Mysore
26
broken clouds

Social Media

ಸೋಮವಾರ, 26 ಜನವರಿ 2026
Light
Dark

ಭಾರತೀಯ ವಾಯುಸೇನೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 

job alert

ಭಾರತೀಯ ವಾಯುಸೇನೆ (ಐಎಎ-)ಯಲ್ಲಿ ಗ್ರೂಪ್ ‘ಸಿ’ ೧೫೩ ನಾಗರಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಮೇ ೧೭ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜೂನ್೧೫ರವರೆಗೂ ಅರ್ಜಿ ಸಲ್ಲಿಸಬಹುದು. ಎಲ್‌ಡಿಸಿ, ಟೈಪಿಸ್ಟ್, ಮೆಕ್ಯಾನಿಕ್‌ಗಳಂತಹ ಹಲವು ಹುದ್ದೆಗಳಿದ್ದು, ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಭಾರತೀಯ ವಾಯು ಸೇನೆಯ ಅಧಿಕೃತ ವೆಬ್‌ಸೈಟ್… indian airforce.nic.in ನಲ್ಲಿ ಪಡೆಯಬಹುದು. ಹತ್ತನೇ ತರಗತಿ, ಪಿಯುಸಿ ಉತ್ತೀರ್ಣರಾಗಿರುವ ಆಸಕ್ತರು ಆನ್‌ಲೈನ್ ಮತ್ತು ಆ-ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.

ಕಿರಿಯ ದರ್ಜೆ ಗುಮಾಸ್ತ (ಎಲ್‌ಡಿಸಿ), ಸ್ಟೋರ್ ಕೀಪರ್, ಹಿಂದಿ ಟೈಪಿಸ್ಟ್, ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್, ಚಾಲಕರು, ಅಡುಗೆಯವರು, ಬಡಗಿ, ಪೇಂಟರ್, ಹೌಸ್ ಕೀಪಿಂಗ್ ಮತ್ತಿತರೆ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು ೧೫೩ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗ, ಇತರೆ ಹಿಂದುಳಿದ ವರ್ಗಗಳು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗ(ಇಡಬ್ಲ್ಯುಎಸ್)ಗಳವರಿಗೆ ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಅರ್ಜಿದಾರರ ವಯೋಮಿತಿ ೧೮ರಿಂದ ೨೫ರೊಳಗಿರಬೇಕು. ಮೀಸಲು ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಅರ್ಜಿ ಕರೆಯಲಾಗಿರುವ ವಿವಿಧ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ವೃತ್ತಿ ಕೌಶಲ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ವಾಯುಸೇನೆಯ ಅಧಿಕೃತ ವೆಬ್‌ಸೈಟ್ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಸಮೀಪದ ವಾಯುಸೇನೆ ಕಚೇರಿಗೆ ಅಂಚೆ ಮೂಲಕ ಸಲ್ಲಿಸಬಹುದು.

Tags:
error: Content is protected !!