Mysore
26
overcast clouds

Social Media

ಬುಧವಾರ, 09 ಏಪ್ರಿಲ 2025
Light
Dark

ಹಾಡು ಪಾಡು : ವಾರದ ಮುಖ

ತಮ್ಮ ತೊಂಬತ್ತೆರಡನೆಯ ವಯಸ್ಸಿನಲ್ಲಿಯೂ ಪದ್ಮಾಸನದಲ್ಲಿ ಕುಳಿತು ಮೂರು ಗಂಟೆಗಳ ಕಾಲ ವೀಣೆ ಮೀಟಬಲ್ಲ ಮೈಸೂರಿನ ಡಾ.ಆರ್.ವಿಶ್ವೇಶ್ವರನ್ ಅವರ ಈ ವೀಣೆಗೆ ಈಗ ಎಪ್ಪತ್ತು ವರ್ಷ ವಯಸ್ಸು. ಮೈಸೂರಿನ ರಾಮಾನುಜ ರಸ್ತೆಯ ಕ್ರಾಸೊಂದರಲ್ಲಿ ಅಂಗಡಿ ಇಟ್ಟುಕೊಂಡಿದ್ದ ವೀಣಾ ಮಾಂತ್ರಿಕ ರುದ್ರಪ್ಪನವರು ಯುವಕ ವಿಶ್ವೇಶ್ವರನ್ ಅವರಿಗೆ ಬೇಕಾಗಿೆುೀಂ ಈ ವಿಶೇಷ ವೀಣೆಯನ್ನು ತಯಾರಿಸಿಕೊಟ್ಟಿದ್ದರು. ದೇಶದಲ್ಲಿೆುೀಂ ಈಗಲೂ ೧೬ ಇಂಚಿನ ದೊಡ್ಡ ಕೊಡ ಇರುವ ಇಂತಹದೊಂದು ವೀಣೆ ಇಲ್ಲವಂತೆ. ಈ ವಯಸ್ಸಿನಲ್ಲಿಯೂ ಇಷ್ಟೊಂದು ಸುಲಲಿತವಾಗಿ ವೀಣೆ ನುಡಿಸಬಲ್ಲ ಇನ್ನೊಬ್ಬ ವೈಣಿಕನಿಲ್ಲ.
ಕಡೂರು ಬೀರೂರು ಕಡೆಯಿಂದ ಆ ಕಾಲದಲ್ಲಿ ಮೈಸೂರಿಗೆ ಬಂದ ಬಿ.ರಾಮಯ್ಯನವರು ವಿಶ್ವೇಶ್ವರನ್ ಅವರ ತಂದೆ. ಅವರು ಮಹಾರಾಜ ನಾಲ್ವಡಿಯವರ ಅರಮನೆಯ ಖಾಸ್ ಬಿಡದಿಯ ಲೆಕ್ಕಿಗರಾಗಿದ್ದರು. ಮೈಸೂರು ಸಿಂಹಾಸನದ ಹೂವಿನ ಅಲಂಕಾರವನ್ನು ಇವರಿಂದಲೇ ಮಾಡಿಸಬೇಕೆಂದು ಮಹಾರಾಜರ ಆಜ್ಞೆಯಾಗಿತ್ತು. ವಿಶ್ವೇಶ್ವರನ್ ಅವರ ತಾಯಿ ವರಲಕ್ಷ್ಮಮ್ಮ ಮೈಸೂರಿನ ಅಭಿನವ ತ್ಯಾಗರಾಜ ಎಂದೇ ಹೆಸರಾಗಿದ್ದ ಸುಂದರಶಾಸ್ತ್ರಿಗಳ ಶಿಷ್ಯೆಯಾಗಿದ್ದರು. ಇವರ ನಾಲ್ಕು ಮಕ್ಕಳಲ್ಲಿ ವಿಶ್ವೇಶ್ವರನ್ ಅವರು ಕೊನೆಯವರು. ಈ ನಾಲ್ಕೂ ಮಕ್ಕಳು ಮೈಸೂರು ಸಹೋದರರೆಂದೇ ಹೆಸರಾಗಿದ್ದವರು.

‘ವೀಣೆ ನುಡಿಸುವುದು ಗಾಯನದ ಹಾಗಿರಬೇಕು’ ಎನ್ನುವುದು ವಿಶ್ವೇಶ್ವರನ್ ಅವರು ಇದುವರೆಗೆ ನಂಬಿಕೊಂಡು ನುಡಿಸಿಕೊಂಡು ಪ್ರತಿಪಾದಿಸುತ್ತಿರುವ ಸಿದ್ಧಾಂತ. ‘ಆಧ್ಯಾತ್ಮದ ಸ್ಪರ್ಶವಿಲ್ಲದ ಸಂಗೀತ ಬರಿಯ ಒಂದು ಕೈಚಳಕ’ ಎನ್ನುವುದು ಇವರ ಮಾತು. ‘ಸಂಗೀತದ ಗುರಿ ಮನರಂಜನೆಯಲ್ಲ ಅದು ದೇವರನ್ನು ಮುಟ್ಟುವ ದಾರಿ’ ಎಂಬುದು ಇವರ ವೇದಾಂತ. ‘ಸಂಗೀತವನ್ನು ಕೊಟ್ಟ ಶಾರದೆಗೂ ಮತ್ತು ಆಕೆಯನ್ನು ಆರಾಧಿಸುವ ನನಗೂ ಒಂದು ಅದ್ವೈತದಂತಹ ಸಂಬಂಧವಿದೆ’ ಎನ್ನುವುದು ಇವರ ನಂಬಿಕೆ.

ನಿಮ್ಮ ಈ ಯೌವನದ ಗುಟ್ಟೇನು ಅಂತ ಕೇಳಿದರೆ, ‘ಈ ಎಪ್ಪತ್ತು ವರ್ಷದ ವೀಣೆೆುೀಂ ನನ್ನನ್ನು ಇನ್ನೂ ತರುಣನನ್ನಾಗಿ ಇಟ್ಟಿರುವುದು’ ಎನ್ನುತ್ತಾರೆ ತೊಂಬತ್ತೆರಡು ವರ್ಷದ ಈ ಸುಂದರ ವೈಣಿಕ!

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ