Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಯೋಗಕ್ಷೇಮ : ಹಿಮ್ಮಡಿ ನೋವಿದ್ದರೆ ಹೀಗೆ ಮಾಡಿ

ವಯಸ್ಸಾಗುತ್ತಾ ಹೋದಂತೆ ಹಿಮ್ಮಡಿ, ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಫ್ಲಾಂಟರ್ ಫಾಸಿಟಿಸ್ ಎನ್ನುತ್ತಾರೆ. ಬೆಳಿಗ್ಗೆ ಏಳುವಾಗಲೇ ನೋವು, ನಡೆದಾಡುವಾಗ ಏನೋ ಚುಚ್ಚಿದ ರೀತಿಯ ಅನುಭವ, ಮಾಂಸಖಂಡಗಳಲ್ಲಿ ಸೆಳೆತ ಉಂಟಾಗುವುದು ಈ ಸಮಸ್ಯೆಯ ಲಕ್ಷಣಗಳು.

ನೋವು ಕಾಣಿಸಿಕೊಂಡಾಗಿ ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಂಡು ತಕ್ಷಣಕ್ಕೆ ನೋವಿನಿಂದ ಪಾರಾಗಬಹುದು. ಆದರೆ ಇದರಿಂದ ದೀರ್ಘಕಾಲೀನ ಪರಿಹಾರ ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಕೆಳಗಿನ ಸರಳ ಮಾರ್ಗಗಳನ್ನು ಅನುಸರಿಸಿದರೆ ಹಿಮ್ಮಡಿ, ಪಾದಗಳ ನೋವಿಗೆ ಪರಿಹಾರ ಸಿಗುತ್ತದೆ.

* ಬೆಳಿಗ್ಗೆ ಏಳುವ ಮುನ್ನವೇ ಮಲಗಿದ್ದಲ್ಲೇ ಎರಡೂ ಪಾದಗಳನ್ನು ಒಟ್ಟಿಗೆ ಎಷ್ಟು ಸಾಧ್ಯವೋ ಅಷ್ಟು ಮುಂದಕ್ಕೆ-ಹಿಂದಕ್ಕೆ ಆಡಿಸಿ. ಈ ರೀತಿಯಾಗಿ ಕನಿಷ್ಟ ೫೦ ಬಾರಿ ಮಾಡಿರಿ. ಇದರಿಂದ ಇಡೀ ದಿನ ಪಾದಗಳ ನೋವು ಕಾಣಿಸಿಕೊಳ್ಳುವುದಿಲ್ಲ.

* ಟೆನ್ನಿಸ್ ಬಾಲ್ ಅಥವಾ ಅಷ್ಟೇ ಗಾತ್ರದ ಮೆತ್ತನೆಯ ವಸ್ತುವನ್ನು ಕೆಳಗೆ ಇಟ್ಟು ನೋವಿರುವ ಪಾದವನ್ನು ಅದರ ಮೇಲಿಟ್ಟು, ಪಾದವನ್ನು ಹಿಂದೆ ಮುಂದೆ ಆಡಿಸಿರಿ.

* ರಾತ್ರಿ ವೇಳೆ ಬಿಸಿ ನೀರಿಗೆ ಕಲ್ಲುಪ್ಪು ಹಾಕಿ ಚೆನ್ನಾಗಿ ಕರಗಿದ ನಂತರ ಪಾದಗಳನ್ನು ಅದರಲ್ಲಿ ಮುಳುಗಿಸಿ ಅರ್ಧ ಘಂಟೆ ಕುಳಿತುಕೊಳ್ಳಿ. ನೋವು ಕಮ್ಮಿಾಂಗುತ್ತದೆ.

* ಪ್ರತಿ ದಿನ ಅರ್ಧ ಗಂಟೆ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ನೋವು ನಿಧಾನವಾಗಿ ಕಡಿಮೆಯಾಗುತ್ತದೆ.

* ಮಾರುಕಟ್ಟೆಯಲ್ಲಿ ಎಂಸಿಪಿ ಅಥವಾ ಆರ್ಥೂಪೀಡಿಕ್ ಚಪ್ಪಲಿ/ಶೂಗಳು ಸಿಗುತ್ತವೆ. ಇವುಗಳ ಬಳಕೆಯಿಂದ ನೋವು ಕಡಿಮೆಯಾಗುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ