Mysore
20
overcast clouds
Light
Dark

ಬಿಸಿಲ ಬೇಗೆಗೆ ತಂಪು ತಂಪು ಫೇಸ್ ಪ್ಯಾಕ್

• ಡಾ.ಚೈತ್ರ ಸುಖೇಶ್

ಬೇಸಿಗೆ ಆರಂಭವಾಗಿದೆ. ಈ ಬಾರಿಯ ಬಿಸಿಲು ಹೆಚ್ಚಾಗಿದ್ದು, ಬಿಸಿಲಿನ ಬೇಗೆ ಅಧಿಕಗೊಂಡಿದೆ. ಇದರಿಂದಾಗಿ ನಾವು ಹೊರಗೆ ಹೋದಾಗ ಸೂರ್ಯನ ಕಿರಣಗಳು ವಾರದ ಮುಖದ ಮೇಲೆ ಮಹಿಳಾ ಬಿದ್ದು, ಚರ್ಮದಲ್ಲಿ ಹಲವು ವ್ಯತ್ಯಾಸಗಳು ಉಂಟಾಗುತ್ತಿವೆ.

ಬೇಸಿಗೆಯ ಸಂದರ್ಭದಲ್ಲಿ ನಾವು ನಮ್ಮ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿರ ಬೇಕಾಗುತ್ತದೆ. ಅದರಲ್ಲಿಯೂ ಮುಖದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ. ಇದಕ್ಕಾಗಿ ನಾವು ಮನೆಯಲ್ಲಿಯೇ ಒಂದಿಷ್ಟು ಫೇಸ್ ಮಾಸ್ಕ್‌ಗಳನ್ನು ತಯಾರಿಸಿಕೊಂಡು ಬಳಸಬಹುದು. ನಾವು ಸರಳವಾಗಿ ಸಾಕಷ್ಟು ಆಯುರ್ವೇದದ ಫೇಸ್‌ ಮಾಸ್ಕ್ ಗಳನ್ನು ಬಳಸುವುದು ಹೆಚ್ಚು ಸೂಕ್ತ. ಈ ಮಾಸ್ಕ್‌ಗಳನ್ನು ವಾರದಲ್ಲಿ 2 ರಿಂದ 3 ಬಾರಿ ಬಳಸುವುದು ಉತ್ತಮ.

ಈ ಫೇಸ್‌ ಪ್ಯಾಕ್‌ಗಳನ್ನು ನಿಯಮಿತವಾಗಿ ಬಳಸುವುದರಿಂದ ಬಿಸಿಲಿನಿಂದ ಆಗುವ ಸ್ಕಿನ್ ಟ್ಯಾನ್, ಕಪ್ಪು ಕಲೆಗಳು, ತುರಿಕೆ, ಗಂಧೆ, ಚರ್ಮ ಕೆಂಪಾಗುವುದು, ಹೆಚ್ಚುವರಿ ಕಲೆಗಳು, ಬ್ಲಾಕ್ ಹೆಡ್ಸ್‌ಗಳು ಕಡಿಮೆಯಾಗಿ, ರಕ್ತಪರಿಚಲನೆ ಹೆಚ್ಚಾಗುತ್ತದೆ. ಅಲ್ಲದೆ ತ್ವಚೆಯ ಕಾಂತಿಯನ್ನೂ ಹೆಚ್ಚಿಸುತ್ತದೆ.

ನೈಸರ್ಗಿಕ ಅಥವಾ ಆಯುರ್ವೇದ ಸನ್‌ಸ್ಟೀಮ್ ಲೋಷನ್‌ ಆಲೋವೆರ ನಮ್ಮ ಮುಖದ ಚರ್ಮದ ರಕ್ಷಣೆಗೆ ಅತ್ಯಂತ ಹೆಚ್ಚು ಪರಿಣಾಮಕಾರಿ, ಆಲೋವರ ಗಿಡದ ಲೋಳೆಯನ್ನು (ಜೆಲ್) ಒಂದು ಕಡೆ ಸಂಗ್ರಹಿಸಿಕೊಂಡು ಇದಕ್ಕೆ ಸ್ವಲ್ಪ
ಎಳ್ಳೆಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹೀಗೆ ಮಾಡಿದ ಮಿಶ್ರಣವನ್ನು ಮಿಶ್ರಣವನ್ನು ದಿನಲೂ ಮುಖಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ಮುಖವನ್ನು ತೊಳೆದುಕೊಳ್ಳಬೇಕು. ಇದು ಮುಖಕ್ಕೆ ನೈಸರ್ಗಿಕ ಸನ್‌ಸ್ಟೀಮ್ ಲೋಷನ್
ಆಗಿ ಕಾರ್ಯನಿರ್ವಹಿಸಲಿದೆ.
chaitrasukesh18@gmail.com

1. ಅರ್ಧ ಚಮಚ ಅರಿಶಿಣ ಮತ್ತು 4 ಚಮಚ ಕಡ್ಲೆಹಿಟ್ಟನ್ನು ಹಾಲು ಅಥವಾ ಬೆಚ್ಚಗಿನ ನೀರಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಮುಖವನ್ನು ತೊಳೆದುಕೊಳ್ಳಬೇಕು. ಇದು ಮುಖದ ಕಾಂತಿಯನ್ನು ಹೆಚ್ಚಿಸುವ ಜೊತೆಗೆ ಮುಖದಲ್ಲಿರುವ ಕಲೆಯನ್ನೂ ದೂರ ಮಾಡುತ್ತದೆ.

2. ಗುಲಾಬಿ ಎಸಳು, ಮಲ್ಲಿಗೆ ಹೂ, ಸೇವಂತಿಗೆ ಹೂಗಳನ್ನು ಸಮಪ್ರಮಾಣದಲ್ಲಿ ರುಬ್ಬಿಕೊಂಡು ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಹಾಲನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಇದರಿಂದ ಮುಖದಲ್ಲಿ ಮೊಡವೆಗಳು ಹಾಗೂ ಅದರ ಕಲೆಗಳು ದೂರವಾಗುತ್ತವೆ.

3. ಚಂದನದ ಪುಡಿ ಮತ್ತು ಹಾಲನ್ನು ಸೇರಿಸಿ ಮಿಶ್ರಣ ಮಾಡಿಕೊಂಡು ನಂತರ ಅದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಚರ್ಮವು ಮೃದುವಾಗಿರಲು ಸಹಕಾರಿಯಾಗಲಿದೆ.

4. ಬೇವಿನ ಎಲೆ, ತುಳಸಿ ಪೇಸ್ಟ್ ತಯಾರಿಸಿ ಅದಕ್ಕೆ ಅರಿಶಿನ ಮತ್ತು ಶುದ್ಧವಾದ ನೀರನ್ನು ಮಿಶ್ರಣ ಮಾಡಬೇಕು. ನಂತರ ಅದನ್ನು ಮುಖಕ್ಕೆ ಹಚ್ಚಿ ಕೆಲ ಸಮಯದ ನಂತರ ಮುಖವನ್ನು ತೊಳೆದರೆ ಮುಖದಲ್ಲಿನ ಸುಕ್ಕು ಕಡಿಮೆಯಾಗುತ್ತದೆ.

5. ಸಕ್ಕರೆ ಪುಡಿಗೆ ತೆಂಗಿನೆಣ್ಣೆಯನ್ನು ಮಿಶ್ರಣ ಮಾಡಿ ಸಬ್ ರೀತಿಯಲ್ಲಿ ಬಳಸುವುದರಿಂದ ಮುಖದಲ್ಲಿ ಬ್ಲಾಕ್ ಹೆಡ್ ಮತ್ತು ಕಲೆಗಳು ಕಡಿಮೆಯಾಗಲಿವೆ.

6. ಟಮೊಟೋ ಜ್ಯೂಸ್ ತಯಾರಿಸಿಕೊಂಡು ಅದಕ್ಕೆ ಮಲ್ತಾನಿಮಿಟ್ಟಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಚರ್ಮಕ್ಕೆ ಹಚ್ಚುವುದರಿಂದ ಮುಖದಲ್ಲಿ ಡೆಡ್ ಸೆಲ್ಸ್ಗಳು ಕಡಿಮೆಯಾಗಿ ಮುಖ ಸ್ವಚ್ಛವಾಗಲಿದೆ.

7 ಆಹಿಟ್ಟು, ಹಾಲು, ಅರಿಶಿನವನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಬಣ್ಣ ತಿಳಿಯಾಗಲಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ