Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಯೋಗ ಕ್ಷೇಮ : ನೈಸರ್ಗಿಕ ಆರೋಗ್ಯಕರ ಪೇಯ ನೀರಾ

ಲತಾ ಎಂ.ಟಿ. ಮಾಲೀಕತ್ವದಲ್ಲಿ ಮೈಸೂರಿನಲ್ಲಿ ದೊರೆಯಲಿದೆ ಶುದ್ಧ ನೀರಾ

ತೆಂಗು ಬಹುಉಪಯೋಗಿ. ಇದರಿಂದ ತಯಾರಾಗುವ ಪ್ರತಿಯೊಂದು ಪದಾರ್ಥಗಳೂ ನಿತ್ಯ ಬದುಕಿಗೆ ಅತ್ಯವಶ್ಯಕ. ಇಂತಿಪ್ಪ ಕಲ್ಪವೃಕ್ಷದಿಂದ ಶುದ್ಧ ನೀರಾ ತಯಾರಿಸಿ ಜನರ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಮೈಸೂರಿನ ಗೋಕುಲಂ ನಲ್ಲಿ ಇರುವ ‘ನೀರಾ’ ಅಂಗಡಿ.

ತೆಂಗಿನ ಮರದಿಂದ ನೀರಾವನ್ನು ಕ್ರಮಬದ್ಧವಾಗಿ ಇಳಿಸಿ, ಅದನ್ನು ಸೂಕ್ತ ಕೋಲ್ಡ್‌ಚೈನ್ ವ್ಯವಸ್ಥೆಯಲ್ಲಿ ಸಂಗ್ರಹಿಸಿ ಜನರಿಗೆ ತಲುಪಿಸಿದರೆ ಅದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂಬುದು ಸತ್ಯ. ಆದರೆ ಇಂದು ಒಳ್ಳೆಯ ಗುಣಮಟ್ದ ನೀರಾ ಎಲ್ಲಿ ದೊರೆಯುತ್ತದೆ ಎನ್ನುವುದೇ ಪ್ರಶ್ನೆ. ಇದಕ್ಕೆ ಸರಿಯಾದ ಉತ್ತರ ಮೈಸೂರಿನ ವಿವಿ ಮೊಹಲ್ಲಾದ ಗೋಕುಲಂ ಮುಖ್ಯ ರಸ್ತೆಯ ಒಂಟಿಕೊಪ್ಪಲ್‌ನ ಶ್ರೀ ವೆಂಕಟೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಪ್ರಾರಂಭವಾಗಿರುವ ‘ನೀರಾ’ ಅಂಗಡಿ.

ಲತಾ ಎಂ.ಟಿ. ಅವರ ಮಾಲೀಕತ್ವದಲ್ಲಿ ಪ್ರಾರಂಭವಾಗಿರುವ ನೂತನ ಮಳಿಗೆಯಲ್ಲಿ ಪರಿಶುದ್ಧವಾ ನೀರಾ ಲಭ್ಯ. ಒಳ್ಳೆಯ ಕೋಲ್ಡ್‌ಚೈನ್ ವ್ಯವಸ್ಥೆ ಮಾಡಿಕೊಂಡಿರುವ ಇವರು ಕಡಿಮೆ ಬೆಲೆಯಲ್ಲಿ ಗುಣಮಟ್ಟದ ನೀರಾ ಒದಗಿಸುತ್ತಿದ್ದಾರೆ. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ಪ್ರತಿಯೊಬ್ಬರೂ ಈ ನೀರಾ ಕೇಂದ್ರವನ್ನು ಹುಡುಕಿಕೊಂಡು ಬರುತ್ತಿದ್ದಾರೆ.



ಸೂಕ್ತ ಕೋಲ್ಡ್‌ಚೈನ್ ವ್ಯವಸ್ಥೆ
ಒಂದು ತೆಂಗಿನ ಮರದಲ್ಲಿ ಮೂರರಿಂದ ನಾಲ್ಕು ಹೊಂಬಾಳೆಗಳಿಂದ ನೀರಾ ತೆಗೆಯಬಹುದು. ನೀರಾ ಸಂಗ್ರಹಿಸುವ ಡಬ್ಬಿಗಳ ಕೆಳಗೆ ೧.೨ ಕೆಜಿಯಷ್ಟು ಐಸ್ ಇಡಬೇಕು. ಇದರಿಂದ ಉಷ್ಣಾಂಶ ನಿಯಂತ್ರಣದಲ್ಲಿರುತ್ತದೆ. ಇದರಿಂದ ಉತ್ತಮ ಗುಣಮಟ್ಟದ ನೀರಾ ಸಂಗ್ರಹ ಸಾಧ್ಯ ಎನ್ನುವ ಲತಾ ಅವರು ತಮ್ಮ ಅಂಗಡಿಯಲ್ಲಿ ಅತ್ಯುತ್ತಮ ಗುಣಮಟ್ಟದ ನೀರಾವನ್ನು ಪೂರೈಸುತ್ತಿದ್ದಾರೆ.


ಆರೋಗ್ಯಕರ ಪೇಯ

ವೈಜ್ಞಾನಿಕವಾಗಿ ಸಂಗ್ರಹಿಸಿದ ನೀರಾದಲ್ಲಿ ಔಷಧೀಯ ಗುಣಗಳು ಸಾಕಷ್ಟಿವೆ. ಇದರಿಂದಾಗಿ ಹಲವಾರು ಪ್ರಯೋಜನಗಳಿವೆ. ಅವುಗಳೆಂದರೆ,

* ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ಚರ್ಮದ ಆರೋಗ್ಯ ವೃದ್ಧಿಗೆ ನೀರಾ ಸೇವನೆ ಸಹಕಾರಿ.

* ಕಣ್ಣಿನ ಆರೋಗ್ಯಕ್ಕೂ ನಿರಂತರ ನೀರಾ ಸೇವನೆ ಮಾಡುವುದು ಒಳಿತು.

* ಬಿಪಿ, ಶುಗರ್ ಉಳ್ಳವರು ನೀರಾ ಸೇವೆನೆ ಮಾಡುವುದು ಸೂಕ್ತ. ನೀರಾದಿಂದ ತಯಾರಿಸಿದ ಸಕ್ಕರೆಯನ್ನೂ ಇವರು ಬಳಸಬಹುದು.

* ರಕ್ತ ಹೀನತೆ ತಡೆಯುವಲ್ಲಿ ನೀರಾ ಪರಿಣಾಮಕಾರಿ.

* ಗರ್ಭಿಣಿ ಮಹಿಳೆಯರು ನೀರಾ ಸೇವಿಸುವುದರಿಂದ ನಿಶ್ಯಕ್ತಿಯಿಂದ ದೂರವಿರಬಹುದು.

* ಶ್ವಾಸಕೋಸ, ಕಿಡ್ನಿ ಸಂಬಂಧಿತ ಸಮಸ್ಯೆಗಳಿಗೆ ನೀರಾದಿಂದ ಪರಿಹಾರವಿದೆ.

* ಕೆಲವಾರು ಬಗೆಯ ಕ್ಯಾನ್ಸರ್‌ಗಳನ್ನು ನೀರಾ ಸೇವನೆಯಿಂದ ತಡೆಗಟ್ಟಬಹುದು.


ಬಹಳಷ್ಟು ಮಂದಿ ನೀರಾ ಮತ್ತು ಹೆಂಡವನ್ನು ಒಂದೇ ಎಂದು ತಿಳಿಯುತ್ತಾರೆ. ಇದು ತಪ್ಪು. ೪ ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ ಶೇಖರಣೆ ಮಾಡಿದ ನೀರಾ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದ್ದು. ಒಂದು ಲೋಟ ನೀರಾ ನಾಲ್ಕು ಲೋಟ ಎಳನೀರಿಗೆ ಸಮ. ವಿಟಮಿನ್ ಎ, ಬಿ, ಸಿಗಳು ಇದರಲ್ಲಿ ಇದ್ದು, ಎಲ್ಲ ವಯೋಮಾನದವರೂ ಕುಡಿಯಬಹುದು.

ಲತಾ ಎಂ.ಟಿ., ಮಾಲೀಕರು, ನೀರಾ ಕೇಂದ್ರ ಮೈಸೂರು


ಉತ್ತಮ ಗುಣಮಟ್ಟದ ನೀರಾಗಾಗಿ ಸಂಪರ್ಕಿಸಿ

೩೦೧೧/ಬಿ೨, ಒಂಟಿಕೊಪ್ಪಲ್ ಶ್ರೀ ವೆಂಕಟೇಶ್ವರ ದೇವಸ್ಥಾನದ ಹಿಂಭಾಗ, ಗೋಕುಲಂ ಮುಖ್ಯರಸ್ತೆ, ವಿವಿ ಮೊಹಲ್ಲಾ, ಮೈಸೂರು

ದೂ.ಸಂ.; ೮೪೩೧೦೦೮೦೮೬, ೮೬೬೦೫೦೧೯೦೯

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ