Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಯೋಗ ಕ್ಷೇಮ : ವೀರ್ಯ ಸ್ಖಲನದ ಬಗ್ಗೆ ತಪ್ಪು ತಿಳುವಳಿಕೆ ಬೇಡ

ವೀರ್ಯವು ಲೈಂಗಿಕಾಂಗಗಳಿಂದ ಹೊರಚೆಲ್ಲಲ್ಪಡುತ್ತದೆ. ಈ ವೇಳೆ ಸ್ನಾಯುಗಳು ವಿಕಸನ, ಸಂಕುಚಿತ ಕ್ರಿಯೆಗೆ ಒಳಪಟ್ಟು ಶಕ್ತಿಯು ವ್ಯಯವಾಗುತ್ತದೆ. ಈ ವೇಳೆ ಸೊಂಟದ ಸುತ್ತಲೂ ನಿಶ್ಯಕ್ತಿಯ ಅನುಭವ ಆಗುವುದು ಸ್ವಾಭಾವಿಕ. ಇದು ವೀರ್ಯನಾಶದಿಂದ ಆಗುತ್ತಿದೆ ಎಂದು ತಿಳಿಯುವುದು ಮೂಢನಂಬಿಕೆ. ಕೆಲವರಲ್ಲಿ ಕೆಲವೊಮ್ಮೆ ಮೂತ್ರ ವಿಸರ್ಜನೆ ಸಮಯದಲ್ಲೇ ಅಥವಾ ಕೊನೆಯಲ್ಲಿ ಮಜ್ಜಿಗೆ ಬಣ್ಣದಂಥ ಮೂತ್ರ ಅಥವಾ ಲೋಳೆಯಂತಹ ವಿಸರ್ಜನೆಯಾಗಬಹುದು. ಆಗ ಮೂತ್ರದೊಂದಿಗೆ ವೀರ್ಯ ವಿಸರ್ಜನೆಯಾಗುತ್ತಿದೆ ಎಂದು ಬಹಳಷ್ಟು ಮಂದಿ ತಪ್ಪು ತಿಳಿದುಕೊಂಡಿರುತ್ತಾರೆ. ಲೈಂಗಿಕಾಂಗಳಲ್ಲಿರುವ ಯುರೇತ್ರಲ್ ಮತ್ತು ಪ್ರಾನ್ಟೇಟ್ ಗ್ರಂಥಿಗಳು ಸ್ರವಿಸುವ ರಸರಗಳು ಒಮ್ಮೊಮ್ಮೆ ಮೂತ್ರದ ಜೊತೆಗೆ ಬೆರಕೆಯಾವುದೇ ಮಜ್ಜಿಗೆ ಬಣ್ಣದ ಮೂತ್ರ ವಿಸರ್ಜನೆಗೆ ಕಾರಣ. ಹಾಗಾಗಿ ಯುವಕರು ಮೂತ್ರದ ಬಣ್ಣದ ವ್ಯತ್ಯಾಸಕ್ಕೂ ವೀರ್ಯನಾಶಕ್ಕೂ ಸಂಬಂಧವಿದೆ ಎಂದುಕೊಳ್ಳಬಾರದು.

ಲೈಂಗಿಕ ಕ್ರಿಯೆಯ ಸಮಯದಲ್ಲಿ ಹೊರ ಚೆಲ್ಲುವ ವೀರ್ಯದ ಬಣ್ಣ, ಪ್ರಮಾಣ, ಸಾಂದ್ರತೆಯು ಲೈಂಗಿಕ ಪ್ರಚೋದನೆಯ ತೀವ್ರತೆ, ವಯಸ್ಸು, ಹಾರ್ಮೋನ್‌ಗಳ ಮಟ್ಟ, ಸಂಗಾತಿಯೊಡನೆ ಇರುವ ಸಾಮರಸ್ಯ ಮತ್ತು ಪುರುಷನ ಆರೋಗ್ಯವನ್ನು ಅವಲಂಬಿಸಿರುತ್ತದೆ. ವಯಸ್ಸಾದಂತೆ ವೀರ್ಯದ ಬಣ್ಣವು ತಿಳಿ ಹಳದಿ ಬಣ್ಣಕ್ಕೆ ತಿರುಗಬಹುದು. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆ ನಿಮಿತ್ತ ಹಾಗೂ ವಯಸ್ಸು ಹೆಚ್ಚಾದಂತೆ ವೀರ್ಯದ ಪ್ರಮಾಣವೂ ಕಡಿಮೆಯಾಗಬಹುದು. ಯುವಕರಲ್ಲಿ ವೀರ್ಯ ಸ್ಖಲನ, ವೀರ್ಯದ ಪ್ರಮಾಣದಲ್ಲಿ ವ್ಯತ್ಯಾಸವಾದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಮದುವೆಯಾಗಿ ಮಕ್ಕಳಾಗಿದ್ದರೆ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!