Mysore
27
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಕಿರಿಯ ಪ್ರತಿಭೆಗೆ ಹಿರಿದಾದ ಗೌರವ

  • ಪ್ರಶಾಂತ್ ಎಸ್

ಸಾಂಸ್ಕೃತಿಕ ನಗರಿ ಮೈಸೂರು ಹಲವು ಪ್ರತಿಭೆಗಳ ತವರು. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅನುಷ್ಠಾನಗೊಳ್ಳುವುದಕ್ಕೂ ಮೊದಲು ವಿವಿಧ ಕ್ಷೇತ್ರಗಳ ಪ್ರತಿಭೆಗಳನ್ನು ರಾಜಾಶ್ರಯ ನೀಡಿ ಪ್ರೋತ್ಸಾಹಿಸಿದ ಕೀರ್ತಿ ಮೈಸೂರು ಸಂಸ್ಥಾನವನ್ನಾಳಿದ ಮಹಾರಾಜರುಗಳಿಗೆ ಸಲ್ಲಬೇಕು. ಈಗ ರಾಜಪ್ರಭುತ್ವ ಇಲ್ಲದಿದ್ದರೂ ಹಿಂದಿನ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಮೈಸೂರು ತನ್ನ ವಿಶೇಷತೆಗಳನ್ನು ಕಾಪಿಟ್ಟುಕೊಂಡಿದೆ. ಹಾಗಾಗಿ ಇಲ್ಲಿನ ಪ್ರತಿಭೆಗಳು ಕರ್ನಾಟಕ ರಾಜ್ಯ, ದೇಶ ಮಾತ್ರವಲ್ಲದೆ ಜಾಗತಿಕ ವೇದಿಕೆಗಳಲ್ಲೂ ಛಾಪುಮೂಡಿಸಿದ್ದಾರೆ.

ಅನ್ವೇಷಿಸುತ್ತಾ ಹೊರಟರೆ ಹಲವಾರು ಪ್ರತಿಭೆಗಳು ಸದ್ದಿಲ್ಲದೆ ಸಾಧನೆಯತ್ತ ಚಿತ್ತ ನೆಟ್ಟು ಕೆಲಸದಲ್ಲಿ ನಿರತವಾಗಿವೆ. ಇಂತಹ ತಾರೆಗಳ ಸಾಲಿಗೆ ಸೇರುವವರು ಮೈಸೂರಿನ ತಾನ್ಯ. ಉತ್ತಮ ಈಜು ಪಟುವಾಗಿ ಗುರುತಿಸಿಕೊಂಡಿರುವ ತಾನ್ಯ.ಇದೀಗ 14 ವರ್ಷ ಒಳಪಟ್ಟವರ ರಾಜ್ಯಮಟ್ಟದ 2ನೇ ಮಿನಿ ಒಲಿಂಪಿಕ್ ಗೇಮ್ಸ್-2022ನಲ್ಲಿ ಎರಡು ಪದಕ ಪಡೆದು ಮಿಂಚಿದ್ದಾರೆ.ಸಾಧನೆಗೆ ವುಂಸ್ಸಿನ ಹಂಗಿಲ್ಲವಲ್ಲ, ಯಾರು, ಯಾವುದೇ ವಯಸ್ಸಿನಲ್ಲಾದರೂ, ಯಾವುದಾದರೂ ಕ್ಷೇತ್ರದಲ್ಲಿ ಅದ್ವಿತೀವಾದುದನ್ನು ಸಾಧಿಸಬಹುದು.

ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಡಾಲ್ವಿನ್ ಅಕ್ವಾಟಿಕ್ಸ್ ಅನ್ನು ಪ್ರತಿನಿಧಿಸಿದ ಎಸ್. ತಾನ್ಯ 200 ಮೀಟರ್ ಬೆಸ್ಟ್ ಸ್ಟ್ರೋಕ್ (2:57.41ನಿ.) ಮತ್ತು 100 ಮೀಟರ್ ಬೆಸ್ಟ್ ಸ್ಟ್ರೋಕ್ (1:22.42 ನಿ. ) ನಲ್ಲಿ ಕ್ರಮವಾಗಿ ಬೆಳ್ಳಿ, ಕಂಚಿನ ಪದಕ ಪಡೆದಿದ್ದಾರೆ. 200 ಮೀಟರ್ ಬೆಸ್ಟ್ ಸ್ಟ್ರೋಕ್‌ನಲ್ಲಿ ತಮ್ಮ ಸಮೀಪದ ಸ್ಪರ್ಧಿ ಬೆಂಗಳೂರಿನ ಬಸವನಗುಡಿ ಅಕ್ರೆಟೆಕ್ ಸೆಂಟರ್‌ನ ವಿಹಿತಾ ನುಂನಾ ಅವರಿಗಿಂತ 4 ಸೆಕೆಂಡ್ ತಡವಾಗಿ ಗುರಿ ಮುಟ್ಟುವ ಮೂಲಕ ಮೊದಲ ಸ್ಥಾನದಿಂದ ವಂಚಿತರಾಗಿ 2ನೇ ಸ್ಥಾನ ಪಡೆದಿದ್ದಾರೆ.

100 ಮೀಟರ್ ಬೆಸ್ಟ್ ಸ್ಟ್ರೋಕ್ ಈಜನ್ನು 1:2 ನಿಮಿಷದಲ್ಲಿ ಪೂರ್ಣಗೊಳಿಸಿ 3 ನೇ ಸ್ಥಾನ ಪಡೆದರು. ತಮ್ಮ ಸಮೀಪದ ಸ್ಪರ್ಧಿಗಿಂತ ಒಂದು ಸೆಕೆಂಡ್ ತಡವಾಗಿ ಈಜಿದ್ದರಿಂದ ಕೂದಲೆಳೆ ಅಂತರದಲ್ಲಿ 2ನೇ ಸ್ಥಾನದಿಂದ ವಂಚಿತರಾದರು. ಆದರೂ ಮಿನಿ ಒಲಿಂಪಿಕ್ಸ್ ಈಜು ಸ್ಪರ್ಧೆಯಲ್ಲಿ 2 ಪದಕ ಪಡೆದ ಮೈಸೂರಿನ ಮೊದಲ ಕ್ರೀಡಾಪಟು ಎಂಬ ಗೌರವಕ್ಕೆ ತಾನ್ಯ ಪಾತ್ರರಾಗಿದ್ದಾರೆ.

ಈಕೆ ಮೈಸೂರಿನ ಶಾರದಾ ಪಬ್ಲಿಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ. ಎಸ್.ಪಿ. ಷಡಕ್ಷರಿ ಮತ್ತು ಎನ್. ಶ್ವೇತಾ ದಂಪತಿ ಪುತ್ರಿಯಾಗಿರುವ ತಾನ್ಯ, ಮೈಸೂರಿನ ಜೆ.ಪಿ.ನಗರದ ಈಜುಕೊಳದಲ್ಲಿ ಪವನ್ ಕುವಾರ್ ಎಂಬವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ತಾನ್ಯ ಓದಿನೊಂದಿಗೆ ಕ್ರೀಡೆಯಲ್ಲಿಯೂ ತೊಡಗಿಸಿಕೊಂಡು ಯಶಸ್ಸಿನತ್ತ ಸಾಗಿರುವುದು ಪೋಷಕರಲ್ಲಿ ಸಂತಸ ಮೂಡಿಸಿದೆ. ಶಾರದಾ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ಸಹಪಾಠಿಗಳಿಗೆ ವಿದ್ಯಾರ್ಥಿನಿ ತಾನ್ಯ ಅಚ್ಚುಮೆಚ್ಚು. ಶಾಲೆಯ ಆಡಳಿತ ಮಂಡಳಿಯೂ ತಾನ್ಯಳ ಪ್ರಯತ್ನಕ್ಕೆ ನೀರೆರೆಯುತ್ತಿದ್ದು, ಈಕೆಯ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಅಥ್ಲೆಟಿಕ್ಸ್ ಮುಂತಾದ ಕ್ರೀಡೆಗಳಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದ ಅನೇಕ ಕ್ರೀಡಾಪಟುಗಳು ಇದ್ದಾರೆ. ಆದರೆ ಈಜು ಸ್ಪರ್ಧೆಯಲ್ಲಿ ಕಿರಿಯ ವಯಸ್ಸಿಗೇ ಅತಿ ಹೆಚ್ಚು ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡ ಕೀರ್ತಿ ತಾನ್ಯಗೆ ಸಲ್ಲುತ್ತದೆ. ಕೇರಳದ ತಿರುವನಂತಪುರದ ಡಾ.ಬಿ.ಆರ್. ಅಂಬೇಡ್ಕರ್ ಆಕ್ವಾಟಿಕ್ ಕಾಂಪ್ಲೆಕ್ಸ್‌ನಲ್ಲಿ ನಡೆದ 33ನೇ ದಕ್ಷಿಣ ವಲುಂ ಆಕ್ವಾಟಿಕ್ ಚಾಂಪಿುಂನ್ ಶಿಪ್ ಸ್ಪರ್ಧೆಯಲ್ಲಿ ತಾನ್ಯ ವೈುಂಕ್ತಿಕ ಚಾಂಪಿಯನ್ ಶಿಪ್ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ನೂತನ ಮೀಟರ್ ರೆಕಾರ್ಡ್ ಮತ್ತು ಉತ್ತಮ ಮೀಟರ್ ರೆಕಾರ್ಡ್ ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಸಾಧನೆಗೆ ಸಂದ ಗೌರವ : ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ 4ಚಿನ್ನ, 4 ಬೆಳ್ಳಿ, 6 ಕಂಚಿನ ಪದಕಗಳು, ದಕ್ಷಿಣ ವಲುಂ ಮಟ್ಟದ ಈಜು ಸ್ಪರ್ಧೆಯಲ್ಲಿ 4 ಚಿನ್ನ, 1 ಬೆಳ್ಳಿ ಪದಕಗಳು, ಸಿಬಿಎಸ್‌ಇನ ದಕ್ಷಿಣ ವಲುಂ ಕ್ರೀಡಾ ಸ್ಪರ್ಧೆಯಲ್ಲಿ 2 ಚಿನ್ನ, 2 ಬೆಳ್ಳಿ ಪದಕಗಳು, ಖೇಲೋ ಇಂಡಿಾಂ ಮಹಿಳೆುಂರ ಕ್ರೀಡಾಕೂಟದಲ್ಲಿ 2 ಚಿನ್ನ, 3 ಕಂಚಿನ ಪದಕಗಳು, ಕರ್ನಾಟಕ ಮಿನಿ ಒಲಂಪಿಕ್ಸ್ ಸ್ಪರ್ಧೆಯಲ್ಲಿ 1 ಬೆಳ್ಳಿ, 1 ಕಂಚಿನ ಪದಕ, ಸಿಬಿಎಸ್‌ಇ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ 4 ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಒಟ್ಟಾರೆ 16 ಚಿನ್ನ, 8 ಬೆಳ್ಳಿ ಹಾಗೂ 10 ಕಂಚಿನ ಪದಕಗಳು ತಾನ್ಯ ತಮ್ಮದಾಗಿಸಿಕೊಂಡಿದ್ದಾರೆ.
ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ವತಿಯಿಂದ ಇತ್ತೀಚೆಗೆ 29-06-2023 ರಿಂದ 02-06-2023 ರವರೆಗೆ ಬಸವನಗುಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಬ್ ಜೂನಿಯರ್ ಮತ್ತು ಸೀನಿಯರ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ರಿಲೇ ತಂಡದಲ್ಲಿ 5 ಈವೆಂಟ್‌ಗಳು ಮತ್ತು ೩ ಸ್ಪರ್ಧೆಗಳಲ್ಲಿ ವೈಯಕ್ತಿಕವಾಗಿ ಭಾಗವಹಿಸಿ ಒಟ್ಟು 8 ಪದಕಗಳನ್ನು ಗೆದ್ದಿದ್ದಾರೆ.

ರಿಲೇ ಸ್ಪರ್ಧೆಗಳಲ್ಲಿ ಪದಕದ ಸಾಧನೆ 

4200 ಮೀಟರ್ ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ – ಕಂಚು
4100 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ – ಕಂಚು
4100 ಮಿಡ್ಲ್ ರಿಲೇ ಸ್ಪರ್ಧೆಯಲ್ಲಿ – ಚಿನ್ನ

ಹೇಳಿಕೊಟ್ಟಿದ್ದನ್ನು ಶ್ರದ್ಧೆಯಿಂದ ಕಲಿಯವುದು,ತಪ್ಪದೇ ತರಬೇತಿಗೆ ಆಗಮಿಸುವುದರಿಂದ ತಾನ್ಯಳಿಗೆ ಈಜಿನಲ್ಲಿ ಸಾಧನೆ ಮಾಡಲು
ಸಾಧ್ಯವಾಗಿದೆ.
-ಪವನ್ ಕುವಾರ್. ಈಜು ತರಬೇತುದಾರ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ