ವಾಲ್ಯೂಮ್ ಮೋಡ್ ಇದೆ.

  • ಒಪ್ಪೊ ಎಫ್ 29 ಸರಣಿಯ ಫೋನ್‌ಗಳು 50ಎಂಪಿ ಪ್ರಧಾನ ಕ್ಯಾಮೆರಾ ಹಾಗೂ 2 ಎಂಪಿ ಡೆಪ್ತ್ ಕ್ಯಾಮೆರಾ ಹಾಗೂ 16ಎಂಪಿ ಸೆಲ್ಛಿ ಕ್ಯಾಮೆರಾದ ಜತೆಗೆ ಎಐ ಆಧಾರಿತ ಕ್ಯಾಮೆರಾ ಫೀಚರ್‌ಗಳನ್ನು ಹೊಂದಿದೆ.
  • ಒಪ್ಪೊ ಎಫ್29 ಪ್ರೊ ಏಪ್ರಿಲ್ 1ರಿಂದ ಲಭ್ಯವಾಗಲಿದ್ದು, 8ಜಿಬಿ+128ಜಿಬಿ ಫೋನ್‌ಗೆ 27,999 ರೂ. 8ಜಿಬಿ+256ಜಿಬಿ ಫೋನ್‌ಗೆ 29,999 ರೂ. ಹಾಗೂ 12ಜಿಬಿ+256 ಜಿಬಿ ಫೋನ್‌ಗೆ 31,999 ರೂ.ಗಳಿವೆ.
  •  ಒಪ್ಪೊ ಎಫ್‌29 ಮಾರ್ಚ್‌ 27 ರಿಂದ ಲಭ್ಯವಿದ್ದು, 8 ಜಿಬಿ+128ಜಿಬಿ ಫೋನ್‌ಗೆ 23,999 ರೂ., 8ಜಿಬಿ+256ಜಿಬಿ ಫೋನ್‌ಗೆ 25,999 ರೂ.ಗಳಿಗೆ ಲಭ್ಯವಿದೆ.

 

Tags:
error: Content is protected !!