Mysore
16
few clouds

Social Media

ಶುಕ್ರವಾರ, 30 ಜನವರಿ 2026
Light
Dark

ಯೋಗ ಕ್ಷೇಮ : ಮಕ್ಕಳ ಮೊಬೈಲ್ ಬಳಕೆಗೆ ಕಡಿವಾಣ ಇರಲಿ

ಮಗು ಅಳುತ್ತಿದೆ ಎಂದರೆ ಮೊಬೈಲ್ ಕೊಡು ಎನ್ನುವ ಕಾಲಕ್ಕೆ ಬಂದು ಮುಟ್ಟಿದ್ದೇವೆ. ಎಳೆಯ ಮಕ್ಕಳಿಂದ ಮೊದಲ್ಗೊಂಡು ಪ್ರೌಢ ವಯಸ್ಕರ ವರೆಗೂ ಮೊಬೈಲ್ ಬೇಕೇ ಬೇಕು. ಆದರೆ ಇಂತಹ ಮಕ್ಕಳ ಕಣ್ಣಿನ ಪಾಲಿಗೆ ಅತಿಯಾದ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್‌ಗಳ ಬಳಕೆ ತೊಂದರೆ ತಂದೊಡ್ಡಬಹುದು.

ಹೆಚ್ಚಿನ ಸಮಯ ಮೊಬೈಲ್ ಸೇರಿ ಇತರ ಉಪಕರಣಗಳ ಪರದೆಗಳನ್ನು ವೀಕ್ಷಣೆ ಮಾಡುವುದರಿಂದ ಕಣ್ಣಿನ ರೆಟಿನಾ ಮೇಲೆ ಕೆಟ್ಟ ಪರಿಣಾಮ ಉಂಟಗುತ್ತದೆ. ಇದು ಮುಂದೆ ದೃಷ್ಟಿ ದೋಷಕ್ಕೆ ಎಡೆಮಾಡಿಕೊಡುವುದು ಖಚಿತ. ಇತ್ತೀಚಿನ ಅಧ್ಯಯನದ ಪ್ರಕಾರ ಶೇ.೩೦ರಿಂದ ೪೦ ರಷ್ಟು ಮಕ್ಕಳು ಕಣ್ಣಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಹಾಗೆಂದು ಮಕ್ಕಳನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಬೆಸೆದುಕೊಳ್ಳುವಂತೆ ಮಾಡದೇ ಇರಲು ಸಾಧ್ಯವಿಲ್ಲ. ಹೀಗಾಗಿ ಕೆಲವಾರು ಅಂಶಗಳ ಪಾಲನೆ ಮಾಡುವುದರಿಂದ ಕಣ್ಣಿನ ಆರೋಗ್ಯದ ಕಡೆಗೂ ಗಮನ ನೀಡಬಹುದು.

* ದೀರ್ಘ ಕಾಲ ಡಿಜಿಟಲ್ ಪರದೆಗಳನ್ನು ನೋಡುವುದನ್ನು ತಪ್ಪಿಸಿ ಹೊರಗಿನ ಹಸಿರನ್ನು ನೋಡಲು ಮಕ್ಕಳನ್ನು ಪ್ರೋತ್ಸಾಹಿಸಬೇಕು.

* ಮಕ್ಕಳು ಪದೇ ಪದೆ ಕಣ್ಣುಜ್ಜದಂತೆ ಎಚ್ಚರ ವಹಿಸಿ, ಪ್ರತಿ ೨೦ ನಿಮಿಷಗಳಿಗೊಮ್ಮೆ ಮಕ್ಕಳ ಕಣ್ಣುಗಳಿಗೆ ವಿರಾಮ ನೀಡುವಂತೆ ಮಾಡಿ.

* ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ಟಿವಿ ಬಳಸುತ್ತಿದ್ದರೆ ಪರದೆಯಿಂದ ಮಕ್ಕಳು ಕನಿಷ್ಠ ೩೩ ಸೆ.ಮೀ ದೂರ ಕುಳಿತುಕೊಳ್ಳುವಂತೆ ನೋಡಿಕೊಳ್ಳಿ.

* ಏನಾದರೂ ತೊಂದರೆ ಉಂಟಾಗುತ್ತಿದೆ ಎನ್ನಿಸಿದರೆ ಪ್ರಾರಂಭಿಕ ಹಂತದಲ್ಲಿಯೇ ಮಕ್ಕಳನ್ನು ನೇತ್ರ ವೈದ್ಯರ ಬಳಿ ಕರೆದೊ್ಂದುು ತಪಾಸಣೆ ಮಾಡಿಸಿ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!