Mysore
20
overcast clouds
Light
Dark

ವನಿತೆ ಮಮತೆ:ದೀಪದ ಹಬ್ಬಕ್ಕೆ ಚಿನ್ನ ಲೇಪಿತ ಬೆಳ್ಳಿ ಆಭರಣದ ಬೆಳಕು !

ಚೈತ್ರಾ ಎನ್. ಭವಾನಿ

ಲೈಫ್ ಸ್ಟೈಲ್ ಜರ್ನಲಿಸ್ಟ್

ಎಲ್ಲೆಲ್ಲೂ ಸುರು ಸುರು ಬತ್ತಿ ಬೆಳಕು. ಕತ್ತಲಲ್ಲಿ ಕಾರ್ತೀಕ ನಿಸರ್ಗದ ಚೆಲುವನ್ನು ತೋರಲು ದೀಪಗಳ ಹಬ್ಬ ಸಜ್ಜಾಗುತ್ತಿದೆ. ಬಂಗಾರದ ಅಂಗಡಿಗಳಲ್ಲೂ ವಿವಿಧ ವಿನ್ಯಾಸದ ಆಭರಣಗಳು ಗ್ರಾಹಕರನ್ನು ಸೆಳೆಯುತ್ತಿವೆ. ಬಂಗಾರದೊಡವೆ ಕೊಳ್ಳಲು ಸಾಧ್ಯವಿಲ್ಲದವರಿಗೆ ಚಿನ್ನ ಲೇಪಿತ ವರ್ಮೈಲ್ ಬೆಳ್ಳಿ ಆಭರಣಗಳು ಕೈ ಬೀಸಿ ಕರೆಯುತ್ತಿವೆ. ಅಷ್ಟೇ ಅಲ್ಲ, ಚಿನ್ನ ಬೇಡ ಎನ್ನುವವರಿಗೆ ಚಿನ್ನದಷ್ಟೇ ಅಂದ ಹೆಚ್ಚಿಸುವ ಈ ಆಭರಣಗಳು ಸದ್ಯದ ಟ್ರೆಂಡ್.

ಏನಿದು ವರ್ಮೈಲ್ ಆಭರಣಗಳು?

ಬೆಳ್ಳಿಯನ್ನು ಚಿನ್ನದಿಂದ ಎಲೆಕ್ಟ್ರೋಪ್ಲೇಟಿಂಗ್ ವಾಡುವ ಮೂಲಕ ಈ ಆಭರಣಗಳನ್ನು ವಿನ್ಯಾಸ ವಾಡಲಾಗಿದೆ. ಮೂಲ ಬೆಳ್ಳಿಯ ಆಭರಣವೇ ಆಗಿದ್ದರೂ ಗೋಲ್ಡ್ ಪ್ಲೇಟಿಂಗ್ ಮೂಲಕ ಚಿನ್ನದ ಆಭರಣದಂತೆ ಕಂಗೊಳಿಸುತ್ತದೆ. ಚಿನ್ನವನ್ನು ಬಿಟ್ಟರೇ ಚಿನ್ನದಷ್ಟೇ ಗುಣಮಟ್ಟದ ಆಭರಣಕ್ಕಾಗಿ ವರ್ಮೈಲ್ ಆಭರಣಗಳನ್ನು ಧರಿಸಬಹುದು.

ಯಾವೆಲ್ಲ ಡಿಸೈನ್ಸ್ ಇವೆ?

ನೆಕ್ಲೆಸ್, ಶಾರ್ಟ್ ಚೈನ್, ಲಾಂಗ್ ನೆಕ್ಲೆಸ್, ಕುಂದನ್ ಜುವ್ಕಾ, ಮುತ್ತಿನ ವಿನ್ಯಾಸದ ನೆಕ್ಲೆಸ್, ಕೈ ಕಡಗ, ಬಳೆ, ಉಂಗುರು ಸೇರಿದಂತೆ ಚಿನ್ನದ ಆಭರಣದಲ್ಲಿ ದೊರಕುವಂತೆ ಎಲ್ಲ ವಿನ್ಯಾಸಗಳೂ ಲಭ್ಯ.

ಬೆಲೆ ಎಷ್ಟು ?
ಉಂಗುರಗಳು ೧,೧೦೦ ರೂ. ನಿಂದ ಆರಂಭವಾದರೆ, ಶಾರ್ಟ್ ಸಾದಾ ನೆಕ್ಲೆಸ್ ೫,೦೦೦ ರೂ. ನಲ್ಲೂ ಲಭ್ಯವಿದೆ. ಇನ್ನೂ ಪರ್ಲ್, ಕುಂದನ್ ವಿನ್ಯಾಸದ ನೆಕ್ಲೆಸ್‌ಗಳು ೨೦,೦೦೦ ರೂ. ವರೆಗೂ ದೊರೆಯುತ್ತವೆ. ಇವೆಲ್ಲವುಗಳ ಬೆಲೆ ನಿಮ್ಮ ಆಯ್ಕೆಯ ಮೇಲೆ ನಿರ್ಧಾರ ಆಗುತ್ತದೆ.

ಕಸ್ಟಮೈಸ್ ಮತ್ತು ರೆಡಿ ಆಭರಣಗಳು ಲಭ್ಯ
ನಿಮಗಿಷ್ಟ ಬಂದ ಡಿಸೈನ್‌ಗಳನ್ನೂ ಹೇಳಿ. ಕಸ್ಟಮೈಸ್ ವಾಡಿಸಿಕೊಳ್ಳಬಹುದು. ಇಲ್ಲವೇ ಜ್ಯುವೆಲ್ಲರಿ ಅಂಗಡಿ, ಆನ್‌ಲೈನ್ ವಾರುಕಟ್ಟೆಯಲ್ಲೂ ವರ್ಮೈಲ್ ಆಭರಣಗಳು ಲಭ್ಯವಿವೆ.

ದಿನ ನಿತ್ಯ ಧರಿಸಲು ಸೂಕ್ತವೇ?

ಹಬ್ಬ, ಫಂಕ್ಷನ್‌ಗಳಿಗೆ ವಾತ್ರ ಈ ಆಭರಣ ಹೊಂದುತ್ತವೆ. ಪ್ರತಿನಿತ್ಯ ಧರಿಸುವುದರಿಂದ ಚಿನ್ನದ ಲೇಪನ ಬಹು ಬೇಗನೇ ವಾಸುವ ಸಾಧ್ಯತೆ ಇದೆ.

ನಿರ್ವಹಣೆ ಹೇಗೆ?
ಅಪರೂಪಕ್ಕೆ ಒಮ್ಮೆ ಡಿಶ್ ವಾಷಿಂಗ್ ಡಿಟರ್ಜೆಂಟ್‌ನಲ್ಲಿ ಬೆಚ್ಚಗಿನ ನೀರಿನಲ್ಲಿ ತೊಳೆದು ಗಾಳಿಯಾಡುವ ಜಾಗದಲ್ಲಿ ಇಟ್ಟು ಒಣಗಿಸಿ, ಜೋಪಾನವಾಗಿ ಎತ್ತಿಟ್ಟುಕೊಳ್ಳಬೇಕು. ಸೋಪು, ಶ್ಯಾಂಪೂ ಕೆಮಿಕಲ್ ತಗುಲದಂತೆ ನೋಡಿಕೊಂಡರೆ ದೀರ್ಘಕಾಲ ಬಾಳಿಕೆ ಬರುತ್ತವೆ.

ರೀಸೇಲ್ ವ್ಯಾಲ್ಯೂ ಕಡಿಮೆ
ಈ ಆಭರಣಗಳನ್ನು ವಾರಾಟ ವಾಡಲು ಬಯಸಿದರೇ ಇದರ ಬೆಲೆ ಸಹಜವಾಗಿಯೇ ಕಡಿಮೆಯಾಗುತ್ತದೆ.

ಈ ದೀಪಾವಳಿಗೆ ಚಿನ್ನದಷ್ಟೇ ಮೆರುಗು ನೀಡುವ ಚಿನ್ನ ಲೇಪಿತ ಬೆಳ್ಳಿ ಆಭರಣಗಳನ್ನು ಧರಿಸಿ ಚಿನ್ನದ ಖುಷಿಯನ್ನು ಅನುಭವಿಸಬಹುದು. ನವ ವಧುವರರಿಗೆ ಅಮ್ಮನ ಮನೆಯ ದೀಪಾವಳಿ ಉಡುಗೊರೆಯೂ ಆಗಬಹುದು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ