Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದ್ರೌಪದಿ ಮುರ್ಮು ಬೆಳೆದ ರೀತಿ ಸ್ಫೂರ್ತಿದಾಯಕ

ದೇಶದ ೧೫ ನೇ ರಾಷ್ಟ್ರಪತಿ, ೨ನೇ ಮಹಿಳಾ  ರಾಷ್ಟ್ರಪತಿಯಾಗಿ ಬುಡಕಟ್ಟು ಮಹಿಳೆ

ಶತಮಾನಗಳಿಂದ ಅಸಮಾನತೆಯ ಸಮಾಜದಲ್ಲಿ ನೋವುಗನ್ನು ಉಂಡಿ, ಕಡೆಗಣನೆಗೆ ಸಿಲುಕಿ, ದಬ್ಬಾಳಿಕೆ, ದೌರ್ಜನ್ಯಕ್ಕೆಗಳ ನಡುವೆಯೂ ಮಹಿಳೆಯರು ಸ್ವತಂತ್ರ್ಯದ ನಂತರ ಸಂವಿಧಾನದಲ್ಲಿ ಸಿಕ್ಕಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಇಂದು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಚಾಪನ್ನು ಮೂಡಿಸುತ್ತಿದ್ದಾರೆ.
ಹೌದು.. ಅಂತಹವರ ಸಾಲಿಗೆ ಈಗ ಬುಡುಕಟ್ಟು ಮಹಿಳೆಯಾದ ದ್ರೌಪದಿ ಮುರ್ಮು ಅವರು ಭಾರತದ ರಾಷ್ಟ್ರಪತಿಯಾಗುತ್ತಿರುವುದು ಸಂತಸದ ವಿಷಯವಾಗಿದೆ. ಇದೇ ಜುಲೈ ತಿಂಗಳು ೧೮ರಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಡುಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಸಂಚಲನ ಮೂಡಿಸಿದೆ.

ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರೂ ಸ್ಪರ್ಧಿಸಿದ್ದಾರೆ. ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದ್ದು, ಈ ಮೂಲಕ ಒಡಿಶಾ ಮೂಲದ ಮಹಿಳೆಯೊಬ್ಬರು ದೇಶದ ಮೊದಲ ಬುಡಕಟ್ಟು ಸಮುದಾಯದ ರಾಷ್ಟ್ರಪತಿಯಾಗಿಯೂ, ಭಾರತದ ಎರಡನೇ ಮಹಿಳಾ ರಾಷ್ಟ್ರಪತಿಯಾಗಿಯೂ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

೧೯೯೭ರಲ್ಲಿ ಕೌನ್ಸಿಲರ್ ಆಗಿ ರಾಜಕೀಯ ವೃತ್ತಿಗೆ ಕಾಲಿರಿಸುವ ಮುನ್ನ ಅವರು ಶಿಕ್ಷಕಿಯಾಗಿದ್ದರು. ಬಿಜೆಪಿಯ ಬುಡಕಟ್ಟು ಮೋರ್ಚಾ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿರುವ ಅವರು, ಒಡಿಶಾದಲ್ಲಿ ಬಿಜೆಪಿ-ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ ೨೦೦೦-೨೦೦೨ರವರೆಗೆ ವಾಣಿಜ್ಯ ಮತ್ತು ಸಾರಿಗೆ ಸ್ವತಂತ್ರ ಖಾತೆ ರಾಜ್ಯ ಸಚಿವೆಯಾಗಿದ್ದರು. ೨೦೦೨-೨೦೦೪ರವರೆಗೆ ಮೀನುಗಾರಿಗೆ ಮತ್ತು ಪ್ರಾಣಿ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾಗಿಯೂ ಇದ್ದರು. ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲೆಯಾಗಿ ಕಾರ್ಯ ನಿರ್ವಹಿಸಿದ ಒಡಿಶಾದ ಮೊದಲ ಬುಡಕಟ್ಟು ನಾಯಕಿ ನಾಯಕಿ ಎಂಬ ಕೀರ್ತಿಗೂ ಹೆಸರಾದರು.

ನೋವುಗಳ ನಡುವೆ ದ್ರಾಪದಿ ಮುರ್ಮು 
ಮಯೂರ್‌ಭಂಜ್ ಜಿಲ್ಲೆಯ ಕುಸುಮಿ ಬ್ಲಾಕ್‌ನ ಉಪಾರ್ಬೇಡ ಎಂಬ ಕುಗ್ರಾಮದಲ್ಲಿ ಸಂಟಲ್ ಬುಡಕಟ್ಟು ಕುಟುಂಬದಲ್ಲಿ ೧೯೫೮ರ ಜೂನ್ ೨೦ರಂದು ಜನಿಸಿದ ದ್ರೌಪದಿ ಮುರ್ಮು ಅವರ ಜೀವನ ಕಡುಬಡತನ, ಶೋಚನೀಯ ಸಾಮಾಜಿಕ ಸ್ಥಿತಿಯಂತಹ ನೂರಾರು ಸಂಕಷ್ಟಗಳ ನಡುವೆೆುೀಂ ಅವರು ಬೆಳೆದುನಿಂತ ಪರಿ ಅಚ್ಚರಿ ಹಾಗೂ ಸ್ಛೂರ್ತಿದಾಯಕ. ಅವರ ಒಬ್ಬ ಮಗ ೨೦೦೯ರಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದರು. ಮತ್ತೊಬ್ಬ ಮಗ ೨೦೧೨ರಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದರು. ಪ್ರಸ್ತುತ ಅವರಿಗೆ ಒಬ್ಬ ಮಗಳು ಇತಿಶ್ರೀ ಮಾತ್ರ ಇದ್ದಾರೆ. ಅವರು ಮದುವೆಯಾಗಿ ಭುವನೇಶ್ವರದಲ್ಲಿ ನೆಲೆಸಿದ್ದಾರೆ. ಪತಿ ಗಣೇಶ್ ಹೆಂಬ್ರಮ್ ರಗ್ಬಿ ಆಟಗಾರರಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ