ವಿಶ್ವದಾದ್ಯಂತ ಮಿಲಿಯನ್ ಗಟ್ಟಲೇ ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಮ್ ಬಳಕೆದಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಹೊಸ ಫೀಚರ್ ನೀಡಲು ಮುಂದಾಗಿದೆ.
ಇಂದಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಿಟ್ಟಿರುವುದು ಅಸಾಧ್ಯವಾಗಿದೆ. ಅದರಲ್ಲೂ ಯುವ ಸಮುದಾಯ ಸಾಮಾಜಿಕ ಜಾಲತಾಣವಿಲ್ಲದೆ ಯಾವ ಚಟುವಟಿಕೆಗಳನ್ನೂ ನಿರ್ವಹಣೆ ಮಾಡುವುದು ಅಸಾಧ್ಯ ಎನ್ನುವ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿಯೇ ಟೆಲಿಗ್ರಾಮ್ ‘ಸ್ಟೋರಿಸ್’ ಎಂಬ ಫೀಚರ್ ಅನ್ನು ಪರಿಚಯಿಸಲು ಮುಂದಾಗಿದೆ.
ಸ್ಟೋರಿಸ್‌ಗಳು ನಮ್ಮ ಜೀವನಕ್ಕೆ ಹತ್ತಿರವಾಗಿದ್ದು, ನಮ್ಮ ಜೀವನದ ಸಂಗತಿಗಳ ಬಗ್ಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಇವುಗಳ ಮೂಲಕ ಸ್ನೇಹಿತರು ಸೇರಿದಂತೆ ಸಂಬಂಧಿಕರು ಕೂಡ ತಿಳಿದುಕೊಳ್ಳಬಹುದಾಗಿದೆ. ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್, ಟೆಲಿಗ್ರಾಮ್ ಶೀಘ್ರದಲ್ಲೇ ಸ್ಟೋರಿಸ್ ಫೀಚರ್ ಅನ್ನು ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ‘ಸ್ಟೋರಿಸ್’ಗಳು 24 ಗಂಟೆಗಳ ನಂತರ ಸ್ವಯಂಚಾಲಿತವಾಗಿಮುಕ್ತಾಯಗೊಳ್ಳುತ್ತವೆ, ಆದರೆ ಟೆಲಿಗ್ರಾಮ್‌ನಲ್ಲಿ ಬಳಕೆದಾರರು ತಮ್ಮ ಸ್ಟೋರಿಸ್ ಆ್ಯಪ್ ಡೌನ್ ಲೋಡ್ ಮಾಡಿದ ನಂತರ ಯಾವಾಗ ಮುಕ್ತಾಯವಾಗಬೇಕು ಎಂಬುದನ್ನು ನಿರ್ಧರಿಸಲು ನಾಲ್ಕು ಆಯ್ಕೆಗಳನ್ನು ಹೊಂದಿರುತ್ತಾರೆ. ಈ ಸ್ಟೋರಿಸ್‌ಗಳು 6, 12, 24, ಹಾಗೂ 48 ಗಂಟೆಗಳ ಮುಕ್ತಾಯ ಅವಧಿಯನ್ನು ಒಳಗೊಂಡಿರುತ್ತವೆ. ಜತೆಗೆ ಬಳಕೆದಾರರು ಟೆಲಿಗ್ರಾಮ್‌ನಲ್ಲಿ ತಮ್ಮ ಪ್ರೊಫೈಲ್ ಪುಟದಲ್ಲಿ ಸ್ಟೋರಿಸ್‌ಗಳನ್ನು ಶಾಶ್ವತವಾಗಿ ಪ್ರದರ್ಶಿಸ ಬಹುದಾಗಿದೆ.