- ಫಾತಿಮಾ ರಲಿಯಾ
ಬಯಲು ಸೀಮೆಯ ಭಾಗ್ಯಮ್ಮ ನಮ್ಮ ಕರಾವಳಿಗೆ ಬಂದು ನೆಲೆಸಿ ಸರಿಸುವಾರು ಒಂದೂವರೆ ದಶಕಗಳೇ ಕಳೆದುಹೋಗಿದೆ. ಭಾಗ್ಯಮ್ಮನ ಮಗಳು ನಮ್ಮೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಾಳೆ. ನಮ್ಮನೆಗೆ ಬಂದಾಗೆಲ್ಲಾ ಮನೆ ಪೂರ್ತಿ ಗಲಗಲ ಓಡಾಡುತ್ತಾ ನಾನು ಡಾಕ್ಟ್ರ್ ಆಗ್ತೇನೆ ಅಕ್ಕಾ ಅಂತ ಪೂರ್ತಿ ಕರಾವಳಿಯ ಸ್ಲ್ಯಾಂಗ್ ಅಲ್ಲಿ ಮಾತಾಡುತ್ತಾಳೆ. ಅವಳಮ್ಮನೂ ಪ್ರತಿ ಬಾರಿ ಆಕೆ ನಮ್ಮನೆಗೆ ಬಂದಾಗ ನೋಡ್ರಿ ಅಕ್ಕೋರೆ.. ನನ್ ಮಗ್ಳಿಗ್ ಶಂಕ್ರಮ್ಮ ಅಂದು ಗಂಡ್ ಹೆಸ್ರು ಹೇಳಿದ್ದ, ನಾನ ಹಠ ಹಿಡದು ಅದು ಬ್ಯಾಡ ಅಂತೋಳಿ ಸೌಂದರ್ಯ ಅಂತ ಹೆಸ್ರಿಟ್ಟಿದ್ದು.. ಈಗ್ನೋಡಿ ಎಷ್ಟ್‌ಉದ್ದ ಬೆಳ್ದಾಳ, ಹೆತ್ಹೋಳಿಗೆ ದೃಷ್ಟಿ ತಗಿಯೋಹಂಗ ಎಂದು ನಿಟಿಕೆ ಮುರಿುುಂತ್ತಾರೆ.

ಮೂರು ಮನೆಗಳಲ್ಲಿ ಕೆಲಸ ಮಾಡುವ, ಒಂದ್ಲೋಟ ನೀರು ಕೊಡವ್ವಾ ಅನ್ನುತ್ತಲೇ ನಮ್ಮನೆಯ ಮೆಟ್ಟಿಲು ಹತ್ತುತ್ತಿದ್ದ ಭಾಗ್ಯಮ್ಮ ಮೊನ್ನೆ ಅಕ್ಕೋ, ನಾಳಿಂದ ನಿಮ್ಮನಿಗೆ ತಡವಾಗಿ ಬರ್ತೀನಿ, ಹೊಸ್ದಾಗೆ ಇನ್ನೊಂದ್ಮನೆ ಹಿಡ್ಕೊಂಡಿದ್ದೀನಿ ಕೆಲ್ಸಕ್ಕೆ. ಸರ್ಕಾರ ಹೆಂಗಸ್ರುಗೆಲ್ಲಾ ಬಸ್ ಫ್ರೀ ಕೊಟ್ಟಾರಲ್ಲ, ಇನ್ಮುಂದೆ ನಾನೂ ಬಸ್ಸಲ್ಲೇ ಬರ್ತೀನಿ.. ಅಂದರು ಸಂಭ್ರಮದಿಂದ. ದಿನಕ್ಕೆ ನಲವತ್ತು ರೂಪಾಯಿ ಉಳಿಸುವ ಆಸೆಯಿಂದ ನದಿ ಕಡಲನ್ನು ಸೇರುವ ಪ್ರದೇಶ ಬಳಸಿ ನಡ್ಕೊಂಡೇ ಕೆಲಸಕ್ಕೆ ಬರುತ್ತಿದ್ದ ಭಾಗ್ಯಮ್ಮನಿಗೆ ಈಗ ಮಗಳನ್ನು ಡಾಕ್ಟ್ರಿಕೆ ಮಾಡಿಸುವ ಕನಸಿಗೆ ರೆಕ್ಕೆ ಬಂದಂತಾಗಿದೆ. ನಿಮ್ ಮಗ್ಳಿಗೆ ಸುಕನ್ಯಾ ಯೋಜನೆ ವಾಡಿಸ್ರೀ ಅಕ್ಕಾ ಎಂದು ನನಗೇ ಹೇಳುತ್ತಿದ್ದ ಭಾಗ್ಯಮ್ಮನ ಕಣ್ಣಲ್ಲೀಗ ಸಂಭ್ರಮದ ಬೆಳಕು.
ಉಚಿತ ಕೊಟ್ಟರೆ ಜನ ಸೋಮಾರಿಗಳಾಗುತ್ತಾರೆ, ಬಿಟ್ಟಿ ಭಾಗ್ಯ, ದುಡಿದು ಬದುಕಲಿ ಎಂದೆಲ್ಲಾ ಉಪದೇಶ ಕೊಡುವ, ದಶಕಗಳಿಂದಲೂ ಉಚಿತ ಕರೆಂಟ್‌ನಿಂದ ತಮ್ಮ ಅಡಕೆ ತೋಟಗಳಿಗೆ ನೀರು ಹಾಯಿಸುತ್ತಿರುವ ಎಲೈಟ್ ಭಾರತಕ್ಕೆ ಕಲ್ಯಾಣ ಕಾರ್ಯಕ್ರಮಗಳಿಂದ ಖಜಾನೆ ಖಾಲಿಯಾಗುತ್ತದೆ, ರಾಜ್ಯ ದಿವಾಳಯಾಗುತ್ತದೆ ಎನ್ನುವ ಹುಸಿ ಆತಂಕ ಈಗ.
ಅದರಲ್ಲೂ, ಕೆಲವೇ ಕೆಲವು ದಿನಗಳ ಹಿಂದೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿರುವ ಶಕ್ತಿ ಯೋಜನೆಯ ಬಗ್ಗೆ ಈ ಮಂದಿಗಿರುವ ಅಸಹನೆ, ಅಸಹ್ಯ ಯೋಚನಾತೀತ. ಮಹಿಳೆಯರು ಮನೆ ಬಿಟ್ಟು ಬೀದಿ ತಿರುಗ್ತಾರೆ, ಮನೆ ಕೆಲಸ ವಾಡೋರಾರು? ಎಂಬಲ್ಲಿಂದ ಹಿಡಿದು ಹೆಂಗಸ್ರೆಲ್ಲಾ ಗಂಡ, ಮನೆ, ಸಂಸಾರ ಬಿಟ್ಟು ಪ್ರಿಯಕರನ ಜೊತೆ ಓಡಿಹೋಗ್ತಾರೆ ಅನ್ನುವಲ್ಲಿಯವರೆಗಿನ ಕುತ್ಸಿತ ಕಮೆಂಟ್‌ಗಳನ್ನೂ ಕುಹುಕಗಳನ್ನೂ ವಾಡಲೂ ಈ ಮಂದಿ ಹೇಸಲಿಲ್ಲ. ಅದರ ಜೊತೆಗೆ ಬಸ್ಸಿನ ಮುರಿದ ಬಾಗಿಲು, ಸಾರ್ವಜನಿಕ ಸ್ಥಳದಲ್ಲಾಗುವ ಸಹಜ ಜಗಳನ್ನೆಲ್ಲಾ ಈ ಯೋಜನೆಗೆ ಜೋಡಿಸುವ ಕೆಲಸವನ್ನು ವಾಧ್ಯಮಗಳೂ ತುಂಬಾ ವ್ಯವಸ್ಥಿತವಾಗಿ ವಾಡುತ್ತಿದೆ. ಮಹಿಳೆಯರನ್ನು ಅವರ ಬಟ್ಟೆ, ಮೈ, ಬೆವರು, ನಡೆ ಎಲ್ಲವುಗಳ ಮೂಲಕ ಅಳೆಯುವ, ಹೀಗೆಳೆಯವ ಪ್ರವೃತ್ತಿಗಳನ್ನು ಪ್ರಜ್ಞಾವಂತರು ಅನ್ನಿಸಿಕೊಂಡವರೇ ಮಾಡುತ್ತಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಓದಿರುವ, ಲಗಾಯ್ತಿನಿಂದಲೂ ಹಲವು ಸಬ್ಸಿಡಿಗಳನ್ನು ಪಡೆದುಕೊಳ್ಳುತ್ತಿರುವ, ಲಕ್ಷಾಂತರ ರೂಪಾಯಿ ದುಡಿಯುತ್ತಿದ್ದರೂ ಕ್ಯಾಂಟೀನಲ್ಲಿ ಹತ್ತು ರೂಪಾಯಿ ಕೊಟ್ಟು ಕಾಫಿ ಕುಡಿಯಲೊಪ್ಪದೆ ತಾವು ಕೆಲಸ ಮಾಡುವ ಸ್ಥಳದಲ್ಲಿ ಇರಿಸಿರುವ ಮೆಷಿನ್‌ನಿಂದಲೇ ಕಾಫಿ/ಟೀ ಕುಡಿಯುವ, ಕಂಪೆನಿ ಕೊಟ್ಟಿರುವ ವೈಫೈಯಿಂದಲೇ ಸಾಧ್ಯವಾದಷ್ಟು ಫೇಸ್‌ಬುಕ್, ಇನ್ಸ್ತ್ರ್ಟಾಗ್ರಾಂ ಬಳಸುವ ಅಷ್ಟೇಕೆ ಒಟಿಟಿ ಪ್ಲಾಟ್‌ಫಾರಂಗಳನ್ನೂ ಬಳಸುವ, ತಾವು ದುಡಿುುಂತ್ತಿರುವ ಕಂಪೆನಿಗಳು ಸರ್ಕಾರದಿಂದ ಲಕ್ಷಾಂತರ ರೂಪಾಯಿಗಳಷ್ಟು ತೆರಿಗೆ ವಿನಾಯಿತಿ ಪಡೆದುಕೊಳ್ಳದೇ ಇದ್ದರೆ ತಮಗಿಷ್ಟು ಸಂಬಳ ಬರುತ್ತಲೇ ಇರಲಿಲ್ಲ ಎಂಬುವುದರ ಬಗ್ಗೆ ಯೋಚನೆಯೇ ಮಾಡದ, ಸರ್ಕಾರದ ಯಾವ ಕಲ್ಯಾಣ ಯೋಜನೆಗಳನ್ನೂ ತಾವು ಬಳಸುತ್ತಲೇ ಇಲ್ಲ ಎಂಬಂತೆ ಪೋಸ್ ಕೊಡುವವರೇ ಇಂತಹ ಹುಸಿ ಆತಂಕಗಳನ್ನೂ, ಆರೋಪಗಳನ್ನೂ ತೇಲಿ ಬಿಡುವುದು ಕಾಲದ ವ್ಯಂಗ್ಯ.
ಶಾಸನ ಸಭೆಗಳಿಗೆ ಹೋಗುವಾಗಲೂ ಮನೆ ನಿಭಾಯಿಸಿಯೇ ಹೋಗುವ, ಡಿ.ಸಿ ಯಂತಹ ಉನ್ನತ ಹುದ್ದೆಯಲ್ಲಿರುವ ಮಹಿಳೆಯರೂ ಸಹ ತಾವು ಮನೆಗೆ, ಮಗುವಿಗೆ ಸಮಯ ಕೊಡುತ್ತಿಲ್ಲವೇನೋ ಎಂದು ಹಲುಬುವ, ಕಳವಳಗೊಳ್ಳುವ ಈ ದೇಶದಲ್ಲಿ ಮಹಿಳೆಐರು ಸಂಸಾರ ಬಿಟ್ಟು ಊರು ತಿರುಗಲು ಹೋಗುತ್ತಾರೆ ಅನ್ನುವುದೇ ಹಾಸ್ಯಾಸ್ಪದ. ಮಹಿಳೆಯರ ಬಗ್ಗೆ, ಅವರ ಕೆಲಸ ಕಾರ್ಯಗಳ ಬಗ್ಗೆ ಗೌರವ ಇಲ್ಲದವರಷ್ಟೇ ಈ ರೀತಿ ಯೋಚಿಸಲು, ಹೇಳಿಕೆ ನೀಡಲು ಸಾಧ್ಯ. ಬದುಕಿಗೆ ನೊಗ ಕೊಡುವ ಯಾವ ಮಹಿಳೆಯೂ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವುದಿಲ್ಲ.
ಇನ್ನು ತೀರ್ಥ ಯಾತ್ರೆಗೆ ಹೋಗುತ್ತಾರೆ, ಪ್ರವಾಸೀ ಕ್ಷೇತ್ರಗಳಿಗೆ ಹೋಗುತ್ತಾರೆ ಎನ್ನುವವರು ಹಾಗೆ ಯಾತ್ರೆ ಹೋಗುವವರು ವರ್ಷದ ಮುನ್ನೂರ ಅರುವತ್ತ್ತ್ಯೈದು ದಿನಗಳೂ ಯಾತ್ರೆಯಲ್ಲೇ ಇರುವುದಿಲ್ಲ ಎನ್ನುವುದನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ಮರೆತು ಬಿಡುವ ಸೋಜಿಗಕ್ಕೆ ಏನು ಹೆಸರಿಸಬೇಕೋ ಗೊತ್ತಾಗೋದಿಲ್ಲ. ಅದೂ ಅಲ್ಲದೆ ಈ ಯೋಜನೆ ಎಲ್ಲಿ ಬಂದಾಗಿಬಿಡುತ್ತದೋ ಎಂಬ ಆತಂಕದಲ್ಲಿ, ತಾವು ಎಷ್ಟೋ ದಿನಗಳಿಂದ ಕಂಡ ತೀರ್ಥಯಾತ್ರೆಯ ಕನಸುಗಳನ್ನು ಬೇಗ ಬೇಗನೇ ಪೂರೈಸಿಕೊಳ್ಳುವವರ ಬಗ್ಗೆ ನಾಲಗೆ ಹರಿಯಬಿಡುವುದು ಅಸಮಂಜಸ ವಾತ್ರ ಅಲ್ಲ ಅಮಾನವೀಯ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
ಬಸ್ ಸ್ಟಾಂಡ್ ತುಂಬಿ ತುಳುಕಾಡುತ್ತಿದೆ, ಬಸ್ಸಲ್ಲಿ ಕಾಲಿಡಲೂ ಜಾಗವಿಲ್ಲ ಎಂದೆಲ್ಲಾ ಆರೋಪ ಹೊರಿಸುವವರು, ಶಕ್ತಿ’ ಯೋಜನೆಯ ಬಗ್ಗೆ ಕಿಡಿ ಕಾರುವವರು ಒಮ್ಮೆ ತಣ್ಣಗೆ ಕೂತು ಯಾಕೆ ಹೀಗಾಗುತ್ತಿದೆ ಎಂದು ಯೋಚಿಸಿದರೆ ಈವರೆಗೂ ದಕ್ಕದ ಹೆಣ್ಣು ಜೀವದ ಸಂಕಷ್ಟಗಳು ಅರಿವಿಗೆ ಬರಬಹುದು. ಹಾಗೆ ಬರುವ ಮಹಿಳೆಯರು ಇಷ್ಟು ದಿನಗಳ ಕಾಲ ಆರ್ಥಿಕ ಕಾರಣವನ್ನು ಮುಂದಿಟ್ಟುಕೊಂಡು ಒಡಲ ಸಂಕಟವನ್ನು ಬಚ್ಚಿಟ್ಟುಕೊಂಡಿದ್ದರು ಎನ್ನುವುದನ್ನು ಅರ್ಥವಾಡಿಕೊಳ್ಳುವ ಕನಿಷ್ಠ ಅಂತಃಕರಣವನ್ನಾದರೂ ಉಳಿಸಿಕೊಳ್ಳಬೇಕು. ಇಷ್ಟಕ್ಕೂ ಕಂಫರ್ಟ್, ಐಶಾರಾಮವನ್ನು ಬಯಸುವವರು ಸರ್ಕಾರದ ಈ ಕೆಂಪು ಬಸ್ಸು ಹತ್ತುವುದಿಲ್ಲ, ಅವರೇನಿದ್ದರೂ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ತಮಗೆ ಬೇಕಾಗಿರುವ ಬಸ್‌ಗಳಲ್ಲೋ, ಕ್ಯಾಬ್‌ಗಳನ್ನೋ, ಖಾಸಗಿ ವಾಹನಗಳ ಮೇಲೋ ಅವಲಂಬಿತರಾಗುತ್ತಾರೆ ಎನ್ನುವ ಸತ್ಯ ಕಣ್ಮುಂದೆಯೇ ಇರುವಾಗ ಬಡವರಿಗೆ, ದಿನನಿತ್ಯದ ಓಡಾಟದ ಖರ್ಚನ್ನೂ ತೂಗಿಸಲಾಗದವರಿಗೆ ಸರ್ಕಾರ ನೀಡುವ ಯೋಜನೆಗಳು ಬೊಕ್ಕಸಕ್ಕೆ ಹೊರೆಯಾಗುವುದಿಲ್ಲ, ಹಾಗೆ ಹೊರೆ ಎನಿಸಿದರೂ ಅದನ್ನು ತುಂಬುವ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಬೇಕೇ ಹೊರತು ಸುಖಾಸುಮ್ಮನೆ ಕುಟಕಿಯಾಡುವುದು ಸರಿಯಲ್ಲ.
ಇದರಾಚೆಗೂ ಈ ಯೋಜನೆುಂಲ್ಲಿ ಲೋಪದೋಷಗಳೇನಾದರೂ ಇವೆಯಾ? ಯೋಚಿಸಿ ಅವನ್ನು ಸರಿಪಡಿಸಬೇಕು. ಸರ್ಕಾರ ಇಂತಹ ಯೋಜನೆಯನ್ನು ಕೊಟ್ಟರೂ ಅವನ್ನು ಬಳಸಿಕೊಳ್ಳಲು ಅವಕಾಶವನ್ನೇ ಕೊಡದೆ, ಎಂತಹ ತುರ್ತು ಕಾರ್ಯಗಳಿದ್ದರೂ ಮನೆಯಿಂದ ಹೊರಗಡಿಯಿಡದಂತೆ ಕಾವಲು ಕಾಯುವ, ಬಸ್ಸು ಹತ್ತಬೇಕೆಂದರೆ ದೈನೇಸಿಯಾಗಿ ಮನೆಯ ಗಂಡಸರ ಮುಂದೆ ಕೈ ಚಾಚಲೇಬೇಕು ಎಂಬ ಫರ್ವಾನು ಹೊರಡಿಸುವ ಗಂಡಾಳ್ವಿಕೆಗಳು ಅಸ್ತಿತ್ವದಲ್ಲಿವೆಯಾ? ಹಾಗಿದ್ದರೆ ಆ ಹೆಣ್ಣುಮಕ್ಕಳು ಸ್ವತಂತ್ರವಾಗಿ, ನಿರ್ಭದಿಂದ ಓಡಾಡಲು, ಕೌಟುಂಬಿಕ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ನಾವೇನು ವಾಡಬಹುದು? ಈ ಯೋಜನೆಯ ಅಂತಿಮ ಪ್ರಯೋಜನ ನಮ್ಮ ನಾಡಿನ ಹೆಣ್ಣುಮಕ್ಕಳಿಗೆ ಸಿಗುತ್ತಿದೆಯೇ? ಹಾಗೆ ಸಿಗುತ್ತಿಲ್ಲವಾದರೆ ನಾವೇನು ವಾಡಬಹುದು? ಮುಂತಾದ ಗಂಭೀರ ಪ್ರಶ್ನೆಗಳು, ಸವಾಲುಗಳು ನಮ್ಮ ಮುಂದೆ ಇರುವಾಗ ಆ ಬಗ್ಗೆ ಯೋಚಿಸದೇ ಬರಿ ಯೋಜನೆಯನ್ನು ಟೀಕಿಸುತ್ತಾ ಕಾಲ ಕಳೆಯುವುದನ್ನು ಉಳ್ಳವರ ಸಿನಿಕತನ ಅನ್ನುವುದನ್ನು ಹೊರತುಪಡಿಸಿ ಬೇರೆ ದಾರಿಯೇ ಇಲ್ಲ.





